ETV Bharat / international

ಅಸ್ಟ್ರಾಜೆನೆಕಾ-ಆಕ್ಸ್​ಫರ್ಡ್​​ ಕೋವಿಡ್​​ ಲಸಿಕೆ ತುರ್ತು ಬಳಕೆಗೆ ಅನುಮತಿ!

author img

By

Published : Jan 30, 2021, 5:31 PM IST

ಯುರೋಪ್​ನಲ್ಲಿ ಇದೀಗ ಮತ್ತೊಂದು ಕೋವಿಡ್​ ಲಸಿಕೆ ಬಳಕೆ ಮಾಡಲು ಅಲ್ಲಿನ ಸರ್ಕಾರ ಅನುಮತಿ ನೀಡಿದೆ.

AstraZeneca-Oxford Covid vaccine
AstraZeneca-Oxford Covid vaccine

ಬ್ರಸೆಲ್ಸ್​​(ಬೆಲ್ಜಿಯಂ): ಬ್ರಿಟನ್ ಮೂಲಕ ಅಸ್ಟ್ರೆಜೆನೆಕಾ ಫಾರ್ಮಾ ಸಂಸ್ಥೆ ಹಾಗೂ ಆಕ್ಸ್​ಫರ್ಡ್​ ವಿಶ್ವವಿದ್ಯಾಲಯ ಅಭಿವೃದ್ಧಿ ಪಡಿಸಿರುವ ಕೋವಿಡ್ ಲಸಿಕೆ ತುರ್ತು ಬಳಕೆಗೆ ಇದೀಗ ಅನುಮತಿ ನೀಡಲಾಗಿದೆ.

ಯುರೋಪಿಯನ್​​ ಕಮಿಷನ್​ ಷರತ್ತುಬದ್ಧ ಅನುಮತಿ ನೀಡಿದೆ. ಇದೇ ವಿಷಯವಾಗಿ ಮಾತನಾಡಿರುವ ಅಲ್ಲಿನ ಅಧ್ಯಕ್ಷ ಉರ್ಸುಲಾ ವಾನ್​ ಡೆರ್​ ಲೇಯೆನ್​, ಯುರೋಪಿಯನ್ನರಿಗೆ ಸುರಕ್ಷಿತ ಲಸಿಕೆ ನೀಡುವುದು ನಮ್ಮ ಆದ್ಯತೆಯಾಗಿದ್ದು, 400 ಮಿಲಿಯನ್​ ಹೆಚ್ಚುವರಿ ಡೋಸ್ ಲಭ್ಯ ಇವೆ ಎಂದಿದ್ದಾರೆ.

ಅಸ್ಟ್ರಾಜೆನೆಕಾ ಆದಷ್ಟು ಬೇಗ ಹೆಚ್ಚಿನ ಡೋಸ್ ತಯಾರಿಸಿ ಯುರೋಪಿಯನ್ನರಿಗೆ ಆದಷ್ಟು ಬೇಗ ಲಸಿಕೆ ನೀಡುವ ಉದ್ದೇಶ ಹೊಂದಿದೆ ಎಂದು ತಿಳಿದು ಬಂದಿದೆ. ಇದರ ಜತೆಗೆ ನೆರೆಹೊರೆಯ ರಾಷ್ಟ್ರಗಳಿಗೂ ಹೆಚ್ಚಿನ ಲಸಿಕೆ ನೀಡುವ ಗುರಿ ಹೊಂದಲಾಗಿದೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: ಸೆಕ್ಸ್​ ಡಾಲ್​ ಜೊತೆ ನಿಶ್ಚಿತಾರ್ಥ, ಐಫೋನ್ ಗಿಫ್ಟ್​ ನೀಡಿದ ವ್ಯಕ್ತಿ.. ಯಾವ ಕಾರಣಕ್ಕಾಗಿ ಗೊತ್ತಾ!?

ಫಿಜರ್​​/ಬಯೋಎನ್ಟೆಕ್​ ಹಾಗೂ ಮಾಡರ್ನಾ ಲಸಿಕೆ ಅನುಮತಿ ಪಡೆದುಕೊಂಡ ಬಳಿಕ ಯುರೋಪಿನಲ್ಲಿ ಲಭ್ಯವಾಗುತ್ತಿರುವ ಮೂರನೇ ಕೋವಿಡ್​​-19 ಲಸಿಕೆ ಇದಾಗಿದೆ. ಸುಮಾರು 24,000 ಜನರು ಯುಕೆ, ಬ್ರೆಜಿಲ್​, ದಕ್ಷಿಣ ಆಫ್ರಿಕಾದ ನಾಲ್ಕು ಕ್ಲಿನಿಕಲ್​ ಪ್ರಯೋಗಕ್ಕೊಳಗಾಗಿದ್ದಾರೆ. ಇದರು ಕೊರೊನಾ ತಡೆಗಟ್ಟುವಲ್ಲಿ ಸುರಕ್ಷಿತ ಹಾಗೂ ಪರಿಣಾಮಕಾರಿಯಾಗಿದೆ ಎಂದು ತಿಳಿದು ಬಂದಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.