ETV Bharat / international

ಭದ್ರತಾ ವಿಭಾಗ, ಸಿಐಎಸ್​ಒ ಮುಖ್ಯಸ್ಥರನ್ನು ಕೆಲಸದಿಂದ ತೆಗೆದು ಹಾಕಿದ ಟ್ವಿಟರ್​ ಸಿಇಒ

author img

By

Published : Jan 23, 2022, 5:19 PM IST

ಭದ್ರತಾ ವಿಭಾಗದ ಮುಖ್ಯಸ್ಥರಾದ ಪೀಟರ್ ಝಟ್ಕೊ ಸೇರಿದಂತೆ ಮುಖ್ಯ ಮಾಹಿತಿ ಅಧಿಕಾರಿ ರಿಂಕಿ ಸೇಥಿ ಅವರು ಕಂಪನಿಯನ್ನು ತೊರೆಯುತ್ತಿದ್ದಾರೆ ಎಂದು ಪರಾಗ್ ಉದ್ಯೋಗಿಗಳಿಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ..

ಟ್ವಿಟರ್ ಸಿಇಒ ಪರಾಗ್ ಅಗರವಾಲ್
ಟ್ವಿಟರ್ ಸಿಇಒ ಪರಾಗ್ ಅಗರವಾಲ್

ಸ್ಯಾನ್ ಫ್ರಾನ್ಸಿಸ್ಕೋ : ಇತ್ತೀಚೆಗಷ್ಟೇ ಟ್ವಿಟರ್‌ನ ಸಿಇಒ ಆಗಿ ಅಧಿಕಾರ ವಹಿಸಿಕೊಂಡ ಭಾರತೀಯ ಮೂಲದ ವ್ಯಕ್ತಿ ಪರಾಗ್ ಅಗರ್ವಾಲ್ ಅವರು ಕಂಪನಿಯಲ್ಲಿ ಕೆಲವು ಬದಲಾವಣೆಗಳನ್ನು ಮಾಡಲು ಮುಂದಾಗಿದ್ದಾರೆ.

ಭದ್ರತಾ ವಿಭಾಗದ ಮುಖ್ಯಸ್ಥರಾದ ಪೀಟರ್ ಝಟ್ಕೊ ಸೇರಿದಂತೆ ಮುಖ್ಯ ಮಾಹಿತಿ ಅಧಿಕಾರಿ ರಿಂಕಿ ಸೇಥಿ ಅವರು ಕಂಪನಿಯನ್ನು ತೊರೆಯುತ್ತಿದ್ದಾರೆ ಎಂದು ಪರಾಗ್ ಉದ್ಯೋಗಿಗಳಿಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ.

ಭದ್ರತಾ ವಿಭಾಗದ ಮುಖ್ಯಸ್ಥ ಪೀಟರ್ ಝಟ್ಕೊ ಈಗ ಕಂಪನಿಯಲ್ಲಿಲ್ಲ. ಸಿಐಎಸ್​ಒ ರಿಂಕಿ ಸೇಥಿ ಮುಂಬರುವ ದಿನಗಳಲ್ಲಿ ನಿರ್ಗಮಿಸಲಿದ್ದಾರೆ ಎಂಬುದನ್ನು ಟ್ವಿಟರ್ ದೃಢಪಡಿಸಿದೆ.

ಇದನ್ನೂ ಓದಿ: ಸೈಯದ್ ಮೋದಿ ಇಂಟರ್​ನ್ಯಾಷನಲ್​ ಚಾಂಪಿಯನ್ ಪಟ್ಟ ಗೆದ್ದ ಪಿ ವಿ ಸಿಂಧು

ಕಂಪನಿಯನ್ನು ಹೇಗೆ ಮುನ್ನಡೆಸಲಾಗುತ್ತಿದೆ ಮತ್ತು ಅವರ ಕೆಲಸದ ಬಗ್ಗೆ ಮೌಲ್ಯಮಾಪನ ಮಾಡಿ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ ಎಂದು ಪರಾಗ್ ಹೇಳಿದ್ದಾರೆ. ಅಲ್ಲದೇ ಅವರ ನಿರ್ಗಮನದ ಬಗ್ಗೆ ಹೆಚ್ಚಿನ ವಿವರಗಳನ್ನು ಬಹಿರಂಗಪಡಿಸಲಾಗಿಲ್ಲ ಎಂಬುದನ್ನು ಇಲ್ಲಿ ಗಮನಿಸಬೇಕಾಗಿದೆ.

ಕಳೆದ ವರ್ಷ ನವೆಂಬರ್‌ನಲ್ಲಿ ಪರಾಗ್ ಟ್ವಿಟರ್ ಸಂಸ್ಥಾಪಕ ಜಾಕ್ ಡಾರ್ಸೆ ಅವರಿಂದ ಸಿಇಒ ಆಗಿ ಅಧಿಕಾರ ವಹಿಸಿಕೊಂಡರು. ಅಂದಿನಿಂದ ಪ್ರಮುಖ ಸ್ಥಾನದಲ್ಲಿರುವವರನ್ನು ಬದಲಾವಣೆ ಮಾಡಲಾಗುತ್ತಿದೆ.

ಡಿಸೆಂಬರ್​ನಲ್ಲಿ ಪರಾಗ್​​ ಮುಖ್ಯ ವಿನ್ಯಾಸ ಅಧಿಕಾರಿ ಡಾಂಟ್ಲಿ ಡೇವಿಸ್, ಎಂಜಿನಿಯರಿಂಗ್ ವಿಭಾಗದ ಮುಖ್ಯಸ್ಥ ಮೈಕೆಲ್ ಮೊಂಟಾನೊ ಅವರನ್ನು ವಜಾ ಮಾಡಿದ್ದರು.

ಜಾಹೀರಾತು: ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.