ETV Bharat / international

ಚೀನಾ-ಇಥಿಯೋಪಿಯಾ ಸಹಕಾರವನ್ನು ಕೋರುತ್ತದೆ: ಕ್ಸಿ ಜಿನ್‌ಪಿಂಗ್

author img

By

Published : Nov 24, 2020, 6:26 PM IST

ಚೀನಾ ಮತ್ತು ಇಥಿಯೋಪಿಯಾ ರಾಷ್ಟ್ರಗಳಿಗೆ ಹೆಚ್ಚಿನ ಪ್ರಯೋಜವಾಗುವ ರೀತಿ ಮತ್ತು ಚೀನಾ-ಆಫ್ರಿಕಾ ಸಹಕಾರವನ್ನು ಹೆಚ್ಚಿಸಲು ಚೀನಾದ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಇಥಿಯೋಪಿಯಾದ ಸಾಹ್ಲೆ-ವರ್ಕ್ ಜೆವ್ಡೆ ಅವರೊಂದಿಗೆ ಕೆಲಸ ಮಾಡಲು ಸಿದ್ಧವಿರುವುದಾಗಿ ಹೇಳಿದ್ದಾರೆ.

ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್
ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್

ಬೀಜಿಂಗ್: ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರು ಇಥಿಯೋಪಿಯಾದ ಸಾಹ್ಲೆ-ವರ್ಕ್ ಜೆವ್ಡೆ ಅವರೊಂದಿಗೆ ಚೀನಾ-ಆಫ್ರಿಕಾ ನಡುವಿನ ಸಂಬಂಧ, ಬೆಲ್ಟ್ ಮತ್ತು ರಸ್ತೆ ಅಭಿವೃದ್ಧಿ ಹಾಗೂ ಎರಡು ದೇಶದ ಜನರಿಗೆ ಹೆಚ್ಚಿನ ಪ್ರಯೋಜನವಾಗುವ ರೀತಿ ಕೆಲಸ ಮಾಡಲು ಸಿದ್ಧವಿರುವುದಾಗಿ ಹೇಳಿದ್ದಾರೆ.

ಉಭಯ ದೇಶಗಳ ನಡುವೆ ರಾಜತಾಂತ್ರಿಕ ಸಂಬಂಧಗಳನ್ನು ಸ್ಥಾಪಿಸಿದ 50ನೇ ವರ್ಷಾಚರಣೆಯ ಅಭಿನಂದನಾ ಸಂದೇಶದಲ್ಲಿ ಜೆವ್ಡೆ ಅವರಿಗೆ ಕ್ಸಿ ಈ ಹೇಳಿಕೆ ನೀಡಿದ್ದಾರೆ ಎಂದು ಕ್ಸಿನ್ಹುವಾ ಸುದ್ದಿ ಸಂಸ್ಥೆ ವರದಿ ಮಾಡಿದೆ.

ಚೀನಾ-ಇಥಿಯೋಪಿಯಾ ರಾಜತಾಂತ್ರಿಕ ಸಂಬಂಧಗಳನ್ನು ಸ್ಥಾಪಿಸಿದ ಅರ್ಧ ಶತಮಾನದಿಂದಲೂ ಉಭಯ ದೇಶಗಳ ಸ್ನೇಹವು ಬಲಗೊಳ್ಳುತ್ತಿದೆ ಎಂದು ಕ್ಸಿ ತಮ್ಮ ಸಂದೇಶದಲ್ಲಿ ತಿಳಿಸಿದ್ದಾರೆ.

ಉಭಯ ಪಕ್ಷಗಳು ತಮ್ಮ ಪ್ರಮುಖ ಹಿತಾಸಕ್ತಿಗಳು ಮತ್ತು ಕಾಳಜಿಗಳ ಕುರಿತು ಪರಸ್ಪರ ತಿಳಿವಳಿಕೆ ಹಾಗೂ ಬೆಂಬಲವನ್ನು ನೀಡಿವೆ. ಅಂತಾರಾಷ್ಟ್ರೀಯ ಮತ್ತು ಪ್ರಾದೇಶಿಕ ವ್ಯವಹಾರಗಳಲ್ಲಿ ನಿಕಟವಾಗಿ ಸಮನ್ವಯ ಸಾಧಿಸಿವೆ ಎಂದು ಅವರು ಹೇಳಿದರು.

ಕೋವಿಡ್​-19 ಸಾಂಕ್ರಾಮಿಕ ರೋಗ ಹರಡಿದಾಗಿನಿಂದ, ಚೀನಾ ಮತ್ತು ಇಥಿಯೋಪಿಯಾಗಳು ಕಷ್ಟದ ಸಮಯದಲ್ಲಿ ಪರಸ್ಪರ ಸಹಾಯ ಮಾಡಿವೆ. ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಡುವಲ್ಲಿ ಚೀನಾ-ಆಫ್ರಿಕಾ ಏಕತೆಗೆ ಉದಾಹರಣೆಯಾಗಿದೆ ಎಂದು ಚೀನಾದ ಅಧ್ಯಕ್ಷರು ಹೇಳಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.