ETV Bharat / international

ನ್ಯೂಜಿಲ್ಯಾಂಡ್​​​​ ಮಸೀದಿ ಮೇಲಿನ ದಾಳಿ:  ಹಂತಕನ ಶಿಕ್ಷೆ ಮುಂದೂಡಿದ ನ್ಯಾಯಾಲಯ

author img

By

Published : May 28, 2020, 7:22 PM IST

Sentencing of NZ mosque attack accused postponed
ನ್ಯೂಝಿಲ್ಯಾಂಡ್​ ಮಸೀದಿ ದಾಳಿ

ಕಳೆದ ವರ್ಷ ಮಾರ್ಚ್​ 26 ರಂದು ನ್ಯೂಜಿಲ್ಯಾಂಡ್​​ನ ಕ್ರೈಸ್ಟ್‌ಚರ್ಚ್ ನಗರದ ಎರಡು ಮಸೀದಿಗಳ ಮೇಲೆ ದಾಳಿ ಮಾಡಿದ್ದ ಆಸ್ಟ್ರೇಲಿಯಾದ ಭಯೋತ್ಪಾದಕ ಬ್ರೆಂಟನ್ ಟ್ಯಾರಂಟ್ ಎಂಬಾತ ಶಿಕ್ಷೆಯನ್ನು ಕೋವಿಡ್​ ಕಾರಣದಿಂದ ನ್ಯಾಯಾಲಯ ಮುಂದೂಡಿದೆ.

ವೆಲ್ಲಿಂಗ್ಟನ್ : ಕಳೆದ ವರ್ಷ ನ್ಯೂಜಿಲ್ಯಾಂಡ್​​ನ ಎರಡು ಮಸೀದಿಗಳ ಮೇಲೆ ದಾಳಿ ನಡೆಸಿದ ಆರೋಪಿ ಆಸ್ಟ್ರೇಲಿಯಾ ಪ್ರಜೆಯ ಶಿಕ್ಷೆಯನ್ನು ಕೋವಿಡ್​ ಕಾರಣದಿಂದ ಮುಂದೂಡಲಾಗಿದೆ.

2019 ಮಾರ್ಚ್​ 26 ರಂದು ಕ್ರೈಸ್ಟ್‌ಚರ್ಚ್ ನಗರದ ಎರಡು ಮಸೀದಿಗಳ ಮೇಲೆ ಆಸ್ಟ್ರೇಲಿಯಾದ ಭಯೋತ್ಪಾದಕ ಬ್ರೆಂಟನ್ ಟ್ಯಾರಂಟ್ ಎಂಬಾತ ದಾಳಿ ಮಾಡಿದ್ದ. ಘಟನೆಯಲ್ಲಿ 51 ಜನ ಮೃತಪಟ್ಟಿದ್ದರು ಮತ್ತು 40 ಜನ ತೀವ್ರವಾಗಿ ಗಾಯಗೊಂಡಿದ್ದರು. ಇದು ನ್ಯೂಜಿಲ್ಯಾಂಡ್​​​​ನ ಇತಿಹಾಸದಲ್ಲೇ ಮೊಟ್ಟ ಮೊದಲ ಭಯೋತ್ಪಾದಕ ದಾಳಿಯಾಗಿತ್ತು.

ಘಟನೆಯ ಬಳಿಕ ಬಂಧಿತನಾದ ಆರೋಪಿ ಬ್ರೆಂಟನ್ ಟ್ಯಾರಂಟ್ ವಿಚಾರಣೆ ನಡೆಸಿದ ನ್ಯಾಯಾಲಯ ಜೂನ್​ 2 ಕ್ಕೆ ಶಿಕ್ಷೆಯನ್ನು ಕಾಯ್ದಿರಿಸಿತ್ತು. ಆದರೆ, ಆ ದಿನ ಲಾಕ್​ ಡೌನ್​​ನಿಂದಾಗಿ ದಾಳಿಯಲ್ಲಿ ಮೃತಪಟ್ಟವರ ಕುಟುಂಬಸ್ಥರಿಗೆ ಹಾಜರಾಗಲು​ ಅಸಾಧ್ಯವಾಗಿತ್ತು. ಈ ಹಿನ್ನೆಲೆಯಲ್ಲಿ ನ್ಯಾಯಮೂರ್ತಿ ಕ್ಯಾಮರೂನ್ ಮಾಂಡರ್ ವಿಶೇಷವಾಗಿ ಆದೇಶಿಸಿ ಲಾಕ್ ಡೌನ್​ ಸಡಿಲಿಕೆ ಮಾಡಿಸಿದ್ದಾರೆ. ಆದರೆ, ಇನ್ನೂ ಕೆಲವರು ಹೊರ ದೇಶಗಳಲ್ಲೇ ಇದ್ದು ಅವರಿಗೆ ಆಗಮಿಸಲು ಅಸಾಧ್ಯವಾದ ಹಿನ್ನೆಲೆ ಶಿಕ್ಷೆಯ ದಿನಾಂಕವನ್ನೇ ಮುಂದೂಡಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.