ನನ್ನ ಕೊಂದರೂ ಸರಿ ಆಫ್ಘನ್​ ತೊರೆಯಲ್ಲ: ಪಟ್ಟು ಹಿಡಿದ ಏಕೈಕ ಹಿಂದೂ ಅರ್ಚಕ

author img

By

Published : Aug 17, 2021, 9:33 PM IST

Updated : Aug 17, 2021, 9:43 PM IST

ಪಟ್ಟು ಹಿಡಿದ ಏಕೈಕ ಹಿಂದೂ ಅರ್ಚಕ

ಆಫ್ಘನ್​ನಲ್ಲಿ ಉಗ್ರರ ಭೀತಿಯಿಂದ ಜನರು ದೇಶ ತೊರೆಯುತ್ತಿದ್ದಾರೆ. ಆದರೆ, ಹಿಂದೂ ಅರ್ಚಕನೊಬ್ಬ ನನ್ನ ಪ್ರಾಣ ತೆಗೆದರೂ ಇಲ್ಲಿಂದ ಕದಡಲ್ಲ ಎಂದು ಪಟ್ಟು ಹಿಡಿದಿದ್ದಾರೆ.

ಕಾಬೂಲ್ (ಅಫ್ಘಾನಿಸ್ತಾನ): ಉಗ್ರರ ಕಪಿಮುಷ್ಠಿಯಲ್ಲಿರುವ ಆಫ್ಘನ್​ನಿಂದ ಜನತೆ ಬೇರೆಡೆಗೆ ತೆರಳಲು ಹೆಣಗಾಡುತ್ತಿದ್ದಾರೆ. ಆದರೆ, ಕಾಬೂಲ್​ನಲ್ಲಿರುವ ಹಿಂದೂ ಅರ್ಚಕನೊಬ್ಬ ನಾನು ದೇಶ ಬಿಟ್ಟು ಎಲ್ಲಿಯೂ ಹೋಗಲ್ಲ ಎಂದು ಪಟ್ಟು ಹಿಡಿದಿದ್ದಾರೆ.

  • Pandit Rajesh Kumar, the priest of Rattan Nath Temple in Kabul:

    "Some Hindus have urged me to leave Kabul & offered to arrange for my travel and stay.

    But my ancestors served this Mandir for hundreds of years. I will not abandon it. If Taliban kiIIs me, I consider it my Seva"

    — Bharadwaj (@BharadwajSpeaks) August 15, 2021 " class="align-text-top noRightClick twitterSection" data=" ">

ರತನ್ ನಾಥ್ ದೇವಾಲಯದ ಅರ್ಚಕ ಪಂಡಿತ್ ರಾಜೇಶ್ ಕುಮಾರ್ ಎಂಬುವರು ಇಂಥ ದೃಢ ನಿರ್ಧಾರ ಕೈಗೊಂಡಿದ್ದಾರೆ. ಆಫ್ಘನ್​ನಲ್ಲಿ ತಾಲಿಬಾನ್‌ಗಳು ತಮ್ಮ ಆಕ್ರಮಣ ಮುಂದುವರಿಸಿದ್ದು, ಕುಮಾರ್ ಅವ​ರನ್ನು ದೇಶ ತೊರೆಯುವಂತೆ ಒತ್ತಾಯಿಸಲಾಗಿದೆ. ಅಲ್ಲಿರುವ ಹಿಂದೂಗಳು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಗೊಳ್ಳಲು ವ್ಯವಸ್ಥೆ ಮಾಡಿಕೊಳ್ಳುತ್ತಿದ್ದಾರೆ. ಆದರೆ, ದೇವರ ಬಗ್ಗೆ ಅಚಲ ಭಕ್ತಿ ಹೊಂದಿರುವ ಕುಮಾರ್​, ನಾನು ದೇಗುಲ ಬಿಟ್ಟು ತೆರಳಲು ಸಿದ್ಧರಿಲ್ಲ ಎಂದಿದ್ದಾರೆ.

ಇದನ್ನೂ ಓದಿ: ತಬ್ಬಲಿ ಮಗುವಿನ ಕೂಗು ಕೇಳಿಸದೇ ಈ ಕಲ್ಲು ಹೃದಯಕೆ..?: ಕಾಬೂಲ್ ವಿಮಾನ ನಿಲ್ದಾಣದಲ್ಲಿ ಕರುಣಾಜನಕ ಚಿತ್ರ!

ಈ ಬಗ್ಗೆ ಪ್ರತಿಕ್ರಿಯಿಸಿರುವ ರಾಜೇಶ್ ಕುಮಾರ್, ಕೆಲವು ಹಿಂದೂಗಳು ಕಾಬೂಲ್ ಬಿಟ್ಟು ಹೋಗುವಂತೆ ನನ್ನನ್ನು ಒತ್ತಾಯಿಸಿದ್ದಾರೆ. ನನ್ನ ಪ್ರಯಾಣಕ್ಕೆ ಮತ್ತು ಉಳಿಯಲು ಅವಕಾಶ ಮಾಡಿಕೊಡುವುದಾಗಿ ಹೇಳಿದರು. ಆದರೆ, ನನ್ನ ಪೂರ್ವಜರು ನೂರಾರು ವರ್ಷಗಳಿಂದ ಈ ಮಂದಿರಕ್ಕೆ ಸೇವೆ ಸಲ್ಲಿಸಿದ್ದಾರೆ. ನಾನು ಅದನ್ನು ಕೈಬಿಡುವುದಿಲ್ಲ. ತಾಲಿಬಾನ್ ನನ್ನನ್ನು ಕೊಂದರೆ, ನಾನು ಅದನ್ನು ನನ್ನ ಸೇವೆ ಎಂದು ಪರಿಗಣಿಸುತ್ತೇನೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಆಫ್ಘನ್​ ಬಿಕ್ಕಟ್ಟು: ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಮಹತ್ವದ ಸಭೆ

ಭಾನುವಾರ ತಾಲಿಬಾನ್ ಉಗ್ರರು ಅಫ್ಘಾನಿಸ್ತಾನದ ರಾಜಧಾನಿ ಕಾಬೂಲ್‌ಗೆ ದಾಳಿ ಮಾಡುತ್ತಿದ್ದಂತೆ ಅಧ್ಯಕ್ಷ ಅಶ್ರಫ್ ಘನಿ ಪಲಾಯನ ಮಾಡಿದರು. ಬಳಿಕ, ಜೀವ ಬೆದರಿಕೆಯಿಂದ ಸಾವಿರಾರು ಜನರು ದೇಶ ತೊರೆಯಲು ಮುಂದಾದರು.

Last Updated :Aug 17, 2021, 9:43 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.