ETV Bharat / international

ಧ್ವಂಸಗೊಂಡ ಹಿಂದೂ ದೇವಾಲಯ ಪುನರ್​ ನಿರ್ಮಿಸುವಂತೆ ಪಾಕ್​ ಸುಪ್ರೀಂ ಕೋರ್ಟ್ ಆದೇಶ!

author img

By

Published : Feb 9, 2021, 8:30 PM IST

ಮೂಲಭೂತವಾದಿಗಳ ಗುಂಪು ಧ್ವಂಸಗೊಳಿಸಿದ ಐತಿಹಾಸಿಕ ಹಿಂದೂ ದೇವಾಲಯವನ್ನು ಪುನರ್​ ನಿರ್ಮಿಸುವಂತೆ ಪಾಕ್​ ಸುಪ್ರೀಂ ಕೋರ್ಟ್ ಖೈಬರ್-ಪಖ್ತುಖ್ವಾ ಸರ್ಕಾರಕ್ಕೆ ಆದೇಶಿಸಿದೆ.

Pak court orders rebuilding of vandalised temple, seeks timeline for work
ದೇವಾಲಯ ಪುನರ್​ ನಿರ್ಮಿಸುವಂತೆ ಪಾಕ್​ ಸುಪ್ರೀಂ ಕೋರ್ಟ್ ಆದೇಶ

ಇಸ್ಲಾಮಾಬಾದ್: ಉದ್ರಿಕ್ತರ ಗುಂಪು ಧ್ವಂಸಗೊಳಿಸಿದ ಶತಮಾನದಷ್ಟು ಹಳೆಯ ಹಿಂದೂ ದೇವಾಲಯವನ್ನು ಪುನರ್​ ನಿರ್ಮಾಣ ಮಾಡುವಂತೆ ಖೈಬರ್-ಪಖ್ತುಖ್ವಾ ಸರ್ಕಾರಕ್ಕೆ ಪಾಕಿಸ್ತಾನ ಸುಪ್ರೀಂ ಕೋರ್ಟ್ ಆದೇಶಿಸಿದೆ.

ಕಳೆದ ಡಿಸೆಂಬರ್‌ನಲ್ಲಿ ಮೂಲಭೂತವಾದಿ ಜಂಇಯ್ಯತುಲ್​ ಉಲೆಮಾ-ಎ-ಇಸ್ಲಾಂ ಪಕ್ಷ (ಫಝಲುರ್ರಹ್ಮಾನ್​ ಗುಂಪು)ದ ಸದಸ್ಯರು ಖೈಬರ್ ಪಖ್ತುಖ್ವಾ ಪ್ರಾಂತ್ಯ ಕರಾಕ್ ಜಿಲ್ಲೆಯ ಟೆರ್ರಿ ಗ್ರಾಮದ ಹಿಂದೂ ದೇವಾಲಯದ ಮೇಲೆ ದಾಳಿ ನಡೆಸಿ ಧ್ವಂಸಗೊಳಿಸಿದ್ದರು. ಘಟನೆಯನ್ನು ಮಾನವ ಹಕ್ಕುಗಳ ಕಾರ್ಯಕರ್ತರು ಮತ್ತು ಅಲ್ಪಸಂಖ್ಯಾತ ಹಿಂದೂ ಸಮುದಾಯದ ಮುಖಂಡರು ತೀವ್ರವಾಗಿ ಖಂಡಿಸಿದ್ದರು. ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ ಸುಪ್ರೀಂ ಕೋರ್ಟ್, ಸುಮೋಟೊ ಪ್ರಕರಣ ದಾಖಲಿಸಿಕೊಂಡಿತ್ತು.

ಓದಿ : ಇಸ್ರೇಲಿ ಸೇನಾ ಕ್ರಮ ಕುರಿತು ತನಿಖೆ ನಡೆಸುವ ಅಧಿಕಾರ ಅಂತಾರಾಷ್ಟ್ರೀಯ ಅಪರಾಧ ಕೋರ್ಟ್‌ಗೆ ಇಲ್ಲ

ಸುಮೋಟೊ ಪ್ರಕರಣದ ವಿಚಾರಣೆ ಮುಖ್ಯ ನ್ಯಾಯಮೂರ್ತಿ ಗುಲ್ಜಾರ್ ಅಹ್ಮದ್ ನೇತೃತ್ವದ ಮೂವರು ನ್ಯಾಯಾಧೀಶರ ಪೀಠದಲ್ಲಿ ನಡೆಯಿತು. ತೀರ್ಪು ಪ್ರಕಟಿಸಿದ ನ್ಯಾಯಾಲಯ, ತಕ್ಷಣ ದೇವಾಲಯವನ್ನು ಪುನರ್​ ನಿರ್ಮಾಣ ಮಾಡುವಂತೆ ಖೈಬರ್-ಪಖ್ತುಖ್ವಾ ಸರ್ಕಾರಕ್ಕೆ ಆದೇಶಿಸುರುವುದಾಗಿ ದಿ ಎಕ್ಸ್​ಪ್ರೆಸ್ ಟ್ರಿಬ್ಯೂನ್ ವರದಿ ಮಾಡಿದೆ.

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.