ETV Bharat / international

ಪಾಕ್​ ಮಿಲಿಟರಿಯಲ್ಲಿ ಮಹತ್ವದ ಬದಲಾವಣೆ: ಐಎಸ್​​ಐ ಮುಖ್ಯಸ್ಥ ಸ್ಥಾನಕ್ಕೆ ಹೊಸಬರ ನೇಮಕ

author img

By

Published : Oct 6, 2021, 6:43 PM IST

ದಿಢೀರ್​ ಬೆಳವಣಿಗೆವೊಂದರಲ್ಲಿ ಪಾಕಿಸ್ತಾನದ ಮಿಲಿಟರಿಯಲ್ಲಿ ಮಹತ್ವದ ಬದಲಾವಣೆ ಮಾಡಲಾಗಿದ್ದು, ಐಎಸ್​ಐ ಮುಖ್ಯಸ್ಥ ಸ್ಥಾನಕ್ಕೆ ಹೊಸಬರ ನೇಮಕ ಮಾಡಲಾಗಿದೆ.

Lt Gen Nadeem Anjum
Lt Gen Nadeem Anjum

ಇಸ್ಲಾಮಾಬಾದ್​​(ಪಾಕಿಸ್ತಾನ): ಪಾಕಿಸ್ತಾನ ಮಿಲಿಟರಿಯಲ್ಲಿ ದಿಢೀರ್​ ಮಹತ್ವದ ಬದಲಾವಣೆ ಮಾಡಲಾಗಿದ್ದು, ಅಲ್ಲಿನ ಗುಪ್ತಚರ ಇಲಾಖೆ ಐಎಸ್​ಐನ ಮುಖ್ಯಸ್ಥ ಲೆಫ್ಟಿನೆಂಟ್​ ಜನರಲ್​​​ ಸ್ಥಾನದಲ್ಲಿ ಬದಲಾವಣೆ ಮಾಡಿ, ಹೊಸಬರ ನೇಮಕ ಮಾಡಲಾಗಿದೆ.

ಲೆಫ್ಟಿನೆಂಟ್​​ ಜನರಲ್​ ಫೈಜ್​​ ಹಮೀದ್​​ ಅವರನ್ನ ಆ ಸ್ಥಾನದಿಂದ ವರ್ಗಾವಣೆ ಮಾಡಿ ಇದೀಗ ಪೇಶಾವರ್​ ಕಾರ್ಪ್ಸ್​​ ಕಮಾಂಡರ್​ ಆಗಿ ನೇಮಕ ಮಾಡಲಾಗಿದೆ. ಲೆಫ್ಟಿನೆಂಟ್​​​​​ ಜನರಲ್​​​ ನದೀಮ್​​ ಅಂಜುಮ್​ ಇದೀಗ ISI ಮುಖ್ಯಸ್ಥರಾಗಿ ಆಯ್ಕೆಯಾಗಿದ್ದಾರೆ. ಇವರು ಕರಾಚಿ ಕಾರ್ಪ್ಸ್​​​ನಲ್ಲಿ ಕಮಾಂಡರ್​ ಆಗಿ ಸೇವೆ ಸಲ್ಲಿಸಿರುವ ಅನುಭವ ಹೊಂದಿದ್ದಾರೆ.

ಇದನ್ನೂ ಓದಿರಿ: ವೈಫಲ್ಯದಿಂದ ಕಣ್ಣೀರಿಟ್ಟಿದ್ದ ಕಿಶನ್​ಗೆ ಆತ್ಮವಿಶ್ವಾಸ ತುಂಬಿದ್ದ ಕೊಹ್ಲಿ.. ಲಯ ಕಂಡುಕೊಂಡ ಯಂಗ್​​ ಪ್ಲೇಯರ್​!

ಪಾಕ್​ ಸೇನೆಯ ಲೆಫ್ಟಿನೆಂಟ್​ ಜನರಲ್​ ಮೊಹಮ್ಮದ್​ ಅಮೀರ್​ ಅವರನ್ನ ಗುಜ್ರಾನ್​ ವಾಲಾ ಕಾರ್ಪ್ಸ್ ಕಮಾಂಡರ್​ ಆಗಿ ಹಾಗೂ ಲೆಫ್ಟಿನೆಂಟ್​​ ಜನರಲ್​ ಅಸಿಮ್​​ ಅವರನ್ನ ಮಾಸ್ಟರ್​ ಜನರಲ್​ ಆಗಿ ನೇಮಕ ಮಾಡಿ ಆದೇಶ ಹೊರಡಿಸಲಾಗಿದೆ. 2019ರಲ್ಲಿ ಹಮೀದ್​​​ ಐಎಸ್​ಐ ಮುಖ್ಯಸ್ಥರಾಗಿ ನೇಮಕಗೊಂಡಿದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.