ETV Bharat / international

ದಿ.ಬಂಗಬಂಧುಗೆ 'ಗಾಂಧಿ ಶಾಂತಿ ಪ್ರಶಸ್ತಿ' ನೀಡಿದ ಭಾರತಕ್ಕೆ ಕೃತಜ್ಞತೆ ಸಲ್ಲಿಸಿದ ಬಾಂಗ್ಲಾ ಸರ್ಕಾರ

author img

By

Published : Mar 23, 2021, 9:21 AM IST

ಬಂಗಬಂಧು ಅವರಿಗೆ ಮರಣೋತ್ತರವಾಗಿ ಗಾಂಧಿ ಶಾಂತಿ ಪ್ರಶಸ್ತಿ ನೀಡಲು ಭಾರತ ಸರ್ಕಾರ ನಿರ್ಧರಿಸಿರುವುದು ನಮ್ಮ ದೇಶದ ಜನರಿಗೆ ಸಂದ ಗೌರವವಾಗಿದೆ ಎಂದು ಬಾಂಗ್ಲಾ ಸರ್ಕಾರ ಹೇಳಿದೆ.

Bangabandhu
ದಿ.ಬಂಗಬಂಧು ಅವರಿಗೆ 'ಗಾಂಧಿ ಪ್ರಶಸ್ತಿ'

ಢಾಕಾ: ಬಾಂಗ್ಲಾದೇಶದ ಪಿತಾಮಹ ದಿವಂಗತ ಬಂಗಬಂಧು ಶೇಖ್ ಮುಜಿಬುರ್ ರಹಮಾನ್ ಅವರಿಗೆ 2020ರ ಸಾಲಿನ 'ಗಾಂಧಿ ಶಾಂತಿ ಪ್ರಶಸ್ತಿ' ನೀಡಿ ಗೌರವಿಸುತ್ತಿರುವ ಭಾರತಕ್ಕೆ ಬಾಂಗ್ಲಾ ಸರ್ಕಾರ ಕೃತಜ್ಞತೆ ಅರ್ಪಿಸಿದೆ.

ಬಾಂಗ್ಲಾದ ಮಾಜಿ ಅಧ್ಯಕ್ಷರೂ, ಬಾಂಗ್ಲಾದೇಶದ ಪ್ರಧಾನಿ ಶೇಖ್ ಹಸೀನಾ ಅವರ ತಂದೆಯೂ ಆಗಿರುವ ಬಂಗಬಂಧು ಅವರಿಗೆ ಮರಣೋತ್ತರವಾಗಿ ಗಾಂಧಿ ಶಾಂತಿ ಪ್ರಶಸ್ತಿ ನೀಡಲು ಭಾರತ ಸರ್ಕಾರ ನಿರ್ಧರಿಸಿರುವುದು ನಮ್ಮ ದೇಶದ ಜನರಿಗೆ ಸಂದ ಗೌರವವಾಗಿದೆ. ಈ ಪ್ರಶಸ್ತಿಯು ವೃದ್ಧಿಯಾಗುತ್ತಿರುವ ಭಾರತ-ಬಾಂಗ್ಲಾ ಸಂಬಂಧಕ್ಕೆ ಸಾಕ್ಷಿಯಾಗಿದೆ ಎಂದು ಬಾಂಗ್ಲಾ ಸರ್ಕಾರ ಹೇಳಿದೆ.

ಹೆಚ್ಚಿನ ಓದಿಗೆ: ಬಾಂಗ್ಲಾ ಪಿತಾಮಹ ಬಂಗಬಂಧು ಶೇಖ್​ಗೆ ಒಲಿದ 2020ರ ಗಾಂಧಿ ಶಾಂತಿ ಪ್ರಶಸ್ತಿ

1995ರಲ್ಲಿ ಗಾಂಧೀಜಿಯ 125ನೇ ಜನ್ಮ ದಿನಾಚರಣೆಯ ನಿಮಿತ್ತ ಭಾರತ ಸರ್ಕಾರ ವಿವಿಧ ದೇಶಗಳಲ್ಲಿನ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರಿಗೆ ನೀಡಲು ಆರಂಭಿಸಿತು. 2019ನೇ ಸಾಲಿನ ಗಾಂಧಿ ಶಾಂತಿ ಪ್ರಶಸ್ತಿಗೆ ಒಮನ್​ನ ದಿವಂಗತ ಸುಲ್ತಾನ್ ಕಬೂಸ್ ಅವರು ಆಯ್ಕೆಯಾಗಿರುವುದಾಗಿ ಕೇಂದ್ರ ಸಂಸ್ಕೃತಿ ಸಚಿವಾಲಯ ತಿಳಿಸಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.