ETV Bharat / international

ಚೀನಾ ಕೋವಿಡ್​ ಲಸಿಕೆ ಬಿಟ್ಟು ಭಾರತದ ವ್ಯಾಕ್ಸಿನ್​ ಬಳಕೆ ಮಾಡಲು ಲಂಕಾ ನಿರ್ಧಾರ!

author img

By

Published : Feb 26, 2021, 9:53 PM IST

ಭಾರತದಲ್ಲೂ ಕೋವಿಡ್ ವಿರುದ್ಧ ಹೋರಾಡಲು ಎರಡು ವ್ಯಾಕ್ಸಿನ್ ಅಭಿವೃದ್ಧಿಗೊಂಡಿದ್ದು, ಶ್ರೀಲಂಕಾದಲ್ಲಿ ಇದೇ ಲಸಿಕೆ ಬಳಕೆ ಮಾಡಲು ನಿರ್ಧರಿಸಲಾಗಿದೆ.

Sri lanka news
Sri lanka news

ಕೊಲಂಬೊ: ಮಹಾಮಾರಿ ಕೊರೊನಾ ವೈರಸ್​ ವಿರುದ್ಧ ಹೋರಾಡಲು ಭಾರತದಲ್ಲಿ ಈಗಾಗಲೇ ಎರಡು ಲಸಿಕೆ ಉತ್ಪಾದನೆಯಾಗುತ್ತಿದ್ದು, ಭೂತಾನ್, ಬಾಂಗ್ಲಾ, ನೇಪಾಳ, ಬ್ರೇಜಿಲ್​ ಸೇರಿ ಅನೇಕ ದೇಶಗಳಿಗೆ ಈ ಲಸಿಕೆ ರವಾನೆಯಾಗಿದ್ದು, ಇದೀಗ ಶ್ರೀಲಂಕಾದಿಂದ ಮತ್ತೊಂದು ನಿರ್ಧಾರ ಹೊರಬಿದ್ದಿದೆ.

ಲಂಕಾದಲ್ಲಿ ಚೀನಾದಿಂದ ಅಭಿವೃದ್ಧಿಗೊಂಡಿರುವ ಸಿನೋಫಾರ್ಮ್‌ನ ಕೋವಿಡ್​-19 ಬದಲಿಗೆ ಆಕ್ಸ್​ಫರ್ಡ್​​​ ಅಸ್ಟ್ರಾಜೆನೆಕಾ ಕೋವಿಡ್ ಲಸಿಕೆ ಬಳಕೆ ಮಾಡಲು ನಿರ್ಧರಿಸಿದ್ದು, ಅದಕ್ಕೆ ಸಂಬಂಧಿಸಿದಂತೆ ಅಲ್ಲಿನ ವಕ್ತಾರರು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ಬರೋಬ್ಬರಿ 35 ಕೆಜಿ ಉಣ್ಣೆ ಹೊತ್ತು ಬದುಕುಳಿದ ಕಾಡು ಕುರಿ!

14 ಮಿಲಿಯನ್​​ ಜನರಿಗೆ ಈ ಕೋವಿಡ್ ಲಸಿಕೆ ನೀಡಲು ನಿರ್ಧರಿಸಿರುವುದಾಗಿ ತಿಳಿಸಿದ್ದು, ಚೀನಾದ ಲಸಿಕೆ ಸಿನೋಫಾರ್ಮ್​ನ ಲಸಿಕೆ ಮೂರನೇ ಹಂತದ ಕ್ಲಿನಿಕಲ್ ಪ್ರಯೋಗ ಪೂರ್ಣಗೊಳಿಸಿಲ್ಲ ಎಂದು ಕ್ಯಾಬಿನೆಟ್​ ಸಹ ವಕ್ತಾರ ಡಾ. ರಮೇಶ್ ಪತಿರಾನಾ ತಿಳಿಸಿದ್ದಾರೆ. ಸಿರಂ ಇನ್ಸ್​ಟಿಟ್ಯೂಟ್​ ಆಫ್​ ಇಂಡಿಯಾದ ಲಸಿಕೆ ಮೇಲೆ ಶ್ರೀಲಂಕಾ ಹೆಚ್ಚಾಗಿ ಅವಲಂಬಿತವಾಗಿದೆ ಎಂದು ಅವರು ತಿಳಿಸಿದ್ದು, ಅದನ್ನ ಬಳಕೆ ಮಾಡಲು ನಿರ್ಧರಿಸಿದ್ದಾಗಿ ಹೇಳಿದ್ದಾರೆ.

ಶ್ರೀಲಂಕಾ ಕ್ಯಾಬಿನೆಟ್​ 10 ಮಿಲಿಯನ್ ಡೋಸ್​ ಮೇಡ್ ಇನ್ ಇಂಡಿಯಾದ ಲಸಿಕೆ ಬಳಕೆ ಮಾಡಲು ನಿರ್ಧರಿಸಿದ್ದು, ಅದಕ್ಕಾಗಿ 52.2 ಮಿಲಿಯನ್​ ಡಾಲರ್​ ರೂ. ಬಳಕೆ ಮಾಡಿದೆ. ಚೀನಾ ನಿರ್ಮಿತ ಲಸಿಕೆಗಳ ಬಗ್ಗೆ ಶ್ರೀಲಂಕಾ ಮಾತ್ರವಲ್ಲ ಈ ಹಿಂದೆ ಬ್ರೆಜಿಲ್​ ಕೂಡ ಕಳವಳ ವ್ಯಕ್ತಪಡಿಸಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.