ETV Bharat / international

ವಿಮಾನದಿಂದ ಜಾರಿಬಿದ್ದ ಅಫ್ಘಾನ್ ಪ್ರಜೆಗಳು..ಭಯಾನಕ ವಿಡಿಯೋ!

author img

By

Published : Aug 16, 2021, 3:37 PM IST

Updated : Aug 16, 2021, 10:31 PM IST

ಅಫ್ಘಾನ್​ನಲ್ಲಿ ತಾಲಿಬಾನ್​ ಉಗ್ರರ ಅಟ್ಟಹಾಸದಿಂದಾಗಿ ಪರಿಸ್ಥಿತಿ ಬಿಗಡಾಯಿಸುತ್ತಿದೆ. ಉಗ್ರರಿಗೆ ಹೆದರಿ ಜನರು ಊರುಗಳನ್ನು ತೊರೆಯುತ್ತಿದ್ದು, ಪ್ರಾಣ ಉಳಿಸಿಕೊಳ್ಳುವುದಕ್ಕೆ ಪರದಾಡುತ್ತಿದ್ದಾರೆ.

ವಿಮಾನದಿಂದ ಜಾರಿಬಿದ್ದ ಅಫ್ಘಾನ್ ಪ್ರಜೆಗಳು..ಭಯಾನಕ ವಿಡಿಯೋ!
ವಿಮಾನದಿಂದ ಜಾರಿಬಿದ್ದ ಅಫ್ಘಾನ್ ಪ್ರಜೆಗಳು..ಭಯಾನಕ ವಿಡಿಯೋ!

ಕಾಬೂಲ್: ಅಘ್ಘಾನಿಸ್ತಾನದಲ್ಲಿ ಕ್ಷಣದಿಂದ ಕ್ಷಣಕ್ಕೆ ಪರಿಸ್ಥಿತಿ ಹದಗೆಡುತ್ತಿದ್ದು, ತಾಲಿಬಾನ್​ನಗಳ ಅಟ್ಟಹಾಸಕ್ಕೆ ಕಾಬೂಲ್​ ಅಕ್ಷರಶಃ ನರಕದಂತಾಗಿದೆ. ತಾಲಿಬಾನ್​ ಪಡೆಗೆ ಹೆದರಿ ಜನರು ಊರುಗಳನ್ನು ತೊರೆಯುತ್ತಿದ್ದು ಬಸ್​ಗಳನ್ನು ಏರಿದಂತೆ, ವಿಮಾನಗಳನ್ನು ಏರುತ್ತಿದ್ದಾರೆ. ಕಾಬೂಲ್​ನಿಂದ ಅಮೆರಿಕಕ್ಕೆ ತೆರಳುತ್ತಿದ್ದ ವಿಮಾನದಿಂದ ಇಬ್ಬರು ಕೆಳಗೆ ಬಿದ್ದಿದ್ದಾರೆ.

  • קאבול: כמה תושבים שניסו להימלט מהמדינה וקשרו עצמם לגלגלי מטוס נפלו ממנו
    pic.twitter.com/Lm5YDbizlw

    — Amichai Stein (@AmichaiStein1) August 16, 2021 " class="align-text-top noRightClick twitterSection" data=" ">

ಇತ್ತ ಅಫ್ಘಾನ್​ನ ಸಂಸತ್​ನ ಮೇಲೂ ದಾಳಿ ನಡೆಸಿರುವ ತಾಲಿಬಾನ್ ಉಗ್ರರು, ಸರ್ಕಾರಿ ಕಚೇರಿಗಳನ್ನು ಒಂದೊಂದಾಗಿ ತಮ್ಮ ವಶಕ್ಕೆ ಪಡೆದುಕೊಂಡು ಅವುಗಳ ಮೇಲೆ ತಮ್ಮ ಬಾವುಟ ನೆಡುತ್ತಿದ್ದಾರೆ. ಕಾಬೂಲ್‌ ವಿಮಾನ ನಿಲ್ದಾಣದಲ್ಲಿ ಸಾವಿರಾರು ಜನರು ಜಮಾವಣೆಗೊಂಡಿದ್ದು, ಗುಂಡಿನ ದಾಳಿಯಲ್ಲಿ ಐವರು ಅಸುನೀಗಿದ್ದಾರೆ ಎಂದು ವರದಿಯಾಗಿದೆ.

ಕಾಬೂಲ್​ ಏರ್ಪೋರ್ಟ್​ನಲ್ಲಿ ಜನಜಂಗುಳಿ

ಅಫ್ಘಾನಿಸ್ತಾನದ ಕಾಬೂಲ್‌ ಏರ್​ಪೋರ್ಟ್​ನಲ್ಲಿ ಜಮಾವಣೆಗೊಂಡಿರುವ ಸಾವಿರಾರು ಜನರು ವಿವಿಧ ದೇಶಗಳಿಗೆ ತೆರಳಲು ನಾ ಮುಂದು, ತಾ ಮುಂದು ಎನ್ನುತ್ತಾ ಪೈಪೋಟಿಗಿಳಿದಿದ್ದಾರೆ. ವಿಮಾನ ಹತ್ತಲು ಹರಸಾಹಸ ಮಾಡುತ್ತಿದ್ದಾರೆ. ಲಭ್ಯವಾಗಿರುವ ಮಾಹಿತಿ ಪ್ರಕಾರ, ಈಗಾಗಲೇ ಅಫ್ಘಾನ್​​ನಿಂದ ವಿವಿಧ ದೇಶಗಳಿಗೆ ತೆರಳುವ ವಿಮಾನಗಳ ಹಾರಾಟ ರದ್ಧುಗೊಂಡಿದೆ.

ಇದನ್ನೂ ಓದಿ: ಕಾಬೂಲ್‌ ಏರ್‌ಪೋರ್ಟ್‌ನಲ್ಲಿ ಗುಂಡಿನ ದಾಳಿಗೆ ಐವರು ಬಲಿ: ಪ್ರಾಣ ರಕ್ಷಿಸಿಕೊಳ್ಳಲು ಅಫ್ಘನ್ನರ ಪರದಾಟ

ಕಳೆದ ಎರಡು ತಿಂಗಳುಗಳಿಂದ ಅಫ್ಘಾನ್​ನಲ್ಲಿ ಉಗ್ರರ ಅಟ್ಟಹಾಸ ಹೆಚ್ಚಾಗಿದ್ದು, ಒಂದೊಂದೇ ನಗರವನ್ನು ವಶಪಡಿಸಿಕೊಂಡಿದ್ದರು. ನಿನ್ನೆ ಬೆಳಗ್ಗೆ ವೇಳೆಗೆ ತಾಲಿಬಾನ್​ ಇಡೀ ಅಘ್ಘಾನಿಸ್ತಾನವನ್ನು ತನ್ನ ತೆಕ್ಕೆಗೆ ತೆಗೆದುಕೊಂಡಿತು. ಹೀಗಾಗಿ ಅಧ್ಯಕ್ಷರಾಗಿದ್ದ ಅಶ್ರಫ್​ ಘನಿ ತಾಲಿಬಾನರಿಗೆ ಶರಣಾಗಿ ದೇಶ ತೊರೆದಿದ್ದರು.

Last Updated : Aug 16, 2021, 10:31 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.