ETV Bharat / international

ಚೀನಾದಲ್ಲಿ ಪತನಗೊಂಡ ವಿಮಾನದ ಬ್ಲ್ಯಾಕ್ ಬಾಕ್ಸ್​ ಪತ್ತೆ.. ಪೈಲಟ್​ಗಳ ಮಾಹಿತಿ ಬಹಿರಂಗ

author img

By

Published : Mar 23, 2022, 5:50 PM IST

Updated : Mar 23, 2022, 6:00 PM IST

ಚೀನಾದಲ್ಲಿ ಪತನಗೊಂಡ ವಿಮಾನದ ಒಂದು ಬ್ಲ್ಯಾಕ್​ ಬಾಕ್ಸ್​ ದೊರೆತಿದೆ. ಅಲ್ಲದೇ, ವಿಮಾನದ ಕೆಲ ದಾಖಲೆಗಳು ಕೂಡ ಲಭ್ಯವಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

black-box-found
ಬ್ಲ್ಯಾಕ್ ಬಾಕ್ಸ್​ ಪತ್ತೆ

ಚೀನಾ: ಚೀನಾದ ಗುವಾಂಗ್‌ಕ್ಸಿ ಪ್ರಾಂತ್ಯದ ಕಡಿದಾದ ಗುಡ್ಡಗಾಡು ಪ್ರದೇಶದಲ್ಲಿ ಸೋಮವಾರ ಪತನಗೊಂಡ ಚೀನಾದ ಈಸ್ಟರ್ನ್ ಏರ್‌ಲೈನ್ಸ್​ ವಿಮಾನದ ಬ್ಲ್ಯಾಕ್​​ ಬಾಕ್ಸ್​(ಕಪ್ಪು ಪೆಟ್ಟಿಗೆ) ಮತ್ತು ಕೆಲ ದಾಖಲೆಗಳು ಪತ್ತೆಯಾಗಿವೆ ಎಂದು ವಾಯಯಾನ ನಿಯಂತ್ರಕ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಅಲ್ಲದೇ, ಪೈಲಟ್​ಗಳ ವಿವರಗಳನ್ನೂ ಬಿಡುಗಡೆ ಮಾಡಲಾಗಿದೆ. ವಿಮಾನದಲ್ಲಿದ್ದ ಮೂವರೂ ಪೈಲಟ್​ಗಳು ಚಾಲನಾ ಪರವಾನಗಿ ಮತ್ತು ಆರೋಗ್ಯ ಪ್ರಮಾಣಪತ್ರಗಳು ಮತ್ತು ಹೆಚ್ಚಿನ ಅನುಭವ ಹೊಂದಿದ್ದರು ಎಂದು ತಿಳಿದುಬಂದಿದೆ.

ವಿಮಾನ ಪತಗೊಳ್ಳುವ ಮುನ್ನ ಪೈಲಟ್​ಗಳು ಏರ್ ಟ್ರಾಫಿಕ್ ಕಂಟ್ರೋಲರ್‌ ಸಂಪರ್ಕ ಕಳೆದುಕೊಂಡಿದ್ದರು ಎಂದು ವರದಿಯಾಗಿದೆ. ಪೈಲಟ್​ ಕ್ಯಾಪ್ಟನ್​ 6,709 ಗಂಟೆಗಳ ಕಾಲ ವಿಮಾನ ಹಾರಿಸಿದ ಅನುಭವ ಇದ್ದರೆ, ಮೊದಲ ಸಹ ಪೈಲಟ್ 31,769 ಗಂಟೆಗಳ ಕಾಲ ವಿಮಾನ ಹಾರಿಸಿದ ಅನುಭವ ಹೊಂದಿದ್ದರೆ, ಎರಡನೇ ಸಹ ಪೈಲಟ್ 556 ಗಂಟೆಗಳ ಹಾರಾಟದ ಅನುಭವವನ್ನು ಹೊಂದಿದ್ದರು. ಅಲ್ಲದೇ, ಇನ್ನೊಂದು ಬ್ಲ್ಯಾಕ್​ ಬಾಕ್ಸ್​ ಪತ್ತೆಗೆ ಶೋಧ ಕಾರ್ಯ ನಡೆಯುತ್ತಿದೆ. ಹವಾಮಾನ ವೈಪರೀತ್ಯದಿಂದಾಗಿ ಪತ್ತೆ ಕಾರ್ಯ ವಿಳಂಬವಾಗುತ್ತಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ವಿಮಾನಗಳಲ್ಲಿ ಅಳವಡಿಸಲಾದ ಬ್ಲ್ಯಾಕ್​ ಬಾಕ್ಸ್​ಗಳು ವಿಮಾನ ದುರಂತ ಯಾವ ಕಾರಣಕ್ಕೆ ಸಂಭವಿಸಿತು ಎಂಬುದನ್ನು ದಾಖಲಿಸುತ್ತವೆ. ಕುನ್‌ಮಿಂಗ್‌ನಿಂದ ಗುವಾಂಗ್‌ಝೌಗೆ ಪಯಣಿಸುತ್ತಿದ್ದ 132 ಜನರಿದ್ದ ವಿಮಾನ 3 ಸಾವಿರ ಅಡಿ ಎತ್ತರದಿಂದ 155 ಸೆಕೆಂಡ್​ಗಳ ಅಂತರದಲ್ಲಿ ನೆಲಕ್ಕೆ ಅಪ್ಪಳಿಸಿ ಪತನಗೊಂಡಿದ್ದು, ಈವರೆಗೂ ಯಾವೊಬ್ಬ ಪ್ರಯಾಣಿಕ ಬದುಕುಳಿದ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ.

ಓದಿ: ದೇಶದಲ್ಲಿ ಕೊರೊನಾ ನಿಯಮಗಳು ಈ ತಿಂಗಳಾಂತ್ಯಕ್ಕೆ ಕೊನೆ.. ಸಾರ್ವಜನಿಕ ಸ್ಥಳದಲ್ಲಿ 'ಮಾಸ್ಕ್ ಮಾತ್ರ ಕಡ್ಡಾಯ'

Last Updated : Mar 23, 2022, 6:00 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.