ETV Bharat / international

ಪಂಜ್​ಶೀರ್​ನ ಕಣಿವೆಯೊಂದನ್ನು ಸುತ್ತುವರೆದ ತಾಲಿಬಾನ್ ಪಡೆಗಳು: ಸ್ಥಳೀಯರೊಡನೆ ಸಂಘರ್ಷ

author img

By

Published : Feb 9, 2022, 12:05 PM IST

ಪಂಜ್​ಶೀರ್ ಪ್ರಾಂತ್ಯದಲ್ಲಿರುವ ಪರಂಡೆಹ್ ಕಣಿವೆಯನ್ನು ತಾಲಿಬಾನಿ ಪಡೆಗಳು ಸುತ್ತುವರೆದಿದ್ದು, ಕೆಲವು ಸ್ಥಳೀಯ ನಿವಾಸಿಗಳನ್ನು ಬಂಧಿಸಲಾಗಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.

Armed clash breaks out between Taliban, local residents in Afghanistan's Panjshir
ಪಂಜ್​ಶೀರ್​ನ ಕಣಿವೆಯನ್ನು ಸುತ್ತುವರೆದ ತಾಲಿಬಾನ್ ಪಡೆಗಳು: ಸ್ಥಳೀಯರೊಡನೆ ಸಂಘರ್ಷ

ಪಂಜ್​ಶೀರ್(ಅಫ್ಘಾನಿಸ್ತಾನ): ಅಧಿಕಾರಕ್ಕೆ ಬಂದ ನಂತರ ಅಫ್ಘಾನಿಸ್ತಾನದಲ್ಲಿ ತಾಲಿಬಾನಿ ಪಡೆಗಳಿಗೆ ಸೆಡ್ಡು ಹೊಡೆದು ನಿಂತಿದ್ದ ಪಂಜ್​ಶೀರ್ ಪ್ರಾಂತ್ಯದಲ್ಲಿರುವ ಪರಂಡೆಹ್ ಕಣಿವೆಯನ್ನು ತಾಲಿಬಾನಿ ಪಡೆಗಳು ಸುತ್ತುವರೆದಿದ್ದು, ಕೆಲವು ಸ್ಥಳೀಯ ನಿವಾಸಿಗಳನ್ನು ಬಂಧಿಸಲಾಗಿದೆ ಎಂದು ತಿಳಿದು ಬಂದಿದೆ.

ಮೂಲಗಳ ಪ್ರಕಾರ, ಪ್ರಾಂತ್ಯದಲ್ಲಿ ಫೆಬ್ರವರಿ 7ರಿಂದ ಈ ಪ್ರದೇಶದಲ್ಲಿ ಸ್ಥಳೀಯರು ಮತ್ತು ತಾಲಿಬಾನ್ ನಡುವೆ ಘರ್ಷಣೆ ನಡೆಯುತ್ತಿದೆ. ತಾಲಿಬಾನಿಗಳ ವಾಹನವನ್ನು ಬಾಂಬ್ ಸ್ಫೋಟಿಸಿ ಹಾನಿಗೊಳಿಸಿದ ನಂತರ ಸಂಘರ್ಷ ತೀವ್ರಗೊಂಡಿದೆ.

ಪಂಜ್​ಶೀರ್ ಈಗಲೂ ತಾಲಿಬಾನಿಗಳಿಗೆ ಸವಾಲೆಸೆಯುತ್ತಿದ್ದು, ಆ ಪ್ರಾಂತ್ಯವನ್ನು ತನ್ನದಾಗಿಸಿಕೊಳ್ಳಲು ತಾಲಿಬಾನಿ ಪಡೆಗಳು ಹರಸಾಹಸ ನಡೆಸುತ್ತಿವೆ. ಕಳೆದ ವರ್ಷ ಆಗಸ್ಟ್​ನಲ್ಲಿ ತಾಲಿಬಾನ್ ಅಫ್ಘಾನಿಸ್ತಾನವನ್ನು ಹಿಡಿತಕ್ಕೆ ತೆಗೆದುಕೊಂಡ ನಂತರ ಅಲ್ಲಿನ ಪರಿಸ್ಥಿತಿ ಹದಗೆಟ್ಟಿದೆ.

ವಿದೇಶಿ ನೆರವು ಸಿಗದ ಕಾರಣ, ಬೇರೆ ರಾಷ್ಟ್ರಗಳಲ್ಲಿರುವ ಆಫ್ಘನ್​ ಹಣವನ್ನು ಪಡೆಯಲು ನಿರ್ಬಂಧಿಸಿರುವುದು ಮತ್ತು ತಾಲಿಬಾನ್ ಮೇಲಿನ ಅಂತರರಾಷ್ಟ್ರೀಯ ನಿರ್ಬಂಧಗಳ ಕಾರಣದಿಂದಾಗಿ ಅಫ್ಘಾನಿಸ್ತಾನವನ್ನು ಆರ್ಥಿಕ ಸಂಕಷ್ಟಕ್ಕೆ ಸಿಲುಕಿಸಿದೆ.

ಇದನ್ನೂ ಓದಿ: ಪಾಕ್​ನಲ್ಲಿ ಇಬ್ಬರು ಮಹಿಳೆಯರ ಅಪಹರಿಸಿ, ಬೆತ್ತಲೆ ಮೆರವಣಿಗೆ ಮಾಡಿ ಸಾಮೂಹಿಕ ಅತ್ಯಾಚಾರ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.