ETV Bharat / international

ಪಾಕ್‌ ಬಸ್ ಸ್ಫೋಟದಲ್ಲಿ 9 ಚೀನಿ ಪ್ರಜೆಗಳು ಸೇರಿ 13 ಸಾವು: 'ಭಯೋತ್ಪಾದಕ ದಾಳಿ' ಎಂದ ಚೀನಾ

author img

By

Published : Jul 14, 2021, 3:11 PM IST

ಪಾಕಿಸ್ತಾನದ ಖೈಬರ್ ಪಖ್ತುಂಖ್ವಾ ಪ್ರಾಂತ್ಯದಲ್ಲಿ ನಿರ್ಮಾಣವಾಗುತ್ತಿರುವ ದಸು ಜಲವಿದ್ಯುತ್​ ಯೋಜನೆಯ ಡ್ಯಾಮ್​​ಗಾಗಿ ಕಾರ್ಯನಿರ್ವಹಿಸುತ್ತಿದ್ದ ಚೀನಾದ ಇಂಜಿನಿಯರ್​ಗಳು, ಸರ್ವೇಯರ್​ಗಳು ಈ ಬಸ್​​ನಲ್ಲಿ ತೆರಳುತ್ತಿದ್ದರು ಎಂದು ತಿಳಿದುಬಂದಿದೆ

9 Chinese among 13 killed as Pakistan bus blast
ಪಾಕ್​ನ ಬಸ್​ನಲ್ಲಿ ಸ್ಫೋಟ: 9 ಚೀನಿ ಪ್ರಜೆಗಳು ಸೇರಿ, 13 ಮಂದಿ ದುರ್ಮರಣ

ಪೇಶಾವರ(ಪಾಕಿಸ್ತಾನ): ಭೀಕರ ಸ್ಫೋಟವೊಂದು ಸಂಭವಿಸಿ, ಚೀನಾದ 9 ಪ್ರಜೆಗಳೂ ಸೇರಿದಂತೆ ಒಟ್ಟು 13 ಮಂದಿ ಸಾವನ್ನಪ್ಪಿರುವ ಘಟನೆ ಈಶಾನ್ಯ ಪಾಕಿಸ್ತಾನದಲ್ಲಿ ನಡೆದಿದೆ.

ಸ್ಫೋಟದ ತೀವ್ರತೆಗೆ ಬಸ್ ನಾಲೆಯೊಳಗೆ ಉರುಳಿ ಬಿದ್ದಿದೆ. ಚೀನಿ ಪ್ರಜೆಗಳನ್ನು ಗುರಿಯಾಗಿಸಿ ಬಸ್​​ನಲ್ಲಿ ಸ್ಫೋಟಕ ಇರಿಸಲಾಗಿತ್ತೇ? ಅಥವಾ ರಸ್ತೆಯ ಬದಿಯಲ್ಲಿ ಸ್ಪೋಟಕ ಇರಿಸಲಾಗಿತ್ತೆ ಅನ್ನೋದು ಇನ್ನೂ ತಿಳಿದುಬಂದಿಲ್ಲ.

ಇದು ಭಯೋತ್ಪಾದಕ ದಾಳಿ- ಚೀನಾ

ಇಸ್ಲಾಮಾಬಾದ್​ನಲ್ಲಿರುವ ಚೀನಾ ರಾಯಭಾರ ಕಚೇರಿ, ಇದೊಂದು ಭಯೋತ್ಪಾದಕ ದಾಳಿ ಎಂದು ಹೇಳಿದೆ. ಚೀನಾ ಮೂಲದ ಕಂಪನಿಯೊಂದರ ಪ್ರಾಜೆಕ್ಟ್​​ನಲ್ಲಿ ಕೆಲಸ ಮಾಡುತ್ತಿದ್ದ ಸಿಬ್ಬಂದಿ ಸಾವನ್ನಪ್ಪಿದ್ದಾರೆಂದು ರಾಯಭಾರ ಕಚೇರಿ ಹೇಳಿದೆ.

ಈ ವಿಚಾರಕ್ಕೆ ಪ್ರತಿಕ್ರಿಯೆ ನೀಡಿರುವ ಚೀನಾದ ವಿದೇಶಾಂಗ ಇಲಾಖೆಯ ವಕ್ತಾರ ಝಾವೋ ಲೈಜಿನ್, ದಾಳಿಕೋರರ ವಿರುದ್ಧ ಕ್ರಮ ಕೈಗೊಳ್ಳಬೇಕು. ಪಾಕಿಸ್ತಾನದ ಚೀನಾ ಪ್ರಜೆಗಳನ್ನು ಮತ್ತು ಚೀನಾ ಉದ್ಯಮಗಳನ್ನು ರಕ್ಷಿಸಬೇಕೆಂದು ಹೇಳಿದ್ದಾರೆ.

ಪಾಕಿಸ್ತಾನದ ಮಾಧ್ಯಮಗಳು ಸ್ಫೋಟದ ತನಿಖೆ ನಡೆಯುತ್ತಿದೆ ಎಂದು ಮಾಹಿತಿ ನೀಡಿವೆ. ಸರ್ಕಾರದ ಕೆಲವು ಅಧಿಕಾರಿಗಳು, ಇಮ್ರಾನ್​ ಖಾನ್ ಸರ್ಕಾರಕ್ಕೆ ಕೆಟ್ಟ ಹೆಸರು ತರುವ ಉದ್ದೇಶದಿಂದ ಈ ದಾಳಿ ನಡೆಸಲಾಗಿದೆ ಎಂದು ಆರೋಪಿಸಿದ್ದಾರೆ.

ಇದನ್ನೂ ಓದಿ: ಇಂಡೋ - ಪೆಸಿಫಿಕ್ ದೇಶಗಳೊಂದಿಗೆ ತನ್ನ ಸಂಬಂಧ ಬಲಪಡಿಸಿಕೊಳ್ಳುತ್ತಿರುವ ಅಮೆರಿಕ

ಪ್ರಾಥಮಿಕ ಮಾಹಿತಿ ಪ್ರಕಾರ, ಬಸ್ ಸುಮಾರು 30 ಚೀನಾ ಪ್ರಜೆಗಳನ್ನು ಹೊತ್ತೊಯ್ಯುತ್ತಿತ್ತು. ಪಾಕಿಸ್ತಾನದ ಖೈಬರ್ ಪಖ್ತುಂಖ್ವಾ ಪ್ರಾಂತ್ಯದಲ್ಲಿ ನಿರ್ಮಾಣವಾಗುತ್ತಿರುವ ದಸು ಜಲವಿದ್ಯುತ್​ ಯೋಜನೆಯ ಡ್ಯಾಮ್​​ಗಾಗಿ ಕಾರ್ಯನಿರ್ವಹಿಸುತ್ತಿದ್ದ ಚೀನಾದ ಇಂಜಿನಿಯರ್​ಗಳು, ಸರ್ವೇಯರ್​ಗಳು ಈ ಬಸ್​​ನಲ್ಲಿ ತೆರಳುತ್ತಿದ್ದರು ಎಂದು ತಿಳಿದುಬಂದಿದೆ.

ದಸು ಜಲವಿದ್ಯುತ್​ ಯೋಜನೆ ಚೀನಾದ ಚೀನಾ- ಪಾಕಿಸ್ತಾನ ಎಕನಾಮಿಕ್ ಕಾರಿಡಾರ್​ (ಸಿಪೆಕ್) ಭಾಗವಾಗಿದ್ದು, ಈ ಸಿಪೆಕ್​ ಚೀನಾದ ಬೆಲ್ಟ್ ಆ್ಯಂಡ್ ರೋಡ್​ ಇನ್ಶಿಯೇಟಿವ್​ನ ಭಾಗವಾಗಿದೆ. ಈ ಬೆಲ್ಟ್ ಆ್ಯಂಡ್ ರೋಡ್ ಇನ್ಶಿಯೇಟಿವ್​ ಪಶ್ಚಿಮ ಪಾಕಿಸ್ತಾನವನ್ನು ಗ್ವಾದಾರ್ ಸೀ ಪೋರ್ಟ್​ನಿಂದ ದಕ್ಷಿಣ ಪಾಕಿಸ್ತಾನಕ್ಕೆ ಸಂಪರ್ಕ ಕಲ್ಪಿಸುವ ಪ್ರಾಥಮಿಕ ಉದ್ದೇಶವನ್ನು ಹೊಂದಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.