ETV Bharat / international

ಉಕ್ರೇನ್​ಗೆ ನೀಡಬೇಕಾದ ಸಹಾಯ ತಡೆಹಿಡಿದ ಟ್ರಂಪ್​: ವಾಚ್​ಡಾಗ್ ಆರೋಪ

author img

By

Published : Jan 17, 2020, 9:14 AM IST

Updated : Jan 17, 2020, 9:32 AM IST

ಅಮೆರಿಕಾ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ ಅವರ ಒತ್ತಾಯಕ್ಕೊಳಗಾಗಿ ಶ್ವೇತ ಭವನವೂ ಫೆಡರಲ್​ ಕಾನೂನನ್ನು ಉಲ್ಲಂಘಿಸಿದೆ ಎಂದು ಫೆಡರಲ್​ ವಾಚ್​ಡಾಗ್(ಕಾವಲು ನಾಯಿ) ಏಜೆನ್ಸಿಯೂ ಆರೋಪಿಸಿದೆ.

White House violated law
ಉಕ್ರೇನ್​ಗೆ ನೀಡಬೇಕಾದ ಸಹಾಯಹಸ್ತವನ್ನು ತಡೆಹಿಡಿದ ಅಮೆರಿಕಾ

ವಾಷಿಂಗ್ಟನ್: ಉಕ್ರೇನ್​​ಗೆ ಭದ್ರತಾ ನೆರವನ್ನು ತಡೆಹಿಡಿಯುವ ಮೂಲಕ ಅಮೆರಿಕಾ ಮತ್ತು ಅಧ್ಯಕ್ಷ ಡೊನಾಲ್ಡ್​​ ಟ್ರಂಪ್​​ ಫೆಡರಲ್​ ಕಾನೂನನ್ನು ಉಲ್ಲಂಘಿಸಿದೆ ಎಂದು ಫೆಡರಲ್​ ವಾಚ್​​ ಡಾಗ್​​ ಸಂಸ್ಥೆ ತಿಳಿಸಿದೆ.

ಒಂದು ವರ್ಷದ ಹಿಂದೆ​​ ಉಕ್ರೇನ್​​ಗೆ ಕಾಂಗ್ರೆಸ್(ಅಮೆರಿಕಾ ಸಂಸತ್​) ಸಹಾಯಹಸ್ತವನ್ನು ನೀಡಿತ್ತು. ಇದನ್ನು ತಡೆಹಿಡಿಯುವ ಮೂಲಕ ಮ್ಯಾನೇಜ್ಮೆಂಟ್ ಮತ್ತು ಬಜೆಟ್ ಇಲಾಖೆಯೂ ಕಾನೂನನ್ನು ಉಲ್ಲಂಘಿಸಿದೆ ಎಂದು ಸರ್ಕಾರಿ ಅಕೌಂಟೆಬಿಲಿಟಿ ಆಫೀಸ್ ವರದಿಯಲ್ಲಿ ತಿಳಿಸಿದೆ. ಅಧ್ಯಕ್ಷರು ಈ ರೀತಿ ಅಧಿಕಾರ ದುರುಪಯೋಗ ಮಾಡಿಕೊಳ್ಳಬಾರದು ಎಂದು ವರದಿಯಲ್ಲಿ ಟ್ರಂಪ್​ಗೆ ಚಾಟಿ ಬೀಸಲಾಗಿದೆ..

ಕಳೆದ ಬೇಸಿಗೆಯಲ್ಲಿ ಟ್ರಂಪ್‌ರ ಆದೇಶದ ಮೇರೆಗೆ ಮತ್ತು ಕಾಂಗ್ರೆಸ್​​ನ ಒತ್ತಾಯದಿಂದ ಸಹಾಯಹಸ್ತವನ್ನ ಸೆಪ್ಟೆಂಬರ್‌ನಲ್ಲಿ ಬಿಡುಗಡೆ ಮಾಡಲಾಯಿತು. ಭದ್ರತಾ ನೆರವು ವಿಳಂಬಗೊಳಿಸುವಲ್ಲಿ ಒಎಂಬಿ ಇಂಪೌಂಡ್ಮೆಂಟ್ ಕಂಟ್ರೋಲ್ ಕಾಯ್ದೆಯನ್ನು ಉಲ್ಲಂಘಿಸಿದೆ ಎಂದು ಕಾಂಗ್ರೆಸ್​​​ ವರದಿ ಮಾಡುವ ಸ್ವತಂತ್ರ ಸಂಸ್ಥೆ ಹೇಳಿದೆ.

ಆದರೆ ಕ್ಯಾಪಿಟಲ್ ಹಿಲ್ ಡೆಮೋಕ್ರಾಟ್‌ಗಳು ಈ ಆರೋಪವನ್ನು ನಿರಾಕರಿಸಿದ್ದಾರೆ. ಈ ವರದಿ ಕಾನೂನುಬಾಹಿರವಾಗಿದೆ. ಟ್ರಂಪ್ ಅವರ ದೋಷಾರೋಪಣೆ ತನಿಖೆಯಲ್ಲಿ ಪ್ರಮುಖ ವ್ಯಕ್ತಿಯಾಗಿರುವ ಆಕ್ಟಿಂಗ್ ಚೀಫ್ ಆಫ್ ಸ್ಟಾಫ್ ಮಿಕ್ ಮುಲ್ವಾನೆ ಅವರು ಒಎಮ್​ಬಿ ಸಂಸ್ಥೆಯ ನಿರ್ದೇಶಕರಾಗಿದ್ದಾರೆ. ಹಾಗಾಗಿ ಈ ರೀತಿ ವರದಿ ನೀಡಿದ್ದಾರೆಂದು, ಆರೋಪವನ್ನು ತಳ್ಳಿ ಹಾಕಿದ್ದಾರೆ.

Intro:Body:

gf


Conclusion:
Last Updated : Jan 17, 2020, 9:32 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.