ETV Bharat / international

ಸಂಪೂರ್ಣವಾಗಿ ಲಸಿಕೆ ಪಡೆದವರು ಮಾಸ್ಕ್​​ ಧರಿಸಬೇಕಿಲ್ಲ- ಅಮೆರಿಕ

author img

By

Published : May 14, 2021, 9:05 AM IST

Updated : May 14, 2021, 9:57 AM IST

ಸಂಪೂರ್ಣವಾಗಿ ವ್ಯಾಕ್ಸಿನ್​ ಹಾಕಿಸಿಕೊಂಡ ಜನರು ಮಾಸ್ಕ್​​ ಧರಿಸಬೇಕಿಲ್ಲ. ದೈಹಿಕ ಅಂತರ ಕಾಯ್ದುಕೊಳ್ಳಬೇಕಿಲ್ಲ. ದೇಶದೊಳಗೆ ಪ್ರಯಾಣಿಸುವವರು ಕ್ವಾರಂಟೈನ್​ಗೆ ಒಳಪಡುವ ಅಗತ್ಯತೆಯಿಲ್ಲ ಎಂದು ಯುಎಸ್ ಸಿಡಿಸಿ ಸಲಹೆ ನೀಡಿದೆ.

America President Joe Biden
ಯುಸ್​ ಅಧ್ಯಕ್ಷ ಜೋ ಬೈಡನ್​

ವಾಷಿಂಗ್ಟನ್: ಕೊರೊನಾ​ ಸಾಂಕ್ರಾಮಿಕದ ಕರಾಳ ರೂಪವನ್ನು ನೋಡಿ, ಅದರಿಂದ ಚೇತರಿಸಿಕೊಂಡು ಸಹಜ ಸ್ಥಿತಿಯತ್ತ ಮರಳುತ್ತಿರುವ ಅಮೆರಿಕವು ಕೋವಿಡ್​ ಲಸಿಕೆಯ ಎರಡೂ ಡೋಸ್​ಗಳನ್ನು ಪಡೆದವರು ಮಾಸ್ಕ್​​ ಧರಿಸುವ ಅವಶ್ಯಕತೆಯಿಲ್ಲ ಎಂದು ತನ್ನ ಜನತೆಗೆ ಸೂಚಿಸಿದೆ.

ಹೊಸ ಕೋವಿಡ್​ ಮಾರ್ಗಸೂಚಿ ಹೊರಡಿಸಿರುವ ಯುಎಸ್​ ರೋಗ ನಿಯಂತ್ರಣ ಮತ್ತು ತಡೆಗಟ್ಟುವಿಕೆ ಕೇಂದ್ರ (ಸಿಡಿಸಿ​), ಸಂಪೂರ್ಣವಾಗಿ ವ್ಯಾಕ್ಸಿನ್​ ಹಾಕಿಸಿಕೊಂಡ ಜನರು ಮಾಸ್ಕ್​​ ಧರಿಸಬೇಕಿಲ್ಲ. ದೈಹಿಕ ಅಂತರ ಕಾಯ್ದುಕೊಳ್ಳಬೇಕಿಲ್ಲ. ದೇಶದೊಳಗೆ ಪ್ರಯಾಣಿಸುವವರು ಕ್ವಾರಂಟೈನ್​ಗೆ ಒಳಪಡುವ ಅಗತ್ಯತೆಯಿಲ್ಲ ಎಂದು ಸಲಹೆ ನೀಡಿದೆ.

  • Today is a great day for America in our long battle with COVID-19.

    Just a few hours ago, the CDC announced they are no longer recommending that fully vaccinated people need to wear masks.

    — Joe Biden (@JoeBiden) May 13, 2021 " class="align-text-top noRightClick twitterSection" data=" ">

ಸಿಡಿಸಿ ಮಾರ್ಗಸೂಚಿಯನ್ನು ಶ್ಲಾಘಿಸಿರುವ ಯುಸ್​ ಅಧ್ಯಕ್ಷ ಜೋ ಬೈಡನ್​, "ಕೋವಿಡ್​ ವಿರುದ್ಧದ ಹೋರಾಟದಲ್ಲಿ ಇಂದು ಅಮೆರಿಕಕ್ಕೆ ಒಳ್ಳೆಯ ದಿನ. ಲಸಿಕೆ ಪಡೆಯಿರಿ ಅಥವಾ ವ್ಯಾಕ್ಸಿನ್​ ಹಾಕಿಸಿಕೊಳ್ಳುವವರೆಗೂ ಮಾಸ್ಕ್​​ ಧರಿಸಿ" ಎಂದು ಹೇಳಿದ್ದಾರೆ. ಉಪಾಧ್ಯಕ್ಷೆ ಕಮಲಾ ಹ್ಯಾರಿಸ್​ ಹಾಗೂ ಬೈಡನ್ ಇಬ್ಬರೂ ಮಾಸ್ಕ್​ ಧರಿಸದೇ ಶ್ವೇತಭವನದ ಎದುರು ಮಾಧ್ಯಮಗಳ ಮುಂದೆ ಬಂದಿದ್ದಾರೆ.

ಇದನ್ನೂ ಓದಿ: ಭಾರತದಲ್ಲಿ ಹೊಸ ಬಗೆ ಕೋವಿಡ್ ಅಟ್ಟಹಾಸ: ಅಮೆರಿಕದಲ್ಲಿ 12-15 ವಯಸ್ಸಿನ ಮಕ್ಕಳಿಗೂ ಲಸಿಕೆ

"ನೀವು ಸಂಪೂರ್ಣವಾಗಿ ಲಸಿಕೆ ಪಡೆಯುತ್ತೀರೋ, ಇಲ್ಲಾ ಮಾಸ್ಕ್ ಧರಿಸುತ್ತೀರೋ? ಆಯ್ಕೆ ನಿಮ್ಮದು. ಆದರೆ ಸಾಂಕ್ರಾಮಿಕದ ವಿರುದ್ಧದ ಹೋರಾಟ ಕೊನೆಯಾಗುವವರೆಗೂ ದಯವಿಟ್ಟು ನಿಮ್ಮನ್ನು ರಕ್ಷಿಸಿಕೊಳ್ಳಿ" ಎಂದು ಶ್ವೇತಭವನ ಟ್ವೀಟ್​ ಮಾಡಿದೆ.

  • Big news from the CDC: If you’re fully vaccinated, you do not need to wear a mask – indoors or outdoors, in most settings.

    We’ve gotten this far. Whether you choose to get vaccinated or wear a mask, please protect yourself until we get to the finish line. pic.twitter.com/XI4yPmhWaD

    — The White House (@WhiteHouse) May 13, 2021 " class="align-text-top noRightClick twitterSection" data=" ">

ವಿಶ್ವದ ಕೋವಿಡ್​ ಪೀಡಿತ ರಾಷ್ಟ್ರಗಳಲ್ಲಿ ಕೊರೊನಾ ಕೇಸ್​ಗಳು ಹಾಗೂ ಸಾವಿನ ಸಂಖ್ಯೆ ಎರಡರಲ್ಲೂ ಮೊದಲ ಸ್ಥಾನದಲ್ಲಿರುವ ಅಮೆರಿಕದಲ್ಲಿ ಇದೀಗ ವೈರಸ್​ ಆರ್ಭಟ ಕಡಿಮೆಯಾಗಿದೆ. ಈವರೆಗೆ 3,36,26,097 ಸೋಂಕಿತರು ಪತ್ತೆಯಾಗಿದ್ದು, 5,98,540 ಮಂದಿ ಬಲಿಯಾಗಿದ್ದಾರೆ. ಯುಎಸ್​ ಜನಸಂಖ್ಯೆಯ ಶೇ.47 ರಷ್ಟು ಅಂದರೆ 154 ಮಿಲಿಯನ್​ ಜನರು ಕೋವಿಡ್​ ಲಸಿಕೆಯ ಮೊದಲ ಡೋಸ್​ ಪಡೆದಿದ್ದು, ಇವರಲ್ಲಿ 119 ಮಿಲಿಯನ್​ ಜನರು ಎರಡೂ ಡೋಸ್​ಗಳನ್ನು ಹಾಕಿಸಿಕೊಂಡಿದ್ದಾರೆ. 12 ರಿಂದ 15 ವರ್ಷದ ಮಕ್ಕಳಿಗೆ ಕೂಡ ಶೀಘ್ರದಲ್ಲೇ ವ್ಯಾಕ್ಸಿನೇಷನ್​ ಆರಂಭವಾಗಲಿದೆ.

Last Updated :May 14, 2021, 9:57 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.