ETV Bharat / international

ವಾಗ್ದಂಡನೆ ಉರುಳಿನಿಂದ ಪಾರಾದ ಡೊನಾಲ್ಡ್​... ಅಮೆರಿಕ ಸೆನೆಟ್​​ನಲ್ಲಿ ಗೆದ್ದ ಟ್ರಂಪ್​​!

author img

By

Published : Feb 6, 2020, 10:11 AM IST

ಅಧಿಕಾರ ದುರುಪಯೋಗ ಪಡಿಸಿಕೊಂಡ ಆರೋಪದ ಮೇಲೆ ವಾಗ್ದಂಡನೆ ಆರೋಪಕ್ಕೆ ಗುರಿಯಾಗಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​​ಗೆ ಭರ್ಜರಿ ಜಯ ಸಿಕ್ಕಿದ್ದು, ತಮ್ಮ ಮೇಲೆ ಕೇಳಿ ಬಂದಿದ್ದ ಆರೋಪದಿಂದ ದೋಷಮುಕ್ತರಾಗಿದ್ದಾರೆ.

President Donald Trump
ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್

ವಾಷಿಂಗ್ಟನ್​​: ಅಮೆರಿಕ ಸೆನೆಟ್​​ನಲ್ಲಿ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ಗೆ ಭರ್ಜರಿ ಜಯವಾಗಿದ್ದು, ವಾಗ್ದಂಡನೆಯಿಂದ ಪಾರಾಗಿದ್ದಾರೆ. ಅಧಿಕಾರಿ ದುರಪಯೋಗ ಪಡಿಸಿಕೊಳ್ಳಲಾಗಿದೆ ಎಂದು ಆರೋಪಿಸಿ ಅಮೆರಿಕ ಸೆನೆಟ್​​ನಲ್ಲಿ ಡೆಮಾಕ್ರಟಿಕ್ ಪಕ್ಷ ವಾಗ್ದಂಡನೆ ನಿರ್ಣಯ ಮಂಡಿಸಿತ್ತು.

ಡೆಮಾಕ್ರಟಿಕ್​ ಪಕ್ಷ, ರಿಪಬ್ಲಿಕನ್​ ಪಕ್ಷ ಮತ್ತು ಅಧ್ಯಕ್ಷರ ಪರ ವೈಟ್​ಹೌಸ್​ ಕೌನ್ಸೆಲ್​ಗಳ ತಂಡದ ವಾದ - ಪ್ರತಿವಾದ ಆಲಿಸಿದ ನಂತರ ಸೆನೆಟ್ ಈ ನಿರ್ಧಾರ ಕೈಗೊಂಡಿದೆ. ದೋಷಾರೋಪದಿಂದ ಅವರು ಪಾರಾಗಿರುವುದರಿಂದ ಅಮೆರಿಕ ಸೆನೆಟ್​ನಲ್ಲಿ ಡೆಮಾಕ್ರಟಿಕ್ ಪಕ್ಷಕ್ಕೆ ತೀವ್ರ ಮುಖಭಂಗವಾಗಿದೆ. ಇದಕ್ಕಾಗಿ ನಡೆದ ಮತದಾನದಲ್ಲಿ ಟ್ರಂಪ್ ಪರವಾಗಿ 52 ಮತಗಳು ಬಿದ್ದರೆ, ವಿರುದ್ಧವಾಗಿ 48 ಮತಗಳು ಲಭಿಸಿದ್ದವು. ಹೀಗಾಗಿ ಟ್ರಂಪ್ ವಾಗ್ದಂಡನೆಯಿಂದ ಮುಕ್ತಿ ಪಡೆದರು. ವಾಗ್ದಂಡನೆಯಿಂದ ಪಾರಾದ ಮೂರನೇ ಅಧ್ಯಕ್ಷ ಇವರಾಗಿದ್ದಾರೆ.

ಡೆಮಾಕ್ರೆಟಿಕ್ ಪಕ್ಷ ಮಾಡಿರುವ ವಾಗ್ದಂಡನೆ ದುರ್ಬಲವಾಗಿದ್ದು, ಇದು ಸಂವಿಧಾನದ ಅಪಾಯಕ ಕೃತ್ಯ ಎಂದು ಟ್ರಂಪ್ ಪರ ಕಾನೂನು ತಂಡ ವಾದಿಸಿತ್ತು. ಅಧ್ಯಕ್ಷರು ಯಾವುದೇ ತಪ್ಪು ಮಾಡಿಲ್ಲ. ಹಾಗಾಗಿ ವಾಗ್ದಂಡನೆಯನ್ನು ತಿರಸ್ಕರಿಸಬೇಕೆಂದು ಮನವಿ ಮಾಡಿದ್ದರು.

ಈ ಮೊದಲು ಅಮೆರಿಕ ಅಧ್ಯಕ್ಷರಾಗಿದ್ದ ನಿಕ್ಸನ್​ ಮತ್ತು ಬಿಲ್​ ಕ್ಲಿಂಟನ್​ ವಾಗ್ದಂಡನೆಯಿಂದ ಪಾರಾಗಿದ್ದರು. ಬಿಲ್​ ಕ್ಲಿಂಟನ್​ ಮೊನಿಕಾ ಲೆವನಸ್ಕಿಗೆ ಲೈಂಗಿಕ ಕಿರುಕುಳ ನೀಡಿದ್ದ ಆರೋಪದ ಮೇಲೆ ವಾಗ್ದಂಡನೆ ಎದುರಿಸಿದ್ದರು. ಆಗಲು ಕ್ಲಿಂಟನ್​ ವಾಗ್ದಂಡನೆಯಿಂದ ಪಾರಾಗಿ, ಅಧಿಕಾರದಲ್ಲಿ ಮುಂದುವರೆದಿದ್ದರು. 1974ರಲ್ಲಿಅಧ್ಯಕ್ಷ ರಿಚರ್ಡ್‌ ನಿಕ್ಸನ್‌ ಅವರ ವಿರುದ್ಧವೂ ವಾಗ್ದಂಡನೆ ನಡೆದಿತ್ತು. ಅಧಿಕಾರದ ದುರುಪಯೋಗ ಸೇರಿದಂತೆ ನಾನಾ ಕಾರಣಗಳಿಂದ ವಾಗ್ದಂಡನೆ ಪ್ರಕ್ರಿಯೆ ಕೈಗೊಳ್ಳಲಾಗಿತ್ತು. ಇನ್ನೇನು ತನಿಖೆ ಮುಗಿಯುವ ಹಂತದಲ್ಲಿಅವರು ರಾಜೀನಾಮೆ ನೀಡಿದ್ದರಿಂದ ವಾಗ್ದಂಡನೆ ಕೈ ಬಿಡಲಾಗಿತ್ತು.

1998ರಲ್ಲಿಅಧ್ಯಕ್ಷ ಬಿಲ್‌ ಕ್ಲಿಂಟನ್‌ ಅವರು ವಾಗ್ದಂಡನೆ ಪ್ರಕ್ರಿಯೆಗೆ ಒಳಗಾಗಬೇಕಾಯಿತು. ವಿಚಾರಣೆಯಲ್ಲಿ ಅವರು ನಿರ್ದೋಷಿ ಎಂದು ಸಾಬೀತಾಗಿ, ವಾಗ್ದಂಡನೆ ವಿರುದ್ಧ ಗೆಲುವು ಸಾಧಿಸಿದ್ದರು. ಈಗ ಡೊನಾಲ್ಡ್​ ಟ್ರಂಪ್​ ಸಹ ಸೆನಟ್​​ನಲ್ಲಿ ಹೆಚ್ಚಿನ ಬೆಂಬಲ ಪಡೆದು ವಾಗ್ದಂಡನೆ ನಿರ್ಣಯದ ವಿರುದ್ಧ ಗೆಲುವು ಸಾಧಿಸಿದ್ದಾರೆ.

ಟ್ರಂಪ್‌ ವಿರುದ್ಧ ಇದ್ದ ಆರೋಪಗಳೇನು?
1. ಅಧಿಕಾರದ ದುರುಪಯೋಗ ಅಧ್ಯಕ್ಷ ಮರು ಆಯ್ಕೆಗೆ ವಿದೇಶಿ ಸರಕಾರದ ನೆರವು ಪಡೆದ ಗಂಭೀರ ಆರೋಪ.
2. ವಾಗ್ದಂಡನೆ ಪ್ರಕ್ರಿಯೆಯಲ್ಲಿ ಕಾಂಗ್ರೆಸ್‌ ಕಾರ್ಯ ನಿರ್ವಹಣೆಗೆ ಅಡ್ಡಿ ಆರೋಪವನ್ನ ಟ್ರಂಪ್​ ವಿರುದ್ಧ ಮಾಡಲಾಗಿತ್ತು.

ಹೀಗಿತ್ತು ಟ್ರಂಪ್​ ವಿರುದ್ಧದ ವಾಗ್ದಂಡನೆ ಪ್ರಕ್ರಿಯೆ:

- ಒಟ್ಟಾರೆ 126 ಗಂಟೆಗಳಿಗೂ ಹೆಚ್ಚು ಕಾಲ ವಾಗ್ದಂಡನೆ ಪ್ರಕ್ರಿಯೆ ನಡೆದಿತ್ತು.
- ಡಿಸೆಂಬರ್‌ 18: ಹೌಸ್‌ ಆಫ್‌ ರಿಪ್ರಸೆಂಟೆಟೀವ್‌ನಲ್ಲಿ ವಾಗ್ದಂಡನೆಗೆ ಒಪ್ಪಿಗೆ ಸಿಕ್ಕಿತ್ತು
- 2020 ಜನವರಿ 6: ರಿಪಬ್ಲಿಕನ್ನರೇ ಹೆಚ್ಚಾಗಿರುವ ಸೆನೆಟ್‌ನಲ್ಲಿ ವಿಚಾರಣೆ ಆರಂಭಗೊಂಡು, ವಾಗ್ದಂಡನೆಯ ಪ್ರಕ್ರಿಯೆಯೆ ನಿಯಮ, ಮಾರ್ಗದರ್ಶಿ ಸೂತ್ರಗಳನ್ನು ನಿಗದಿಪಡಿಸಲಾಗಿತ್ತು.
- ಟ್ರಂಪ್​​ ಪರ ಹಾಗೂ ವಿರೋಧವಾಗಿ ಸೆನೆಟ್​ನಲ್ಲಿ ವಾದ - ಪ್ರತಿವಾದಗಳು ನಡೆದು, ಬುಧವಾರ ಮತಕ್ಕೆ ಹಾಕಲಾಗಿತ್ತು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.