ETV Bharat / international

ಲಸಿಕೆ ಪ್ರಕಟಣೆಯನ್ನು ಎಫ್‌ಡಿಎ ಮತ್ತು ಫಿಜರ್ ತಡೆ ಹಿಡಿದಿದೆ: ಟ್ರಂಪ್ ಆರೋಪ

author img

By

Published : Nov 10, 2020, 11:30 AM IST

ಯುಎಸ್ ಫುಡ್ ಅಂಡ್ ಡ್ರಗ್ ಅಡ್ಮಿನಿಸ್ಟ್ರೇಷನ್ "ಮತ್ತು ಪ್ರಜಾಪ್ರಭುತ್ವವಾದಿಗಳಿಗೆ ಯುಎಸ್​​ ಅಧ್ಯಕ್ಷೀಯ ಚುನಾವಣೆಗೆ ಮುಂಚಿತವಾಗಿ ಲಸಿಕೆ ಕಂಡುಹಿಡಿದ ಗೆಲುವು ನನಗೆ ಲಭಿಸುವುದು ಇಷ್ಟವಿರಲಿಲ್ಲ, ಆದ್ದರಿಂದ ಚುನಾವಣೆ ನಡೆದ ಐದು ದಿನಗಳ ನಂತರ ಲಸಿಕೆಯನ್ನು ಘೋಷಿಸಲಾಯ್ತು ಎಂದು ಡೊನಾಲ್ಡ್​​ ಟ್ರಂಪ್ ಟ್ವೀಟ್​​ನಲ್ಲಿ ಕಿಡಿಕಾರಿದ್ದಾರೆ.

COVID-19 vaccine announcement
ಟ್ರಂಪ್ ಆರೋಪ

ವಾಷಿಂಗ್​ಟನ್​​ :ಎಫ್‌ಡಿಎ ( ಆಹಾರ ಮತ್ತು ಔಷಧ ಆಡಳಿತ )ಮತ್ತು ಫಿಜರ್ ಕಂಪನಿಯವರು ನಾನು 'ಲಸಿಕೆ ಕಂಡುಹಿಡಿದ ಗೆಲುವು' ಪಡೆಯುವುದನ್ನು ತಡೆಯಲು ಚುನಾವಣೆಗೆ ಮುನ್ನ ಕೋವಿಡ್​​ 19 ಲಸಿಕೆ ಕುರಿತ ಪ್ರಕಟಣೆ ತಡೆಹಿಡಿದಿದ್ದಾರೆ ಎಂದು ಹಾಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆರೋಪಿಸಿದ್ದಾರೆ.

ಪ್ರಾರಂಭದಲ್ಲಿ ಕೋವಿಡ್​​-19 ತಡೆಗಟ್ಟುವಲ್ಲಿ ತಾನು ಕಂಡು ಹಿಡಿದಿರುವ ಲಸಿಕೆ ಶೇ.90 ರಷ್ಟು ಪರಿಣಾಮಕಾರಿ ಎಂದು ಫಾರ್ಮಾ ಮೇಜರ್ ಫಿಜರ್ ಕಂಪನಿ ಘೋಷಿಸಿದೆ. ಸಾರ್ಸ್​ ಅಥವಾ ಕೋವಿಡ್​ ಸೋಂಕು ತಗುಲಿದ ಹಿನ್ನೆಲೆ ಹೊಂದಿಲ್ಲದವರಿಗೆ ಲಸಿಕೆ ನೀಡಿದಾಗ ಶೇ.90 ಕ್ಕಿಂತ ಹೆಚ್ಚು ಪರಿಣಾಮಕಾರಿಯಾಗಿದೆ ಎಂದು ಫಿಜರ್ ಹೇಳಿದೆ.

ಒಂದು ವೇಳೆ ಜೋ ಬೈಡನ್​ ಅಧ್ಯಕ್ಷರಾಗಿದ್ದರೆ, ನೀವು ಇನ್ನೂ ನಾಲ್ಕು ವರ್ಷಗಳವರೆಗೆ ಲಸಿಕೆ ಕಂಡು ಹಿಡಿಯುತ್ತಿರಲಿಲ್ಲ, ಅಥವಾ ಆಹಾರ ಮತ್ತು ಔಷಧ ಆಡಳಿತ ಅದನ್ನು ಶೀಘ್ರವಾಗಿ ಅಂಗೀಕರಿಸುತ್ತಿರಲಿಲ್ಲ. ಬಿಡೆನ್​ ಅಧಿಕಾರಶಾಹಿ ಲಕ್ಷಾಂತರ ಜೀವಗಳನ್ನು ನಾಶಪಡಿಸುತ್ತಿತ್ತು ಎಂದು ಟ್ರಂಪ್ ಆರೋಪಿಸಿದರು.ಈ ಹಿಂದೆ ​ತ್ವರಿತಗತಿಯಲ್ಲಿ ಕೊರೊನಾ ಲಸಿಕೆ ಅಭಿವೃದ್ಧಿ, ಅನುಮೋದನೆಗೆ ಎದುರಾಗಿದ್ದ ಅಧಿಕಾರಶಾಹಿ ಅಡೆತಡೆಗಳನ್ನು ತೆಗೆದುಹಾಕುವಲ್ಲಿ ನಾನು ಕೆಲಸ ಮಾಡಿದ್ದೇನೆ ಎಂದು ಟ್ರಂಪ್ ಹೇಳಿದ್ದಾರೆ.

ನಾನು ಬಹಳ ಹಿಂದೆಯೇ ಫಿಜರ್ ಮತ್ತು ಇತರರು ಚುನಾವಣೆಯ ನಂತರ ಮಾತ್ರ ಲಸಿಕೆ ಘೋಷಿಸುತ್ತಾರೆ ಎಂದಿದ್ದೆ. ಏಕೆಂದರೆ ಮೊದಲೇ ಹೇಳಲು ಅವರು ಧೈರ್ಯ ಮಾಡಲಿಲ್ಲ. ಅಂತೆಯೇ, ಯುಎಸ್​​ನ ಎಫ್​ಡಿಐ ಇದನ್ನು ಮೊದಲೇ ಘೋಷಿಸಬೇಕಾಗಿತ್ತು, ರಾಜಕೀಯ ಉದ್ದೇಶಗಳಿಗಾಗಿ ಅಲ್ಲವಾದರೂ ಅಮಾಯಕ ಜೀವಗಳನ್ನು ಉಳಿಸಲು ಘೋಷಿಸಬೇಕಿತ್ತು ಎಂದು ಟ್ರಂಪ್​​ ಟ್ವಿಟರ್​​ನಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇನ್ನು ಇದೇ ವೇಳೆ, ಫಿಜರ್ ಕಂಪನಿ ಕಂಡು ಹಿಡಿದಿರುವ ಕೋವಿಡ್​​ ಲಸಿಕೆ ಕುರಿತು ಪ್ರಶಂಸೆ ವ್ಯಕ್ತಪಡಿಸಿರುವ ನಿಯೋಜಿತ ಅಮೆರಿಕ ಅಧ್ಯಕ್ಷ ಜೋ ಬೈಡನ್​​​, ಈ ಲಸಿಕೆ ಅಭಿವೃದ್ಧಿ ಪಡಿಸಲು ಸಹಾಯ ಮಾಡಿದ ಎಲ್ಲ ಅದ್ಭುತ ಮಹಿಳೆಯರು ಮತ್ತು ಪುರುಷರನ್ನು ನಾನು ಅಭಿನಂದಿಸುತ್ತೇನೆ ಎಂದಿದ್ದಾರೆ. ಇದೇ ವೇಳೆ, ಕೋವಿಡ್​​ ವೈರಸ್​ ವಿರುದ್ಧದ ಯುದ್ಧದ ಅಂತ್ಯಗೊಳ್ಳಬೇಕಾದರೆ ಇನ್ನೂ ಕೆಲವು ತಿಂಗಳುಗಳ ಕಾಲ ಹೋರಾಡಬೇಕು ಎಂಬುದನ್ನು ಮರೆಯುವಂತಿಲ್ಲ ಎಂದು ಬೈಡನ್​ ಹೇಳಿದ್ದಾರೆ. ಹಾಗೆಯೇ ಕೊರೊನಾ ವೈರಸ್ ವಿರುದ್ಧದ ಹೋರಾಟದಲ್ಲಿ ದೈತ್ಯ ಹೆಜ್ಜೆ ಇಡುವಂತ ಲಸಿಕೆಯ ಬಗೆಗಿನ ಒಳ್ಳೆಯ ಸುದ್ದಿಯನ್ನು ಜಗತ್ತು ಸ್ವಾಗತಿಸುತ್ತದೆ ಎಂದು ಸ್ಪೀಕರ್ ನ್ಯಾನ್ಸಿ ಪೆಲೋಸಿ ಹೇಳಿದ್ರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.