ETV Bharat / international

ಟ್ರಂಪ್​ ವಾಗ್ದಂಡನೆ ವಿಚಾರಣೆಗೆ ವ್ಯವಸ್ಥಾಪಕರನ್ನು ನೇಮಿಸಿದ ಪೆಲೋಸಿ

author img

By

Published : Jan 16, 2020, 9:10 AM IST

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಯುಎಸ್ ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್ ದೋಷಾರೋಪಣೆ ಮಾಡಿದ ನಾಲ್ಕು ವಾರಗಳ ನಂತರ, ಸ್ಪೀಕರ್ ನ್ಯಾನ್ಸಿ ಪೆಲೋಸಿ ಬುಧವಾರ ಸೆನೆಟ್​ನಲ್ಲಿ ನಡೆಯುವ ವಾಗ್ದಂಡನೆ ವಿಚಾರಣೆಗೆ ವ್ಯವಸ್ಥಾಪಕರನ್ನ ಹೆಸರಿಸಿದ್ದಾರೆ. ವಾಗ್ದಂಡನೆ ವಿಚಾರಣೆ ಮುಂದಿನ ವಾರದಲ್ಲಿ ಆರಂಭವಾಗಲಿದೆ.

Pelosi Names Managers For Senate Impeachment Trial Of Trump
ಟ್ರಂಪ್​ ವಾಗ್ದಂಡನೆ ವಿಚಾರಣೆ

ವಾಷಿಂಗ್ಟನ್​: ಯುಎಸ್​ಎ ಸೆನೆಟ್​ನ ಸ್ಪೀಕರ್ ನ್ಯಾನ್ಸಿ ಪೆಲೋಸಿ, ಮುಂದಿನ ವಾರ ಸೆನೆಟ್​ನಲ್ಲಿ ನಡೆಯುವ ವಾಗ್ದಂಡನೆ ವಿಚಾರಣೆಗೆ ವ್ಯವಸ್ಥಾಪಕರನ್ನು ಹೆಸರಿಸಿದ್ದಾರೆ. ವಾಗ್ದಂಡನೆ ವಿಚಾರಣೆ ಮುಂದಿನ ವಾರದಲ್ಲಿ ಆರಂಭವಾಗಲಿದೆ.

ಗುಪ್ತಚರ ಶಾಶ್ವತ ಆಯ್ಕೆ ಸಮಿತಿಯ ಅಧ್ಯಕ್ಷರಾದ ಕಾಂಗ್ರೆಸ್ ಸದಸ್ಯ ಆಡಮ್ ಸ್ಕಿಫ್ ಅವರನ್ನು ವಾಗ್ದಂಡನೆ ವಿಚಾರಣೆಯ ಪ್ರಮುಖ ವ್ಯವಸ್ಥಾಪಕರಾಗಿ ಆಯ್ಕೆ ಮಾಡಲಾಗಿದೆ.

ಜನವರಿ 21 ರಂದು ಸೆನೆಟ್​ನಲ್ಲಿ ಪ್ರಾರಂಭವಾಗಲಿರುವ ವಾಗ್ದಂಡನೆ ವಿಚಾರಣೆಯಲ್ಲಿ, ಸದನದ ನ್ಯಾಯಾಂಗ ಸಮಿತಿಯ ಅಧ್ಯಕ್ಷರಾದ ಕಾಂಗ್ರೆಸ್​ ನಾಯಕ ಜೆರ್ರಿ ನಾಡ್ಲರ್, ಸದನ ಆಡಳಿತ ಮಂಡಳಿಯ ಅಧ್ಯಕ್ಷೆ ಹಾಗೂ ಕಾಂಗ್ರೆಸ್ ನಾಯಕಿ ಜೊ ಲೋಫ್ಗ್ರೆನ್, ಹೌಸ್ ಡೆಮಾಕ್ರಟಿಕ್ ಮತ್ತು ಕಾಂಗ್ರೆಸ್ ನಾಯಕಿ ವಾಲ್ ಡೆಮಿಂಗ್ಸ್​ ಸದನದ ಪರವಾಗಿ ವಾದ ಮಂಡಿಸಲಿದ್ದಾರೆ.

ಇದು ಯುನೈಟೆಡ್ ಸ್ಟೇಟ್​ನ ಸಾಂವಿಧಾನಿಕ ವಿಚಾರ. ಇದನ್ನು ಅಧ್ಯಕ್ಷ ಟ್ರಂಪ್​ ಮತ್ತು ರಷ್ಯಾ ಅಧ್ಯಕ್ಷ ಪುಟಿನ್ ತಿಳಿದುಕೊಳ್ಳಬೇಕಾಗಿರುವುದು ಬಹಳ ಮುಖ್ಯ. ಅಮೆರಿಕದ ಅಧ್ಯಕ್ಷರು ಯಾರೆಂದು ಅಮೆರಿಕ ಮತದಾರರು ನಿರ್ಧರಿಸಬೇಕು, ಪುಟಿನ್ ಅಲ್ಲ ಎಂದು ಪೆಲೋಸಿ ಹೇಳಿದ್ದಾರೆ.

ಈ ಪ್ರಕರಣಕ್ಕೆ ವ್ಯವಸ್ಥಾಪಕರನ್ನು ಆಯ್ಕೆ ಮಾಡಲು ನನಗೆ ತುಂಬಾ ಹೆಮ್ಮೆ ಇದೆ. ಅಧ್ಯಕ್ಷರ ದೋಷಾರೋಪಣೆ ಸಾಬೀತಾಗಿ, ಅವರನ್ನು ಅಧ್ಯಕ್ಷ ಸ್ಥಾನದಿಂದ ತೆಗೆದುಹಾಕುವ ವಿಷಯದಲ್ಲಿ ನಮಗೆ ಹೆಚ್ಚಿನ ವಿಶ್ವಾಸವಿದೆ ಎಂದು ಪೆಲೋಸಿ ಹೇಳಿದ್ದಾರೆ.

Intro:Body:Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.