ETV Bharat / international

ಪ್ರಮಾಣ ವಚನ ಸ್ವೀಕರಿಸಿದ ಅಮೆರಿಕದ ನೂತನ ಸೆನೆಟರ್​ಗಳು

author img

By

Published : Jan 4, 2021, 2:48 PM IST

Updated : Jan 4, 2021, 3:16 PM IST

ನವೆಂಬರ್​ನಲ್ಲಿ ನಡೆದ ಚುನಾವಣೆಯಲ್ಲಿ ಆಯ್ಕೆಯಾಗಿದ್ದ ಸೆನೆಟರ್​ಗಳು ಇಂದು ಅಮೆರಿಕದ 117ನೇ ಕಾಂಗ್ರೆಸ್ ಸಭೆಯಲ್ಲಿ ಪ್ರಮಾಣ ವಚನ ಸ್ವೀಕರಿಸಿದರು.

US Senate
ಅಮೆರಿಕ ಕಾಂಗ್ರೆಸ್

ವಾಷಿಂಗ್ಟನ್: ಅಮೆರಿಕ ರಾಜಧಾನಿ ವಾಷಿಂಗ್ಟನ್​ನಲ್ಲಿ ನಡೆದ 117ನೇ ಕಾಂಗ್ರೆಸ್ ಸಭೆಯಲ್ಲಿ ನೂತನ ಸೆನೆಟರ್​ಗಳು ಪ್ರಮಾಣ ವಚನ ಸ್ವೀಕರಿಸಿದರು. ಇದೇ ವೇಳೆ ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್​ ಸ್ಪೀಕರ್​ ಆಗಿ ನ್ಯಾನ್ಸಿ ಪೆಲೋಸಿ ಎರಡು ವರ್ಷಗಳ ಅವಧಿಗೆ ಮತ್ತೆ ಆಯ್ಕೆಯಾದರು.

ಸೆನೆಟ್​ ಹಾಗೂ ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್ ಅಮೆರಿಕ ಸಂಸತ್ತಿನ (ಕಾಂಗ್ರೆಸ್​) ಎರಡು ಸದನಗಳಾಗಿವೆ. ಸೆನೆಟ್ ಮೇಲ್ಮನೆಯಾಗಿದ್ದರೆ, ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್ ಸಂಸತ್ತಿನ ಕೆಳಮನೆಯಾಗಿದೆ. ನವೆಂಬರ್​ನಲ್ಲಿ ನಡೆದ ಚುನಾವಣೆಯಲ್ಲಿ ಆಯ್ಕೆಯಾಗಿದ್ದ ಸೆನೆಟರ್​ಗಳು ಇಂದು ಪ್ರಮಾಣ ವಚನ ಸ್ವೀಕರಿಸಿದ್ದಾರೆ.

ಚುನಾಯಿತ ಅಧ್ಯಕ್ಷ ಜೋ ಬೈಡನ್​ ಜನವರಿ 20ರಂದು ಅಮೆರಿಕ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಳ್ಳಲಿದ್ದು, ಜನವರಿ 6ರಂದು ಎರಡು ಸದನಗಳ ಜಂಟಿ ಅಧಿವೇಶನ ಕರೆಯಲಾಗಿದೆ. ಅಧಿವೇಶನದಲ್ಲಿ ರಿಪಬ್ಲಿಕನ್​ ಪಕ್ಷದವರು ಬೈಡನ್​ರ ಗೆಲುವನ್ನು ವಿರೋಧಿಸುವ ಸಾಧ್ಯತೆಗಳಿವೆ.

ಇದನ್ನೂ ಓದಿ: ಟ್ರಂಪ್​ ವಿರುದ್ಧ ಅಧಿಕಾರ ದುರುಪಯೋಗದ ಆರೋಪ ಮಾಡಿದ ಕಮಲಾ ಹ್ಯಾರಿಸ್​

ಈ ಬಾರಿಯ ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಡೆಮಾಕ್ರಟಿಕ್​ ಪಕ್ಷದ ಅಭ್ಯರ್ಥಿ ಜೋ ಬೈಡನ್ ವಿರುದ್ಧ ಸುಮಾರು 1,50,000 ಮತಗಳ ಅಂತರದಿಂದ ಟ್ರಂಪ್​ ಸೋತಿದ್ದರು. ಆದರೆ ಫಲಿತಾಂಶ ಬಂದಾಗಿನಿಂದ ಇಂದಿನವರೆಗೂ ಟ್ರಂಪ್​ ತಮ್ಮ ಸೋಲನ್ನು ಹಾಗೂ ಬೈಡನ್ ಗೆಲುವನ್ನು ಒಪ್ಪಲು ನಿರಾಕರಿಸುತ್ತಲೇ ಬಂದಿದ್ದಾರೆ. ಮತ ಎಣಿಕೆ ಪ್ರಕ್ರಿಯೆಯಲ್ಲಿ ವಂಚನೆ ನಡೆದಿದೆ ಎಂದು ಆರೋಪಿಸುತ್ತಾ ಬಂದಿದ್ದಾರೆ.

Last Updated : Jan 4, 2021, 3:16 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.