ETV Bharat / international

ಟ್ರಂಪ್​ ಮೇಲಿನ ದೋಷಾರೋಪ: ಅಧ್ಯಕ್ಷರ ಪರ ವಾದ ಮಾಡಲಿದ್ದಾರೆ ಕೆನ್ನೆತ್​...! ಯಾರಿವರು?

author img

By

Published : Jan 18, 2020, 1:12 PM IST

ಜನವರಿ 21 ರಂದು ಪ್ರಾರಂಭವಾಗಲಿರುವ ಸೆನೆಟ್ ವಿಚಾರಣೆಯಲ್ಲಿ ಡರ್ಶೋವಿಟ್ಜ್ ಮೌಖಿಕ ವಾದ ಮಂಡಿಸಲಿದ್ದಾರೆ ಎಂದು ಟ್ರಂಪ್ ಅವರ ಕಾನೂನು ತಂಡದ ವಕ್ತಾರರು ತಿಳಿಸಿದ್ದಾರೆ.

Trump
ಟ್ರಂಪ್​

ವಾಷಿಂಗ್ಟನ್: 1990ರ ದಶಕದಲ್ಲಿ ಅಮೆರಿಕದ ಮಾಜಿ ಅಧ್ಯಕ್ಷ ಬಿಲ್ ಕ್ಲಿಂಟನ್ ಅವರ ದೋಷಾರೋಪಣೆಗೆ ಕಾರಣವಾದ ಪ್ರಸಿದ್ಧ ಪ್ರಾಸಿಕ್ಯೂಟರ್ ಕೆನ್ನೆತ್ ಸ್ಟಾರ್, ಇದೀಗ ಯುಎಸ್ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪರ ವಾದ ಮಂಡನೆ ಮಾಡಲಿದ್ದಾರೆ ಎಂದು ಮಾಧ್ಯಮ ವರದಿಗಳು ತಿಳಿಸಿವೆ.

ಕ್ಲಿಂಟನ್ ಆಡಳಿತದ ಅವಧಿಯಲ್ಲಿ ಸ್ವತಂತ್ರ ವಕೀಲರ ಕಚೇರಿಯಲ್ಲಿ ಸ್ಟಾರ್ ಅವರ ಉತ್ತರಾಧಿಕಾರಿಯಾದ ಸಾಂವಿಧಾನಿಕ ವಕೀಲ ಅಲನ್ ಡೆರ್ಶೋವಿಟ್ಜ್ ಮತ್ತು ರಾಬರ್ಟ್ ರೇ ಕೂಡ ಈ ತಂಡಕ್ಕೆ ಸೇರುತ್ತಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.

ಜನವರಿ 21 ರಂದು ಪ್ರಾರಂಭವಾಗಲಿರುವ ಸೆನೆಟ್ ವಿಚಾರಣೆಯಲ್ಲಿ ಡರ್ಶೋವಿಟ್ಜ್ ಮೌಖಿಕ ವಾದ ಮಂಡಿಸಲಿದ್ದಾರೆ ಎಂದು ಟ್ರಂಪ್ ಅವರ ಕಾನೂನು ತಂಡದ ವಕ್ತಾರರು ತಿಳಿಸಿದ್ದಾರೆ.

"ಸಂವಿಧಾನದ ಸಮಗ್ರತೆಯನ್ನು ಕಾಪಾಡಲು ಮತ್ತು ಅಪಾಯಕಾರಿ ಸಾಂವಿಧಾನಿಕ ಪೂರ್ವ ನಿದರ್ಶನವನ್ನು ಸೃಷ್ಟಿಸುವುದನ್ನು ತಡೆಯಲು ಅವರು ಈ ದೋಷಾರೋಪಣೆ ವಿಚಾರಣೆಯಲ್ಲಿ ಭಾಗವಹಿಸುತ್ತಿದ್ದಾರೆ" ಎನ್ನಲಾಗಿದೆ.

Intro:Body:Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.