ETV Bharat / international

ರಷ್ಯಾದ ಪತ್ರಕರ್ತರಿಗೆ 'ಲಸಿಕೆ ಮೈತ್ರಿ' ಬಗ್ಗೆ ರಷ್ಯಾದ ಭಾರತೀಯ ರಾಯಭಾರಿಯಿಂದ ಮಾಹಿತಿ

author img

By

Published : Jan 26, 2021, 8:04 AM IST

ನವದೆಹಲಿಯ ಲಸಿಕೆ ಮೈತ್ರಿ ಉಪ ಕ್ರಮದ ಬಗ್ಗೆ ಸಂಕ್ಷಿಪ್ತವಾಗಿ ಹೇಳುವ ಸಲುವಾಗಿ, ರಷ್ಯಾದ ಭಾರತೀಯ ರಾಯಭಾರಿ ಡಿ.ಬಿ. ವೆಂಕಟೇಶ್ ವರ್ಮಾ ಅವರು ಸೋಮವಾರ ಮಾಸ್ಕೋದಲ್ಲಿ ರಷ್ಯಾದ ಪತ್ರಕರ್ತರಿಗೆ ಸ್ವಾಗತ ಕೋರಿದರು. ಸ್ಪುಟ್ನಿಕ್ ವಿ ಭಾರತದಲ್ಲಿ ಅಂತಿಮ ಹಂತದ ಪ್ರಯೋಗಗಳಲ್ಲಿದ್ದಾರೆ ಎಂದು ರಾಯಭಾರಿ ಹೇಳಿದ್ದಾರೆ.

ರಷ್ಯಾದ ಭಾರತೀಯ ರಾಯಭಾರಿ ಡಿ.ಬಿ. ವೆಂಕಟೇಶ್ ವರ್ಮಾ
ರಷ್ಯಾದ ಭಾರತೀಯ ರಾಯಭಾರಿ ಡಿ.ಬಿ. ವೆಂಕಟೇಶ್ ವರ್ಮಾ

ಮಾಸ್ಕೋ (ರಷ್ಯಾ): ರಷ್ಯಾದ ಭಾರತೀಯ ರಾಯಭಾರಿ ಡಿ.ಬಿ. ವೆಂಕಟೇಶ್ ವರ್ಮಾ ಅವರು ಸೋಮವಾರ ಮಾಸ್ಕೋದಲ್ಲಿ ರಷ್ಯಾದ ಮುದ್ರಣ ಮತ್ತು ಎಲೆಕ್ಟ್ರಾನಿಕ್ ಪತ್ರಕರ್ತರನ್ನು ಸ್ವಾಗತಿಸಿ, ಬಳಿಕ ನವದೆಹಲಿಯ 'ಲಸಿಕೆ ಮೈತ್ರಿ' ಉಪಕ್ರಮದ ಬಗ್ಗೆ ಮಾಹಿತಿ ನೀಡಿದರು.

ಈ ಸಂದರ್ಭದಲ್ಲಿ ರಾಯಭಾರಿ ವರ್ಮಾ ಅವರು, ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಪ್ರಧಾನಿ ಮೋದಿ ಹೇಳಿದ ಮಾತನ್ನು ಇಲ್ಲಿ ಮತ್ತೊಮ್ಮೆ ಉಲ್ಲೇಖಿಸಿದರು. "ಭಾರತವು ಏನನ್ನು ಹೊಂದಿದೆ, ಅದನ್ನು ಹಂಚಿಕೊಳ್ಳುತ್ತದೆ. ಇಡೀ ಜಗತ್ತು ಒಂದು ಕುಟುಂಬವಿದ್ದಂತೆ" ಎಂದರು.

30 ಕ್ಕೂ ಹೆಚ್ಚು ರಷ್ಯಾದ ಪತ್ರಕರ್ತರು ಭಾರತ ತನ್ನ ನೆರೆಹೊರೆಯವರಿಗೆ ನೀಡುತ್ತಿರುವ ಲಸಿಕೆ ಸಹಾಯದ ಬಗ್ಗೆ ಆಸಕ್ತಿ ತೋರಿಸಿದರು. ಅಲ್ಲದೇ ಸುಮಾರು 90 ದೇಶಗಳಿಗೆ ಸಹಾಯ ಮಾಡಲು ಯೋಜಿಸಿದ್ದಾರೆ. "ಫಾರ್ಮಸಿ ಆಫ್ ದಿ ವರ್ಲ್ಡ್" ಪಾತ್ರದಲ್ಲಿ ಭಾರತದ ಪಾತ್ರವನ್ನು ಅವರು ಶ್ಲಾಘಿಸಿದರು.

ಓದಿ:ಇಟಲಿ ಪ್ರಧಾನಿ ಗಿಸೆಪ್ಪೆ ಕಾಂಟೆ ರಾಜೀನಾಮೆ ನಿರ್ಧಾರ ಇಂದು ಪ್ರಕಟ!

ರಾಯಭಾರಿ ವರ್ಮಾ ಅವರು ಭಾರತ ಮತ್ತು ರಷ್ಯಾ ನಡುವಿನ ಅತ್ಯುತ್ತಮ ಸಂಬಂಧಗಳ ಬಗ್ಗೆ ಮಾತನಾಡಿದರು ಮತ್ತು ಮಿಲಿಟರಿ - ತಾಂತ್ರಿಕ ಸಹಕಾರ, ಔಷಧೀಯ ವಸ್ತುಗಳು, ಇಂಧನ ಇತ್ಯಾದಿಗಳನ್ನು ಒಳಗೊಂಡಂತೆ ವಿವಿಧ ಕ್ಷೇತ್ರಗಳಲ್ಲಿ ಭಾರತ - ರಷ್ಯಾ ಸಂಬಂಧಗಳಲ್ಲಿ 2020 ರ ಮುಖ್ಯಾಂಶಗಳನ್ನು ಉಲ್ಲೇಖಿಸಿದರು.

ಇದಲ್ಲದೇ ಸ್ಪುಟ್ನಿಕ್ ವಿ ಭಾರತದಲ್ಲಿ ಅಂತಿಮ ಹಂತದ ಪ್ರಯೋಗಗಳಲ್ಲಿದೆ ಎಂದು ರಾಯಭಾರಿ ಹೇಳಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.