ETV Bharat / international

ಚೀನಾದಿಂದ ಭಾರತಕ್ಕೆ ಜಿಯೋ - ಪೊಲಿಟಿಕಲ್ ಸಮಸ್ಯೆ ತೀವ್ರ: ಶ್ವೇತಭವನದ ಇಂಡೋ-ಪೆಸಿಫಿಕ್ ಸ್ಟ್ರಾಟೆಜಿಕ್ ವರದಿ

author img

By

Published : Feb 12, 2022, 8:02 AM IST

ಭಾರತವು ನಮ್ಮ ಕಾರ್ಯತಂತ್ರದ ಪಾಲುದಾರ ಎಂದು ಗುರುತಿಸಲ್ಪಟ್ಟಿದೆ. ಈ ಸಂಬಂಧವನ್ನು ಗಮನಾರ್ಹವಾಗಿ ವಿಸ್ತರಿಸಲು ಮತ್ತಷ್ಟು ಬಲಪಡಿಸಲು ಹಿಂದಿನ ಆಡಳಿತಗಳ ಮಾಡಿರುವ ಉತ್ತಮ ಕೆಲಸವನ್ನು ಮುಂದುವರೆಸುವ ಬಯಕೆಯಿದೆ ಎಂದು ಅಮೆರಿಕದ ಅಧಿಕಾರಿಗಳು ಸ್ಪಷ್ಟನೆ ನೀಡಿದ್ದಾರೆ.

India faces "very significant challenges", especially from China, says White House as it releases Indo-Pacific strategy
ಚೀನಾದಿಂದ ಭಾರತಕ್ಕೆ ಜಿಯೋ-ಪೊಲಿಟಿಕಲ್ ಸಮಸ್ಯೆ ತೀವ್ರ:ಶ್ವೇತಭವನದ ಇಂಡೋ-ಪೆಸಿಫಿಕ್ ಸ್ಟ್ರಾಟೆಜಿಕ್ ವರದಿ

ವಾಷಿಂಗ್ಟನ್(ಅಮೆರಿಕ): ಇಂಡೋ-ಪೆಸಿಫಿಕ್ ಸ್ಟ್ರಾಟೆಜಿಕ್ ವರದಿಯನ್ನು ಅಮೆರಿಕದ ಶ್ವೇತಭವನ ಬಿಡುಗಡೆ ಮಾಡಿದ್ದು, ಭಾರತವು ಹೆಚ್ಚಿನ ಮಟ್ಟಿಗೆ ಜಿಯೋ-ಪೊಲಿಟಿಕಲ್ (ಭೌಗೋಳಿಕತೆಗೆ ಸಂಬಂಧಿಸಿದ ರಾಜಕೀಯ) ಸವಾಲುಗಳನ್ನು ಎದುರಿಸುತ್ತಿದೆ. ಅದರಲ್ಲೂ ಚೀನಾ ಮತ್ತು ಎಲ್​ಎಸಿ ಗಡಿಯಲ್ಲಿ ಇದು ಸವಾಲು ತೀವ್ರವಾಗಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಶುಕ್ರವಾರ ಬಿಡುಗಡೆಯಾದ ಈ ವರದಿ ಜೋ ಬೈಡನ್ ಅಧಿಕಾರ ವಹಿಸಿಕೊಂಡ ನಂತರ ಪ್ರಕಟವಾದ ಇಂಡೋ-ಫೆಸಿಪಿಕ್ ಪ್ರದೇಶಕ್ಕೆ ಸಂಬಂಧಿಸಿದ ಮೊದಲ ನಿರ್ದಿಷ್ಟ ವರದಿಯಾಗಿದೆ. ಇಂಡೋ-ಪೆಸಿಫಿಕ್​​ ಭಾಗದಲ್ಲಿ ಅಮೆರಿಕವನ್ನು ಬಲಪಡಿಸಲು ಮತ್ತು ಭಾರತದ ನಾಯಕತ್ವವನ್ನು ಬೆಂಬಲಿಸಲು ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆ ವರದಿಯಲ್ಲಿ ಉಲ್ಲೇಖಿಸಲಾಗಿದೆ.

ದಕ್ಷಿಣ ಏಷ್ಯಾದಲ್ಲಿ ಸ್ಥಿರತೆಗಾಗಿ ಅಮೆರಿಕ ಮತ್ತು ಭಾರತವು ಒಟ್ಟಾಗಿ ಕಾರ್ಯತಂತ್ರ ಹಮ್ಮಿಕೊಳ್ಳುವ ಪಾಲುದಾರಿಕೆಯನ್ನು ಮುಂದುವರೆಸುತ್ತವೆ. ಆರೋಗ್ಯ, ಬಾಹ್ಯಾಕಾಶ ಮತ್ತು ಸೈಬರ್‌ಸ್ಪೇಸ್‌ ತಂತ್ರಜ್ಞಾನದಲ್ಲಿ ಪರಸ್ಪರ ಸಹಕಾರ ಬಲಪಡಿಸುವುದು. ಇಂಡೋ ಪೆಸಿಫಿಕ್ ಭಾಗವನ್ನು ಸಮಸ್ಯೆಗಳಿಂದ ಮುಕ್ತಗೊಳಿಸುವುದು. ಆರ್ಥಿಕ ಸಹಕಾರ ನೀಡುವುದು ಸೇರಿದಂತೆ ಹಲವಾರು ವಿಚಾರಗಳನ್ನು ವರದಿಯಲ್ಲಿ ಉಲ್ಲೇಖಿಸಲಾಗಿದೆ ಎಂದು ಶ್ವೇತ ಭವನ ಹೇಳಿದೆ.

ದಕ್ಷಿಣ ಏಷ್ಯಾ ಮತ್ತು ಹಿಂದೂ ಮಹಾಸಾಗರದಲ್ಲಿ ಭಾರತವನ್ನು ಸಮಾನ ಮನಸ್ಕ ಪಾಲುದಾರ ಮತ್ತು ನಾಯಕ ಎಂದು ನಾವು ಗುರುತಿಸುತ್ತೇವೆ. ಆಗ್ನೇಯ ಏಷ್ಯಾದಲ್ಲಿ ಭಾರತ ಸಕ್ರಿಯವಾಗಿದೆ. ಕ್ವಾಡ್ ಮತ್ತು ಇತರ ಒಕ್ಕೂಟಗಳು ಪ್ರಾದೇಶಿಕ ಅಭಿವೃದ್ಧಿಗೆ ಮತ್ತು ಬೆಳವಣಿಗೆಗೆ ಪ್ರೇರಕ ಶಕ್ತಿಯಾಗಿವೆ ಎಂದು ಶ್ವೇತ ಭವನ ಉಲ್ಲೇಖಿಸಿದೆ.

ಇದೇ ವೇಳೆ, ಅಮೆರಿಕದ ಹಿರಿಯ ಅಧಿಕಾರಿಯೊಬ್ಬರು ಭಾರತ ಎದುರಿಸುತ್ತಿರುವ ಮಹತ್ವದ ಸವಾಲುಗಳ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಎಲ್​ಎಸಿಯಲ್ಲಿ ಚೀನಾದ ನಡವಳಿಕೆ ಭಾರತ ಮೇಲೆ ಪರಿಣಾಮ ಬೀರುತ್ತಿದೆ. ಇಂಡೋ ಪೆಸಿಪಿಕ್ ಪ್ರದೇಶದಲ್ಲಿ ಸಮಸ್ಯೆಗಳನ್ನು ನಿವಾರಿಸಲು ಭಾರತದೊಂದಿಗೆ ಕೆಲಸ ಮಾಡುವ ಪ್ರಚಂಡ ಅವಕಾಶಗಳನ್ನು ಎದುರು ನೋಡುತ್ತಿದ್ದೇವೆ ಎಂದಿದ್ದಾರೆ.

ಇದನ್ನೂ ಓದಿ: UNHCR ಸಿಬ್ಬಂದಿ ಹಾಗೂ ಇಬ್ಬರು ವಿದೇಶಿ ಪತ್ರಕರ್ತರನ್ನು ಬಂಧ ಮುಕ್ತಗೊಳಿಸಿದ ತಾಲಿಬಾನ್​​

ಭಾರತವು ನಮ್ಮ ಕಾರ್ಯತಂತ್ರದ ಪಾಲುದಾರ ಎಂದು ಗುರುತಿಸಲ್ಪಟ್ಟಿದೆ. ಈ ಸಂಬಂಧವನ್ನು ಗಮನಾರ್ಹವಾಗಿ ವಿಸ್ತರಿಸಲು ಮತ್ತಷ್ಟು ಬಲಪಡಿಸಲು ಹಿಂದಿನ ಆಡಳಿತಗಳ ಮಾಡಿರುವ ಉತ್ತಮ ಕೆಲಸವನ್ನು ಮುಂದುವರೆಸುವ ಬಯಕೆಯಿದೆ ಎಂದು ಅಧಿಕಾರಿಗಳು ಸ್ಪಷ್ಟನೆ ನೀಡಿದ್ದಾರೆ. ಇಷ್ಟೇ ಅಲ್ಲದೇ ಡೊನಾಲ್ಡ್ ಟ್ರಂಪ್ ನೇತೃತ್ವದಲ್ಲಿ ಯುಎಸ್ ಆಡಳಿತವು ಇಂಡೋ-ಪೆಸಿಫಿಕ್ ಪ್ರದೇಶದಲ್ಲಿ ಉತ್ತಮ ಕೆಲಸ ಮಾಡಿದೆ ಎಂದು ಹಿರಿಯ ಆಡಳಿತಾಧಿಕಾರಿ ಹೇಳಿದ್ದಾರೆ.

ಆಸ್ಟ್ರೇಲಿಯಾದಲ್ಲಿ ಕ್ವಾಡ್ ಮಿನಿಸ್ಟ್ರಿಯಲ್ ಸಭೆ ನಡೆಯುತ್ತಿರುವುದರಿಂದ ಕಾರ್ಯತಂತ್ರದ ವರದಿಯನ್ನು ಬಿಡುಗಡೆ ಮಾಡಲಾಗಿದೆ. ಆಸ್ಟ್ರೇಲಿಯಾ, ಭಾರತ, ಜಪಾನ್ ಮತ್ತು ಯುಎಸ್ ವಿದೇಶಾಂಗ ಸಚಿವರು ಶುಕ್ರವಾರ ಈ ಸಭೆಯಲ್ಲಿ ಭಾಗವಹಿಸಿ ಚೀನಾದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಇಂಡೋ-ಪೆಸಿಫಿಕ್‌ನಲ್ಲಿ ತೀವ್ರ ಪ್ರಭಾವ ಹೊಂದಿರುವ ಚೀನಾ ತನ್ನ ಆರ್ಥಿಕ, ರಾಜತಾಂತ್ರಿಕ, ಮಿಲಿಟರಿ ಮತ್ತು ತಾಂತ್ರಿಕ ಶಕ್ತಿಯನ್ನು ಒಟ್ಟುಗೂಡಿಸುತ್ತಿದ್ದು, ವಿಶ್ವದ ಅತ್ಯಂತ ಪ್ರಭಾವಶಾಲಿ ಶಕ್ತಿಯಾಗಲು ಪ್ರಯತ್ನಿಸುತ್ತಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.