ETV Bharat / international

ಡೊನಾಲ್ಡ್​​ ಟ್ರಂಪ್ ಖುಲಾಸೆಯಾದರೆ...: ಡೆಮಾಕ್ರಾಟ್ಸ್​​ ಹೇಳೋದೇನು..?

author img

By

Published : Feb 12, 2021, 3:57 PM IST

ಭಾರತದಂತಹ ದೇಶಗಳಲ್ಲಿ ರಾಷ್ಟ್ರಪತಿ ಮತ್ತು ಸುಪ್ರೀಂ ಕೋರ್ಟ್​ನ ಮುಖ್ಯ ನ್ಯಾಯಮೂರ್ತಿಗಳನ್ನು ಅಧಿಕಾರದಿಂದ ಕೆಳಗಿಳಿಸಲು ಮಹಾಭಿಯೋಗ ಮಾಡಲಾಗುತ್ತದೆ. ಆದರೆ ಅಮೆರಿಕದಲ್ಲಿ ಅಧ್ಯಕ್ಷ ಹುದ್ದೆಯಿಂದ ಕೆಳಗಿಳಿದ ವ್ಯಕ್ತಿಯ ಮೇಲೂ ಆತನ ಮೇಲೆ ಗುರುತರ ಆರೋಪವಿದ್ದರೆ ಮಹಾಭಿಯೋಗ ಮಾಡಲಾಗುತ್ತದೆ

House Democrats say Trump might incite violence again if acquitted
ಡೊನಾಲ್ಡ್​​ ಟ್ರಂಪ್ ಖುಲಾಸೆಯಾದರೆ... : ಡೆಮಾಕ್ರಾಟ್ಸ್​​ ಹೇಳೋದೇನು..?

ವಾಷಿಂಗ್ಟನ್: ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಿರುದ್ಧ ಎರಡನೇ ಮಹಾಭಿಯೋಗದ ಮೂರನೇ ದಿನದ ವಿಚಾರಣೆ ನಡೆಸಲಾಗುತ್ತಿದ್ದು, ಮುಂದಿನ ದಿನಗಳಲ್ಲಿ ಈ ಮಹಾಭಿಯೋಗ ಸಾಕಷ್ಟು ಹಿಂಸಾಚಾರ ತಡೆಯಲಿದೆ ಎಂದು ಡೆಮಾಕ್ರಟಿಕ್ ಪಕ್ಷ ಸೆನೆಟ್​ನಲ್ಲಿ ವಾದಿಸಿದೆ.

ಮಹಾಭಿಯೋಗ ಮಂಡನೆ ವೇಳೆ ಮಾತನಾಡಿದ ಡೆಮಾಕ್ರಟಿಕ್ ಪಕ್ಷದ ಪ್ರತಿನಿಧಿ ಜಾಮಿ ರಸ್ಕಿನ್ 'ಡೊನಾಲ್ಡ್ ಟ್ರಂಪ್ ಹಿಂಸಾಚಾರವನ್ನು ಪ್ರಚೋದಿಸುವುದನ್ನು ನಿಲ್ಲಿಸುತ್ತಾರಾ..? ನೀವು ನಿಮ್ಮ ಕುಟುಂಬದ ಸುರಕ್ಷತೆಗೆ ಸಂಬಂಧಿಸಿದಂತೆ ಬಾಜಿ ಕಟ್ಟುತ್ತೀರಾ.?, ನಿಮ್ಮ ಪ್ರಜಾಪ್ರಭುತ್ವದ ವಿಚಾರವಾಗಿ ನೀವು ಬಾಜಿ ಕಟ್ಟುತ್ತೀರಾ.? ಎಂದು ಪ್ರಶ್ನಿಸಿ, ಡೊನಾಲ್ಡ್​ ಟ್ರಂಪ್ ಮಹಾಭೀಯೋಗದ ಪ್ರಾಮುಖ್ಯತೆ ಬಗ್ಗೆ ಹೇಳಿದ್ದಾರೆ.

ಇದನ್ನೂ ಓದಿ: ಪಾಕ್‌ನಲ್ಲಿ ಎರಡು ಪ್ರತ್ಯೇಕ ಘರ್ಷಣೆ ಪ್ರಕರಣ: ಒಂಬತ್ತು ಮಂದಿ ಸಾವು

ಅಮೆರಿಕದಲ್ಲಿ ಅಧ್ಯಕ್ಷರ ಅಧಿಕಾರ ವರ್ಗಾವಣೆ ವೇಳೆ ಕ್ಯಾಪಿಟಲ್​ನಲ್ಲಿ ನಡೆದ ಹಿಂಸಾಚಾರದ ವಿಚಾರವಾಗಿ ಅವರು ಖುಲಾಸೆಗೊಂಡರೆ ಮತ್ತೆ ಟ್ರಂಪ್ ಹಿಂಸಾಚಾರ ಸೃಷ್ಟಿಸುವ ಸಾಧ್ಯತೆಯಿದೆ ಎಂದು ಜಾಮಿ ರಸ್ಕಿನ್ ಹೇಳಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಸೆನೆಟ್​ನ ಮಹಾಭಿಯೋಗ ಅಧಿಕಾರಿ ಜೋ ನೆಗಸ್ ಮಾಜಿ ಅಧ್ಯಕ್ಷ ಡೊನಾಲ್ಡ್​ ಟ್ರಂಪ್ ಮಾಡಿರುವ ಅಪರಾಧಕ್ಕಾಗಿ ಅವರಿಗೆ ಶಿಕ್ಷೆ ವಿಧಿಸಲು ನಾವು ಕೇಳುತ್ತಿದ್ದೇವೆ. ನಾವು ಇದನ್ನು ವಿರೋಧಿಸಬೇಕಾಗಿದೆ ಎಂದು ಮನವಿ ಮಾಡಿದ್ದಾರೆ.

ಅಧಿಕಾರದಿಂದ ಕೆಳಗಿಳಿದ ಮೇಲೂ ಟ್ರಂಪ್ ವಿರುದ್ಧ ಏಕೆ ಮಹಾಭಿಯೋಗ..?

ಭಾರತದಂತಹ ದೇಶಗಳಲ್ಲಿ ರಾಷ್ಟ್ರಪತಿ ಮತ್ತು ಸುಪ್ರೀಂಕೋರ್ಟ್​ನ ಮುಖ್ಯ ನ್ಯಾಯಮೂರ್ತಿಗಳನ್ನು ಅಧಿಕಾರದಿಂದ ಕೆಳಗಿಳಿಸಲು ಮಹಾಭಿಯೋಗ ಮಾಡಲಾಗುತ್ತದೆ. ಆದರೆ ಅಮೆರಿಕದಲ್ಲಿ ಅಧ್ಯಕ್ಷ ಹುದ್ದೆಯಿಂದ ಕೆಳಗಿಳಿದ ವ್ಯಕ್ತಿಯ ಮೇಲೂ ಆತನ ಮೇಲೆ ಗುರುತರ ಆರೋಪವಿದ್ದರೆ ಮಹಾಭಿಯೋಗ ಮಾಡಲಾಗುತ್ತದೆ.

ಅಧಿಕಾರ ಹಿಡಿದ ಪಕ್ಷದಿಂದ ಮಹಾಭಿಯೋಗವನ್ನು ನಡೆಸಲು ಅವಕಾಶವಿದ್ದು, ಇದನ್ನು 'ತಡ ಮಹಾಭಿಯೋಗ'(late impeachment) ಎಂದು ಕರೆಯಲಾಗುತ್ತದೆ. ಮಹಾಭಿಯೋಗ ಯಶಸ್ವಿಯಾದರೆ ಆ ವ್ಯಕ್ತಿ ಮುಂದಿನ ದಿನಗಳಲ್ಲಿ ಅಧಿಕಾರ ಹಿಡಿಯಲು ಅವಕಾಶವಿಲ್ಲ. ಹೀಗಾಗಿ ಭವಿಷ್ಯದಲ್ಲಿ ಡೊನಾಲ್ಡ್ ಟ್ರಂಪ್ ಅಧಿಕಾರ ಹಿಡಿಯಲು ಸಾಧ್ಯವಾಗಬಾರದೆಂಬ ಕಾರಣಕ್ಕೆ ಮಹಾಭಿಯೋಗ ನಡೆಸಲಾಗುತ್ತಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.