ETV Bharat / international

ವ್ಯಾಕ್ಸಿನ್​ ಪಡೆದವರೂ ಇನ್ಮುಂದೆ ಮಾಸ್ಕ್​ ಧರಿಸಲೇಬೇಕಾದ ಅನಿವಾರ್ಯತೆ: ಫೌಸಿ

author img

By

Published : Jul 26, 2021, 11:48 AM IST

ಮಾಸ್ಕ್​ ಧರಿಸುವ ವಿಚಾರವಾಗಿ ಈ ಹಿಂದೆ ಹೊರಡಿಸಿದ್ದ ಆದೇಶದಿಂದ ಅಮೆರಿಕ ಸಂಕಷ್ಟಕ್ಕೆ ಸಿಲುಕಿದೆ. ಇದೀಗ ಲಸಿಕೆ ಪಡೆದವರೂ ಮಾಸ್ಕ್ ಧರಿಸಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ.

ಫೌಸಿ
ಫೌಸಿ

ವಿಲ್ಮಿಂಗ್ಟನ್: ಕೋವಿಡ್ ಡೆಲ್ಟಾ ರೂಪಾಂತರ ಹೆಚ್ಚಳದಿಂದಾಗಿ ಅಮೆರಿಕ ಅನಗತ್ಯ ಸಂಕಟಕ್ಕೆ ಸಿಲುಕಿದೆ ಎಂದು ರಾಷ್ಟ್ರದ ಉನ್ನತ ಸಾಂಕ್ರಾಮಿಕ ರೋಗ ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ.

ನಾವು ತಪ್ಪು ದಿಕ್ಕಿನಲ್ಲಿ ಸಾಗುತ್ತಿದ್ದೇವೆ. ಲಸಿಕೆ ಪಡೆದವರೂ ಇನ್ಮುಂದೆ ಮಾಸ್ಕ್​ ಹಾಕಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ ಎಂದು ಡಾ.ಆಂಥೋನಿ ಫೌಸಿ ಹೇಳಿದ್ದಾರೆ. ಅಲ್ಲದೇ, ವ್ಯಾಕ್ಸಿನ್​ ಪಡೆದವರಲ್ಲಿ ರೋಗ ನಿರೋಧಕ ಶಕ್ತಿ ವೃದ್ಧಿಯಾಗುವುದಕ್ಕೆ ಬೂಸ್ಟರ್​​ ಡೋಸ್​ ಪಡೆದುಕೊಳ್ಳಲು ಸೂಚಿಸಬಹುದು ಎಂದು ಫೌಸಿ ತಿಳಿಸಿದ್ದಾರೆ.

ಅಧ್ಯಕ್ಷ ಜೋ ಬೈಡನ್​ ಅವರ ಮುಖ್ಯ ವೈದ್ಯಕೀಯ ಸಲಹೆಗಾರರಾಗಿ ಸೇವೆ ಸಲ್ಲಿಸುತ್ತಿರುವ ಫೌಸಿ, ಈವರೆಗೆ ಮಾಸ್ಕ್​ ವಿಚಾರವಾಗಿದ್ದ ಮಾರ್ಗಸೂಚಿಗಳನ್ನು ಬದಲಾಯಿಸಬೇಕಿದೆ ಎಂದಿದ್ದಾರೆ. ಈ ಹಿಂದೆ ಅಮೆರಿಕದಲ್ಲಿ ವ್ಯಾಕ್ಸಿನ್ ಪಡೆದವರು ಮಾಸ್ಕ್​ ಧರಿಸುವಂತಿಲ್ಲ ಎಂಬ ಆದೇಶವಿತ್ತು.

ಇದನ್ನೂ ಓದಿ: COVID ಹೆಚ್ಚಳ: ಇಲ್ಲಿ ಒಳಾಂಗಣಗಳಲ್ಲೂ ಮಾಸ್ಕ್ ಧರಿಸುವಿಕೆ ಕಡ್ಡಾಯ!

ಲಾಸ್​ ಏಂಜಲೀಸ್​​​ ಕೌಂಟಿಯಲ್ಲಿ ನಿರಂತರವಾಗಿ ಕೋವಿಡ್​ ಪ್ರಮಾಣ ಹೆಚ್ಚುತ್ತಿರುವ ಹಿನ್ನೆಲೆ, ಅಲ್ಲಿನ ಸ್ಥಳೀಯ ಆಡಳಿತ ಜನರು ಒಳಾಂಗಣದಲ್ಲೂ ಮಾಸ್ಕ್ ಧರಿಸಬೇಕಿದೆ ಎಂಬ ಆದೇಶ ಹೊರಡಿಸಿದೆ. ಅಮೆರಿಕದಲ್ಲಿ ಈವರೆಗೆ ಶೇಕಡಾ 49 ರಷ್ಟು ಜನರಿಗೆ ವ್ಯಾಕ್ಸಿನ್​ ನೀಡಲಾಗಿದೆ. ಮುಂದಿನ ದಿನಗಳಲ್ಲಿ ವ್ಯಾಕ್ಸಿನ್​ ಅನ್ನು ಅರ್ಹರೆಲ್ಲರಿಗೂ ನೀಡಲಾಗುವುದು ಎಂದು ಫೌಸಿ ಹೇಳಿದ್ದಾರೆ.

ಲಸಿಕೆ ಪಡೆದ ಬಹುತೇಕ ನಾಯಕರು ಜನರಿಗೆ ವ್ಯಾಕ್ಸಿನ್ ಪಡೆಯಲು ಕರೆ ನೀಡಿದ್ದಾರೆ. ಹಾಗಾಗಿ ಜನತೆ ಹುಮ್ಮಸ್ಸಿನಿಂದ ಬಂದು ಲಸಿಕೆ ಪಡೆಯುತ್ತಿದ್ದಾರೆ ಎಂದು ಅವರು ಹೇಳಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.