ETV Bharat / international

ಬಾವಲಿಗಳಲ್ಲಿ ಹೊಸ ತಳಿಯ ಕೊರೊನಾ ವೈರಸ್ ಪತ್ತೆ: ಚೀನಾ ಸಂಶೋಧಕರಿಂದ ಸ್ಫೋಟಕ ಮಾಹಿತಿ

author img

By

Published : Jun 13, 2021, 1:12 PM IST

ಚೀನಾದ ಶಾಂಡೊಂಗ್ ವಿಶ್ವವಿದ್ಯಾಲಯ ನಡೆಸಿದ ಸಂಶೋಧನೆಯಲ್ಲಿ ಬಾವಲಿಗಳಲ್ಲಿ ಹೊಸ ತಳಿಯ ಕೊರೊನಾ ವೈರಸ್ ಇರುವುದು ತಿಳಿದು ಬಂದಿದೆ.

Chinese Researchers Find Batch Of New Coronaviruses In Bats
ಬಾವಲಿಗಳಲ್ಲಿ ಹೊಸ ತಳಿಯ ಕೊರೊನಾ ವೈರಸ್ ಪತ್ತೆ

ಬೀಜಿಂಗ್​​: ಭೂಮಂಡಲವನ್ನೇ ತನ್ನ ಅಟ್ಟಹಾಸದಿಂದ ನಲುಗಿಸಿದ ಮಹಾಮಾರಿ ಕೊರೊನಾ ಮೂಲ ಯಾವುದೆಂಬುದೇ ಇನ್ನೂ ಬೆಳಕಿಗೆ ಬಂದಿಲ್ಲದಿರುವಾಗಿ ಆಘಾತಕಾರಿ ಮಾಹಿತಿಯೊಂದು ಹೊರಬಂದಿದೆ. ಚೀನಾದ ಸಂಶೋಧಕರು ಬಾವಲಿಗಳಲ್ಲಿ ಹೊಸ ತಳಿಯ ಕೊರೊನಾ ವೈರಸ್ ಅನ್ನು ಪತ್ತೆ ಮಾಡಿರುವುದಾಗಿ ತಿಳಿಸಿದ್ದಾರೆ.

ಕೋವಿಡ್​-19 (SARS-CoV-2)ಗೆ ಕಾರಣವಾಗುವ ಎರಡನೇ ವೈರಸ್​ ಇದಾಗಿದೆ ಎಂದು ಚೀನಾದ ಶಾಂಡೊಂಗ್ ವಿಶ್ವವಿದ್ಯಾಲಯದ ಸಂಶೋಧಕರು ಹೇಳುತ್ತಾರೆ. ಇವರ ಸಂಶೋಧನೆಯ ವರದಿಯು 'ಸೆಲ್'​ (Cell) ಎಂಬ ಜರ್ನಲ್​ನಲ್ಲಿ ಪ್ರಕಟವಾಗಿದೆ. ಸೆಲ್, ಇದು ಜೀವ ವಿಜ್ಞಾನಗಳ ಕುರಿತ ವರದಿಗಳನ್ನು ಪ್ರಕಟಿಸುವ ಜರ್ನಲ್​ ಆಗಿದೆ.

ಮೇ 2019 ರಿಂದ ನವೆಂಬರ್ 2020ರ ನಡುವೆ ಸಂಶೋಧನೆ ನಡೆಸಲಾಗಿದ್ದು, ಅರಣ್ಯಗಳಲ್ಲಿ ವಾಸಿಸುವ ವಿವಿಧ ಪ್ರಭೇದಗಳ ಬಾವಲಿಗಳಿಂದ ಮಾದರಿಗಳನ್ನು ಸಂಗ್ರಹಿಸಲಾಗಿದೆ. ಅವುಗಳ ಮೂತ್ರ, ಮಲ ಹಾಗೂ ಗಂಟಲು ದ್ರವವನ್ನು ಸಂಗ್ರಹಿಸಿ ಪರೀಕ್ಷೆಗೆ ಒಳಪಡಿಸಲಾಗಿದೆ. ಬಾವಲಿಗಳಲ್ಲಿ ಪತ್ತೆಯಾದ 24 ವೈರಸ್​ಗಳ ಪೈಕಿ ಒಂದು ವೈರಸ್​ SARS-CoV-2 ಲಕ್ಷಣವನ್ನು ಹೋಲುತ್ತದೆ ಎಂದು ಸಂಶೋಧನಾಕಾರರು ತಿಳಿಸಿದ್ದಾರೆ.

ಇದನ್ನೂ ಓದಿ: 'ವುಹಾನ್ ಲ್ಯಾಬ್‌ನಿಂದಲೇ ಚೀನಾ ವೈರಸ್' ಬಂದಿತೆಂಬ ನನ್ನ ಹೇಳಿಕೆ ಸರಿ: ಟ್ರಂಪ್

2019ರ ಡಿಸೆಂಬರ್​ನಲ್ಲಿ ಚೀನಾದ ವುಹಾನ್ ಪ್ರಾಂತ್ಯದಲ್ಲಿ ಮೊಟ್ಟ ಮೊದಲ ಬಾರಿಗೆ ಕೊರೊನಾ ವೈರಸ್​ ಪತ್ತೆಯಾಗಿತ್ತು. ಅಂದಿನಿಂದ ಇಂದಿನವರೆಗೆ ಕೋವಿಡ್​ ಮೂಲವನ್ನ ಕಂಡುಹಿಡಿಯಲಾಗಿಲ್ಲ. ಹೊಸ ಹೊಸ ರೂಪಾಂತರಗಳೊಂದಿಗೆ ವಿವಿಧ ದೇಶಗಳಲ್ಲಿ ಮಾರಣಾಂತಿಕ ವೈರಸ್​ ಬಲ ಪಡೆದುಕೊಂಡು ಲಕ್ಷಾಂತರ ಜೀವಗಳ ಬಲಿ ತೆಗೆದುಕೊಂಡಿದೆ. ವುಹಾನ್ ಲ್ಯಾಬ್​ನಲ್ಲಿ ವೈರಸ್​ ಸೃಷ್ಟಿಸಲಾಗಿದೆ ಎಂದು ಅಮೆರಿಕ ಆರೋಪಿಸಿದ್ದು, ತನ್ನ ಗುಪ್ತಚರ ಸಂಸ್ಥೆಗೆ ಇದರ ತನಿಖೆಯ ಹೊಣೆ ಹೊರಿಸಿದೆ.

ಈ ಹಿಂದೆ, ದಕ್ಷಿಣ ಏಷ್ಯಾದ ದೇಶಗಳ ಸಂಶೋಧಕರು ಮತ್ತು ಬಾವಲಿ ಸಂರಕ್ಷಣಾ ವಿಜ್ಞಾನಿಗಳ ಗುಂಪು ಬಾವಲಿಗಳಿಂದ ಸೋಂಕು ಹರಡಿಲ್ಲ. ಕೋವಿಡ್​-19 ಹರಡುವಲ್ಲಿ ಬಾವಲಿಗಳ ಪಾತ್ರ ಇದೆ ಎಂಬುದು ಕೇವಲ ತಪ್ಪು ಕಲ್ಪನೆ ಎಂದು ಹೇಳಿದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.