ETV Bharat / international

ಅಮೆರಿಕನ್ನರ ವಿರುದ್ಧ ಬಾಜಿ ಕಟ್ಟುವುದು ಎಂದಿಗೂ ಒಳ್ಳೆಯದಲ್ಲ ಎಂದು ಚೀನಾ ಅಧ್ಯಕ್ಷ 'ಕ್ಸಿ'ಗೆ ಹೇಳಿದ್ದೇನೆ: ಬೈಡನ್‌

author img

By

Published : Mar 2, 2022, 11:18 AM IST

ಭವಿಷ್ಯದಲ್ಲಿ ಅತ್ಯುತ್ತಮ ಉದ್ಯೋಗಗಳಿಗಾಗಿ ಚೀನಾ ಮತ್ತಿತರ ದೇಶಗಳೊಂದಿಗೆ ಸ್ಪರ್ಧಿಸಲು ಎಲ್ಲ ರೀತಿಯ ಕ್ರಮಗಳನ್ನು ಕೈಗೊಳ್ಳುತ್ತೇವೆ ಎಂದು ಅಮೆರಿಕ ಅಧ್ಯಕ್ಷ ಜೋ ಬೈಡನ್‌ ತಮ್ಮ ಮೊದಲ ಸ್ಟೇಟ್ ಆಫ್ ಯೂನಿಯನ್ ಭಾಷಣದಲ್ಲಿ ಹೇಳಿದ್ದಾರೆ.

Biden says he told Chinese President Xi it is never a good bet to bet against Americans
ಅಮೆರಿಕನ್ನರ ವಿರುದ್ಧ ಬಾಜಿ ಕಟ್ಟುವುದು ಎಂದಿಗೂ ಒಳ್ಳೆಯದಲ್ಲ ಎಂದು ಚೀನಾ ಅಧ್ಯಕ್ಷ 'ಕ್ಸಿ'ಗೆ ಹೇಳಿದ್ದೇನೆ - ಬೈಡನ್‌

ವಾಷಿಂಗ್ಟನ್‌: ಅಮೆರಿಕನ್ನರ ವಿರುದ್ಧ ಬಾಜಿ ಕಟ್ಟುವುದು ಎಂದಿಗೂ ಒಳ್ಳೆಯದಲ್ಲ ಎಂದು ಚೀನಾ ಅಧ್ಯಕ್ಷ ಕ್ಸಿ ಜಿಂಗ್‌ಪಿಂಗ್‌ ಅವರಿಗೆ ಹೇಳಿದ್ದೇನೆ ಎಂದು ಅಮೆರಿಕ ಅಧ್ಯಕ್ಷ ಜೋ ಬೈಡನ್‌ ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ. ಮಂಗಳವಾರ ರಾತ್ರಿ ತಮ್ಮ ಮೊದಲ ಸ್ಟೇಟ್ ಆಫ್ ಯೂನಿಯನ್ ಭಾಷಣದಲ್ಲಿ ಬೈಡನ್‌, ದೀರ್ಘಾವಧಿಯಲ್ಲಿ ಹೆಚ್ಚು ದೃಢ ಹಾಗೂ ನಿರಂಕುಶವಾದಿ ಚೀನಾವನ್ನು ಮೀರಿಸಲು ಅಮೆರಿಕಕ್ಕೆ ಅತ್ಯಂತ ಪರಿಣಾಮಕಾರಿ ಮಾರ್ಗವೆಂದರೆ ಇಲ್ಲಿನ ಜನ, ಆರ್ಥಿಕತೆ ಹಾಗೂ ಪ್ರಜಾಪ್ರಭುತ್ವದ ನಿರಂತರತೆ ಎಂದಿದ್ದಾರೆ.

ಅಮೆರಿಕದ ಜನರ ವಿರುದ್ಧ ಬಾಜಿ ಕಟ್ಟುವುದು ಎಂದಿಗೂ ಒಳ್ಳೆಯದಲ್ಲ. ನಾವು ಲಕ್ಷಾಂತರ ಅಮೆರಿಕನ್ನರಿಗೆ ಉತ್ತಮ ಉದ್ಯೋಗಗಳನ್ನು ಸೃಷ್ಟಿಸುತ್ತೇವೆ, ರಸ್ತೆಗಳು, ವಿಮಾನ ನಿಲ್ದಾಣಗಳು, ಬಂದರುಗಳು ಹಾಗೂ ಜಲಮಾರ್ಗಗಳನ್ನು ಅಮೆರಿಕದಾದ್ಯಂತ ಆಧುನೀಕರಿಸುತ್ತೇವೆ ಎಂದು ನಾನು ಕ್ಸಿ ಜಿನ್‌ಪಿಂಗ್‌ಗೆ ಹೇಳಿದ್ದೇನೆ. ಹವಾಮಾನ ಬಿಕ್ಕಟ್ಟಿನ ವಿನಾಶಕಾರಿ ಪರಿಣಾಮಗಳನ್ನು ತಡೆದುಕೊಳ್ಳಲು ಮತ್ತು ಪರಿಸರ ನ್ಯಾಯವನ್ನು ಉತ್ತೇಜಿಸಲು ನಾವು ಎಲ್ಲವನ್ನೂ ಮಾಡುತ್ತೇವೆ ಎಂದು ಚೀನಾ ವಿರುದ್ಧ ಬೈಡನ್​ ಗುಡುಗಿದ್ದಾರೆ.

ಇದೇ ವೇಳೆ 5 ಲಕ್ಷ ಎಲೆಕ್ಟ್ರಿಕ್ ವೆಹಿಕಲ್ ಚಾರ್ಜಿಂಗ್ ಸ್ಟೇಷನ್‌ಗಳ ರಾಷ್ಟ್ರೀಯ ನೆಟ್‌ವರ್ಕ್ ನಿರ್ಮಿಸುವ ಯೋಜನೆಯನ್ನು ಘೋಷಿಸಿದ ಬೈಡನ್‌, ವಿಷಕಾರಿ ಸೀಸದ ಪೈಪ್‌ಗಳನ್ನು ಬದಲಾಯಿಸಲು ಪ್ರಾರಂಭಿಸಲಾಗುತ್ತದೆ. ಇದರಿಂದ ಮನೆಗಳಲ್ಲಿ ಪ್ರತಿ ಅಮೆರಿಕನ್‌ ಹಾಗೂ ಶಾಲೆಗಳಲ್ಲಿ ಪ್ರತಿ ಮಗುವಿಗೆ ಕುಡಿಯಲು ಶುದ್ಧ ನೀರನ್ನು ಒದಗಿಸುತ್ತೇವೆ.

ಉಪನಗರ, ಗ್ರಾಮೀಣ ಮತ್ತು ಬುಡಕಟ್ಟು ಸಮುದಾಯಗಳಿಗೆ ಕೈಗೆಟುಕುವ ಹೈಸ್ಪೀಡ್ ಇಂಟರ್ನೆಟ್ ಒದಗಿಸುತ್ತವೆ. 4,000 ಯೋಜನೆಗಳನ್ನು ಈಗಾಗಲೇ ಘೋಷಿಸಲಾಗಿದೆ. ಈ ವರ್ಷ ಅಮೆರಿಕ 65,000 ಮೈಲಿಗಳಷ್ಟು ಹೆದ್ದಾರಿ ಹಾಗೂ 1,500 ಸೇತುವೆಗಳ ದುರಸ್ತಿ ಮಾಡಲು ಪ್ರಾರಂಭಿಸುತ್ತದೆ ಎಂದು ಬೈಡನ್‌ ಹೇಳಿದ್ದಾರೆ.

ವಿಮಾನವಾಹಕ ನೌಕೆಯ ಡೆಕ್‌ನಿಂದ ಹಿಡಿದು ಹೆದ್ದಾರಿ ಗಾರ್ಡ್‌ರೈಲ್‌ಗಳ ಮೇಲಿನ ಉಕ್ಕಿನವರೆಗೆ ಎಲ್ಲವನ್ನೂ ಅಮೆರಿಕದಲ್ಲಿ ತಯಾರಿಸುವುದನ್ನು ಖಚಿತ ಪಡಿಸಲು ಇಲ್ಲಿನ ಉಪಕರಣಗಳನ್ನೇ ಖರೀದಿಸಲಾಗುತ್ತದೆ. ಭವಿಷ್ಯದಲ್ಲಿ ಅತ್ಯುತ್ತಮ ಉದ್ಯೋಗಗಳಿಗಾಗಿ ಚೀನಾ ಮತ್ತಿತರ ದೇಶಗಳೊಂದಿಗೆ ಸ್ಪರ್ಧಿಸಲು ಎಲ್ಲಾ ರೀತಿಯ ಕ್ರಮಗಳನ್ನು ಕೈಗೊಳ್ಳುತ್ತೇವೆ ಎಂದು ಬೈಡನ್​ ದೇಶದ ಜನರಿಗೆ ಅಭಯ ನೀಡಿದ್ದಾರೆ. ಇದೇ ಗಳಿಗೆಯಲ್ಲಿ ಚೀನಿಗರ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಿಕೊಳ್ಳುವುದಾಗಿ ಹೇಳುವ ಮೂಲಕ ಚೀನಾಗೂ ಟಾಂಗ್​ ಕೊಟ್ಟಿದ್ದಾರೆ ಬೈಡನ್​

ಇದನ್ನೂ ಓದಿ: ಉಕ್ರೇನ್ ಮೇಲಿನ ದಾಳಿಗೆ ರಷ್ಯಾ ಬೆಲೆ ತೆರುವಂತೆ ಮಾಡ್ತೇವಿ: ಜೋ ಬೈಡನ್ ಪ್ರತಿಜ್ಞೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.