ETV Bharat / international

'ಸ್ಟುಪಿಡ್ ಸನ್ ಆಫ್​ ಎ..' ಎಂದು ಪತ್ರಕರ್ತನಿಗೆ ನಿಂದಿಸಿದ ಅಮೆರಿಕ ಅಧ್ಯಕ್ಷ ಜೋ ಬೈಡನ್

author img

By

Published : Jan 25, 2022, 9:37 AM IST

ಅಮೆರಿಕದ ಅಧ್ಯಕ್ಷ ಜೋ ಬೈಡನ್ ಫಾಕ್ಸ್ ನ್ಯೂಸ್ ವರದಿಗಾರನೊಬ್ಬನನ್ನು ಪ್ರಶ್ನೆ ಕೇಳಿದ್ದಕ್ಕೆ ಅಸಭ್ಯವಾಗಿ ನಿಂದಿಸಿರುವ ಘಟನೆ ನಡೆದಿದೆ.

Biden caught on hot mic calling journalist a 'stupid son of a ...'
ಹಣದುಬ್ಬರದ ಬಗ್ಗೆ ಪ್ರಶ್ನೆ ಕೇಳಿದ್ದಕ್ಕೆ ಪತ್ರಕರ್ತನಿಗೆ 'ಸ್ಟುಪಿಡ್ ಸನ್ ಆಫ್​ ಎ..' ಎಂದು ನಿಂದಿಸಿದ ಬೈಡನ್

ವಾಷಿಂಗ್ಟನ್(ಅಮೆರಿಕ): ಹಣದುಬ್ಬರದ ವಿಚಾರದ ಕುರಿತು ಪತ್ರಕರ್ತರೊಬ್ಬರು ಪ್ರಶ್ನೆ ಕೇಳಿದ್ದಕ್ಕೆ ಅಮೆರಿಕದ ಅಧ್ಯಕ್ಷ ಜೋ ಬೈಡನ್ ಅಸಭ್ಯವಾಗಿ ನಿಂದಿಸಿರುವ ಘಟನೆ ಸುದ್ದಿಗೋಷ್ಠಿಯೊಂದರಲ್ಲಿ ನಡೆದಿದ್ದು, ಜೋ ಬೈಡನ್ ಈಗ ವಿವಾದಕ್ಕೆ ಸಿಲುಕಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಅಮೆರಿಕದಲ್ಲಿ ಹೆಚ್ಚಿರುತ್ತಿರುವ ಹಣದುಬ್ಬರದ ಬಗ್ಗೆ ಫಾಕ್ಸ್ ನ್ಯೂಸ್ ವರದಿಗಾರ ಪೀಟರ್ ಡೂಸಿ ಪ್ರಶ್ನೆ ಕೇಳಿದ್ದರು. ಈ ಪ್ರಶ್ನೆಗೆ ಅಸಮಾಧಾನಗೊಂಡು ಪ್ರತಿಕ್ರಿಯೆ ನೀಡಿರುವ ಜೋ ಬೈಡನ್ 'ಹೆಚ್ಚು ಹಣದುಬ್ಬರವೇ?, ವಾಟ್ ಎ ಸ್ಟುಪಿಡ್ ಸನ್ ಆಫ್ ಎ ಬಿಚ್' ( More inflation? What a stupid son of a bitch) ಎಂದು ಪತ್ರಕರ್ತನನ್ನು ನಿಂದಿಸಿದ್ದಾರೆ.

  • #WATCH | US President Joe Biden appeared to be caught on a hot mic after a journalist asked him a question related to inflation at the end of his press conference

    (Video Courtesy: C-Span) pic.twitter.com/ZJCP7X3QZS

    — ANI (@ANI) January 25, 2022 " class="align-text-top noRightClick twitterSection" data=" ">

ಸ್ಟುಪಿಡ್ ಸನ್ ಆಫ್ ಎ ಬಿಚ್ ಎಂಬ ವಾಕ್ಯ ನಿಂದನಾತ್ಮಕ ವಾಕ್ಯವಾಗಿದ್ದು, ಸಾಮಾನ್ಯ ಜ್ಞಾನ ಇಲ್ಲದ ವ್ಯಕ್ತಿ ಅಥವಾ ಮೂರ್ಖ ಎಂಬ ಅರ್ಥ ಬರುತ್ತದೆ. ಅಂದಹಾಗೆ ಡೂಸಿ 'ಹಣದುಬ್ಬರವು ರಾಜಕೀಯ ಹೊಣೆಗಾರಿಕೆ ಎಂದು ನೀವು ಭಾವಿಸುತ್ತೀರಾ?' ಎಂದು ಪ್ರಶ್ನಿಸಿದ್ದರು.

ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ

ಕಳೆದ ವಾರವೂ ಫಾಕ್ಸ್ ನ್ಯೂಸ್ ವರದಿಗಾರ್ತಿ ಸರ್ ನೀವು ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಕುರಿತು ಕೇಳಿದ್ದ ಪ್ರಶ್ನೆಗೆ ಎಂಥಹ ಮೂರ್ಖ ಪ್ರಶ್ನೆ ಎಂದು ಅಪಹಾಸ್ಯ ಮಾಡಿದ್ದರು.

ಇದನ್ನೂ ಓದಿ: ದಕ್ಷಿಣ ಚೀನಾ ಸಮುದ್ರದಲ್ಲಿ ಅಮೆರಿಕ ಜೆಟ್ ಪತನ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.