ETV Bharat / international

US-China Meeting: ಬೈಡನ್​- ಜಿನ್‌ಪಿಂಗ್ ವರ್ಚುವಲ್ ಸಭೆ.. ಸಂಘರ್ಷ ಬೇಡ ಎಂದ ಅಮೆರಿಕ

author img

By

Published : Nov 16, 2021, 1:03 PM IST

ಉಭಯ ರಾಷ್ಟ್ರಗಳ ನಡುವಿನ ಸ್ಪರ್ಧೆಯು ಉದ್ದೇಶಪೂರ್ವಕ ಸಂಘರ್ಷಕ್ಕೆ ಕಾರಣವಾಗಬಾರದೆಂದು ಚೀನಾ ಅಧ್ಯಕ್ಷ ಕ್ಸಿ ಜಿನ್​​ಪಿಂಗ್​ಗೆ ಅಮೆರಿಕ ಅಧ್ಯಕ್ಷ ಜೋ ಬೈಡನ್ ಹೇಳಿದ್ದಾರೆ.

ಬೈಡನ್​- ಜಿನ್‌ಪಿಂಗ್ ವರ್ಚುವಲ್ ಸಭೆ
ಬೈಡನ್​- ಜಿನ್‌ಪಿಂಗ್ ವರ್ಚುವಲ್ ಸಭೆ

ವಾಷಿಂಗ್ಟನ್: ಅಮೆರಿಕ - ಚೀನಾ ನಡುವೆ ಅನೇಕ ವಿಚಾರಗಳಲ್ಲಿ ಹೆಚ್ಚುತ್ತಿರುವ ಉದ್ವಿಗ್ನತೆಯ ನಡುವೆ ಯುಎಸ್​ ಅಧ್ಯಕ್ಷ ಜೋ ಬೈಡನ್​ (America President Joe Biden) ಹಾಗೂ ಚೀನಾ ಅಧ್ಯಕ್ಷ ಕ್ಸಿ ಜಿನ್​​ಪಿಂಗ್ (China President Xi Jinping) ವರ್ಚುವಲ್ ಸಭೆ ನಡೆಸಿದ್ದಾರೆ.

ವಾಯುವ್ಯ ಚೀನಾದಲ್ಲಿ ಉಯ್ಘರ್‌ ಮುಸ್ಲಿಮರ ಮೇಲೆ ನಡೆಯುತ್ತಿರುವ ಹಿಂಸಾಚಾರ, ಹಾಂಗ್ ಕಾಂಗ್‌ನಲ್ಲಿ ಪ್ರಜಾಸತ್ತಾತ್ಮಕ ಪ್ರತಿಭಟನೆಗಳನ್ನು ಹಿಮ್ಮೆಟ್ಟಿಸುತ್ತಿರುವುದು, ಸ್ವಂ-ಆಡಳಿತದ ತೈವಾನ್ ದ್ವೀಪದ ವಿರುದ್ಧ ಮಿಲಿಟರಿ ಆಕ್ರಮಣ ಸೇರಿದಂತೆ ಅನೇಕ ವಿಚಾರಗಳನ್ನು ಜೋ ಬೈಡನ್ ಟೀಕಿಸಿದ್ದಾರೆ.

ಉಭಯ ರಾಷ್ಟ್ರಗಳ ನಡುವಿನ ಸ್ಪರ್ಧೆಯು ಉದ್ದೇಶಪೂರ್ವಕ ಸಂಘರ್ಷಕ್ಕೆ ಕಾರಣವಾಗಬಾರದೆಂದು ಸಭೆಯಲ್ಲಿ ಬೈಡನ್​ ಚೀನಾ ಅಧ್ಯಕ್ಷರಿಗೆ ಒತ್ತಿ ಹೇಳಿದ್ದಾರೆ. ಸಂಘರ್ಷದ ಬದಲು ಸ್ಪರ್ಧೆಯು ಸರಳ, ನೇರವಾಗಿರುವಂತೆ ಮಾಡುವುದು ನಮ್ಮ ಗುರಿಯಾಗಿದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಭಾರತಕ್ಕೆ ವಿಶ್ವಸಂಸ್ಥೆಯ ರೆಸಿಡೆಂಟ್ ಕೋ -ಆರ್ಡಿನೇಟರ್ ಆಗಿ ಶೊಂಬಿ ಶಾರ್ಪ್​ ನೇಮಕ

'ಬೈಡನ್​ ನನ್ನ ಹಳೇ ಸ್ನೇಹಿತ'

ಇದಕ್ಕೆ ಪ್ರತಿಕ್ರಿಯಿಸಿದ ಜಿನ್​​ಪಿಂಗ್, ನಾನು ನಿಮ್ಮೊಂದಿಗೆ ಕೆಲಸ ಮಾಡಲು ಸಿದ್ಧನಿದ್ದೇನೆ. ಆದರೆ, ಎರಡೂ ಕಡೆಯವರು ಸಂವಹನವನ್ನು ಸುಧಾರಿಸುವ ಅಗತ್ಯವಿದೆ ಎಂದು ಬೈಡನ್​ಗೆ ಹೇಳಿದರು. ಇದೇ ವೇಳೆ ಬೈಡನ್​ ತನ್ನ ಹಳೇ ಸ್ನೇಹಿತ ಎಂದೂ ಜಿನ್‌ಪಿಂಗ್ ತಿಳಿಸಿದರು. ಚೀನಾದ ಆಂತರಿಕ ವಿಷಯಗಳನ್ನು ಪ್ರಸ್ತಾಪಿಸಿದ್ದಕ್ಕಾಗಿ, ಮಧ್ಯಪ್ರವೇಶಿಸಿದ್ದಕ್ಕಾಗಿ ಚೀನಾ ನಿಯೋಗವು ಶ್ವೇತಭವನದ ವಿರುದ್ಧ ವಾಗ್ದಾಳಿ ನಡೆಸಿದೆ.

ಅಮೆರಿಕ ಅಧ್ಯಕ್ಷರಾಗಿ ಜೋ ಬೈಡನ್​ ಅಧಿಕಾರ ಸ್ವೀಕರಿಸಿದ ಮೇಲೆ ಚೀನಾದೊಂದಿಗೆ ದೂರವಾಣಿ ಮೂಲಕ ಮಾತಕತೆ ನಡೆಸಿದ್ದರು. ಆದರೆ ಉಭಯ ರಾಷ್ಟ್ರಗಳ ನಡುವೆ ನಡೆಯುತ್ತಿರುವ ಮೊದಲ ದ್ವಿಪಕ್ಷೀಯ ಸಭೆ (US - China bilateral meeting) ಇದಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.