ETV Bharat / headlines

ಆಸ್ಪತ್ರೆಯಲ್ಲಿನ ಹೊರಾವರಣದಲ್ಲೇ ರೋಗಿಗೆ ಚಿಕಿತ್ಸೆ: ಬೀದಿಪಾಲಾಗುತ್ತಿದ್ದಾರಾ ರೋಗಿಗಳು?

author img

By

Published : Apr 22, 2021, 3:55 PM IST

ಗುಜರಾತ್‌ನಾದ್ಯಂತ ಕೊರೊನಾ ಪ್ರಕರಣಗಳು ಹೆಚ್ಚುತ್ತಲೇ ಇವೆ. ರೋಗಿಗಳಿಗೆ ಒಂದೆಡೆ ಬೆಡ್​ ಸಿಗುತ್ತಿಲ್ಲ. ಮತ್ತೊಂದೆಡೆ ಆಮ್ಲಜನಕ ಸಿಗುತ್ತಿಲ್ಲ.

 COVID-19 situation critical in Gujarat
COVID-19 situation critical in Gujarat

ರಾಜ್‌ಕೋಟ್​​: ಕೊರೊನಾ ಭೀಕರತೆ ಎಲ್ಲರನ್ನೂ ಅಲುಗಾಡಿಸಿಬಿಟ್ಟಿದೆ. ಅದರಲ್ಲೂ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಸಿಗದೇ ಜನರ ಬದಕು ಬೀದಿಪಾಲಾಗಿದೆ. ಇದಕ್ಕೆ ನಿದರ್ಶನ ಎಂಬಂತೆ ರೋಗಿಗಳು ರಸ್ತೆ ಬದಿಯಲ್ಲೇ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ.

ಗುಜರಾತ್‌ನಾದ್ಯಂತ ಕೊರೊನಾ ಪ್ರಕರಣಗಳು ಹೆಚ್ಚುತ್ತಲೇ ಇವೆ. ರೋಗಿಗಳಿಗೆ ಒಂದೆಡೆ ಬೆಡ್​ ಸಿಗುತ್ತಿಲ್ಲ. ಮತ್ತೊಂದೆಡೆ ಆಮ್ಲಜನಕ ಸಿಗುತ್ತಿಲ್ಲ. ಈ ಹಿನ್ನೆಲೆ ರೋಗಿಗಳು ಸಾವು ಬದುಕಿನ ಜೊತೆ ಬೀದಿ ಬದಿಯಲ್ಲಿ ಅಲೆಯುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.

ರಾಜ್‌ಕೋಟ್​​​‌ ಸುತ್ತಮುತ್ತಲಿನ ಗ್ರಾಮೀಣ ಪ್ರದೇಶಗಳಿಂದ ಹೆಚ್ಚಿನ ಸಂಖ್ಯೆಯ ಜನರು ಚಿಕಿತ್ಸೆಗಾಗಿ ಬರುತ್ತಿದ್ದಾರೆ. ರಾಜ್‌ಕೋಟ್‌ನಲ್ಲಿ ಸರ್ಕಾರಿ ಆಸ್ಪತ್ರೆಗಳ ಕೊರತೆ ಇದ್ದು, ಚಿಕಿತ್ಸೆಗಾಗಿ ಆಸ್ಪತ್ರೆ ಮುಂದೆ ರೋಗಿಗಳು ಸರತಿ ಸಾಲಲ್ಲಿ ನಿಲ್ಲುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ರೋಗಿಗಳಿಗೆ ಬೆಡ್​ ಸಿಗದ ಕಾರಣ ಹಲವಾರು ಜನರು ರಸ್ತಬದಿಯೇ ಇದ್ದು ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.