ETV Bharat / entertainment

ಬಂದೂಕಿನೊಂದಿಗೆ ಛತ್ರಿ ಹಿಡಿದು ಬಂದ 'ಎಕ್ಸ್‌ಕ್ಯೂಸ್ ಮೀ' ಹೀರೋ..'ವೀರ್ ಸಾವರ್ಕರ್ ಸಿನಿಮಾ'ದ ಫಸ್ಟ್ ಲುಕ್ ಬಿಡುಗಡೆ

author img

By

Published : Mar 11, 2023, 9:00 PM IST

ವೀರ್ ಸಾವರ್ಕರ್ ಬಯೋಪಿಕ್‌ನಲ್ಲಿ ಸುನೀಲ್ ರಾವ್ ಅಭಿನಯಿಸುತ್ತಿದ್ದಾರೆ. ಸದ್ಯ ಈ ಸಿನಿಮಾದ ಫಸ್ಟ್ ಲುಕ್ ಬಿಡುಗಡೆಯಾಗಿದೆ.

Veer Savarkar movie first look release
ವೀರ್ ಸಾವರ್ಕರ್ ಸಿನಿಮಾದ ಫಸ್ಟ್ ಲುಕ್ ಬಿಡುಗಡೆ

ಕನ್ನಡ ಚಿತ್ರರಂಗದಲ್ಲಿ ಕಮರ್ಷಿಯಲ್ ಹಾಗೂ ಎಕ್ಸ್ ಪೆರಿಮೆಂಟಲ್ ಸಿನಿಮಾಗಳ ಮಧ್ಯೆ ಬಯೋಪಿಕ್ ಚಿತ್ರಗಳು ಆಗಾಗ ಸೌಂಡ್ ಮಾಡುತ್ತಿವೆ. ಇದೀಗ 'ಎಕ್ಸ್‌ಕ್ಯೂಸ್ ಮೀ' ಸಿನಿಮಾ ಖ್ಯಾತಿಯ ನಟ ಸುನೀಲ್ ರಾವ್ ಇದೇ ಮೊದಲ ಬಾರಿಗೆ ಬಯೋಪಿಕ್ ಸಿನಿಮಾದಲ್ಲಿ ಅಭಿನಯಿಸುತ್ತಿರುವ ವಿಚಾರ ಕೆಲ ದಿನಗಳ ಹಿಂದೆ ಸುದ್ದಿಯಾಗಿತ್ತು. ಭಾರತದ ಸ್ವಾತಂತ್ರ್ಯಕ್ಕಾಗಿ ತಮ್ಮ ಜೀವನವನ್ನು ಮುಡಿಪಾಗಿಟ್ಟ ಮಹಾನ್ ಹೋರಾಟಗಾರ ವೀರ್ ಸಾವರ್ಕರ್ ಬಯೋಪಿಕ್‌ನಲ್ಲಿ ಸುನೀಲ್ ರಾವ್ ಅಭಿನಯಿಸುತ್ತಿದ್ದಾರೆ. ಚೈತ್ರದ ಚಂದ್ರಮ ಹಾಗೂ ಯುಗ ಪುರುಷ ಸಿನಿಮಾವನ್ನ ನಿರ್ದೇಶನ ಮಾಡಿದ್ದ ರಾಧಾಕೃಷ್ಣ ಪಲ್ಲಕ್ಕಿ ಈ ಚಿತ್ರವನ್ನ ನಿರ್ದೇಶನ ಮಾಡುತ್ತಿದ್ದಾರೆ.

Veer Savarkar movie first look release
ವೀರ್ ಸಾವರ್ಕರ್ ಸಿನಿಮಾದ ಫಸ್ಟ್ ಲುಕ್ ಬಿಡುಗಡೆ

ಫಸ್ಟ್ ಲುಕ್ ಬಿಡುಗಡೆ: ಸದ್ಯ ಈ ಸಿನಿಮಾದ ಫಸ್ಟ್ ಲುಕ್ ಬಿಡುಗಡೆಯಾಗಿದೆ. ವೀರ್ ಸಾರ್ವಕರ್ ಪಾತ್ರದಲ್ಲಿ ಸುನೀಲ್ ರಾವ್ ಅವರನ್ನು ಕಂಡು ಸಿನಿ ಪ್ರೇಮಿಗಳು ಅಚ್ಚರಿ ವ್ಯಕ್ತಪಡಿಸಿದ್ದಾರೆ. ಈ ಲುಕ್ ಸೋಷಿಯಲ್ ಮೀಡಿಯಾದಲ್ಲಿ ಸಖತ್​ ವೈರಲ್ ಆಗಿದೆ. ಚೇರ್ ಪಕ್ಕದಲ್ಲಿ ಬಂದೂಕು ಇಟ್ಟುಕೊಂಡು ಥೇಟ್ ಸಾರ್ವಕರ್ ಲುಕ್​ನಲ್ಲಿ ಸುನೀಲ್ ಮಿಂಚಿದ್ದಾರೆ. ಇನ್ನು ಕೈಯಲ್ಲಿ ಛತ್ರಿ ಹಿಡಿದು ಸ್ವಾತಂತ್ರ್ಯ ಹೋರಾಟಗಾರನಾಗಿ ಸುನೀಲ್ ರಾವ್ ಕಾಣಿಸಿಕೊಂಡಿದ್ದಾರೆ.

Actor Sunil Rao
ನಟ ಸುನೀಲ್ ರಾವ್

ಎಕ್ಸ್‌ಕ್ಯೂಸ್ ಮೀ, ಚಪ್ಪಾಳೆ, ಬಾ ಬಾರೋ ರಸಿಕ, ಸಖ ಸಖಿ ಸಿನಿಮಾಗಳ ಮೂಲಕ ಕನ್ನಡ ಚಿತ್ರರಂಗದಲ್ಲಿ ಸುನೀಲ್ ರಾವ್ ತನ್ನದೇ ಬೇಡಿಕೆ ಹೊಂದಿದ್ದಾರೆ. ಮಿನುಗು ಸಿನಿಮಾ ನಂತರ ಸುನೀಲ್ ರಾವ್ ಹಲವು ವರ್ಷಗಳ ಬಳಿಕ ಸಿನಿಮಾ ರಂಗದಿಂದ ಕೊಂಚ ಸಮಯ ದೂರ ಉಳಿದಿದ್ದರು. ತುರ್ತು ನಿರ್ಗಮನ ಸಿನಿಮಾದ ಮೂಲಕ ಮತ್ತೆ ಕಮ್ ಬ್ಯಾಕ್ ಮಾಡಿರುವ ಸುನೀಲ್ ರಾವ್ ಈಗ ಸಾವರ್ಕರ್ ಬಯೋಪಿಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಸಾವರ್ಕರ್‌ ಪಾತ್ರಕ್ಕಾಗಿ ಅವರು ಸಾಕಷ್ಟು ತಯಾರಿ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.

Veer Savarkar movie first look release
ವೀರ್ ಸಾವರ್ಕರ್ ಸಿನಿಮಾದ ಫಸ್ಟ್ ಲುಕ್ ಬಿಡುಗಡೆ

ಇದನ್ನೂ ಓದಿ: ಸ್ಯಾಂಡಲ್​ವುಡ್​ಗೆ 'ತುರ್ತು ನಿರ್ಗಮನ'ದ ಮೂಲಕ ಸುನೀಲ್ ರಾವ್ ರೀ ಎಂಟ್ರಿ

ಅನು ಪ್ರಭಾಕರ್‌ ಮುಖರ್ಜಿ, ಸಾಯಿ ಕುಮಾರ್‌, ರವಿ ಶಂಕರ್‌, ರಂಗಾಯಣ ರಘು ಹೀಗೆ ಅನೇಕ ಅನುಭವಿ ಕಲಾವಿದರು ಈ ಚಿತ್ರದಲ್ಲಿ ನಟಿಸಲಿದ್ದಾರೆ. ಕೆ.ಎಸ್‌ ಚಂದ್ರಶೇಖರ್‌ ಛಾಯಾಗ್ರಹಣವಿದ್ದು, ಸಂಕಲನಕಾರರಾಗಿ ಗೌತಮ್‌ ಪಲ್ಲಕ್ಕಿ ಕೆಲಸ ಮಾಡಲಿದ್ದಾರೆ. ಸಂಗೀತ ಸಂಯೋಜನೆಯನ್ನು ಸ್ಯಾಮ್‌ ಮಾಡಲಿದ್ದಾರೆ. ಈ ಸಿನಿಮಾಗಾಗಿ ನಿರ್ದೇಶಕ ರಾಧಾಕೃಷ್ಣ ಪಲ್ಲಕ್ಕಿ ಅವರು ಸಾಕಷ್ಟು ರಿಸರ್ಚ್ ಮಾಡಿಕೊಂಡು ಈ ಸಿನಿಮಾ ನಿರ್ದೇಶನ ಮಾಡುತ್ತಿದ್ದಾರೆ ಎನ್ನಲಾಗಿದೆ. ಈಗಾಗಲೇ ಚಿತ್ರೀಕರಣಕ್ಕೆ ಸಕಲ ಸಿದ್ಧತೆ ಮಾಡಿಕೊಂಡಿರುವ ಚಿತ್ರತಂಡ ಮಾ.25ರಿಂದ ಶೂಟಿಂಗ್ ಸ್ಟಾರ್ಟ್ ಮಾಡುವ ಯೋಚನೆಯಲ್ಲಿದೆ ಎಂದು ತಿಳಿದು ಬಂದಿದೆ.

Veer Savarkar movie first look release
ವೀರ್ ಸಾವರ್ಕರ್ ಸಿನಿಮಾದ ಫಸ್ಟ್ ಲುಕ್ ಬಿಡುಗಡೆ

'ನೋಟಿ ಬಿನೋದಿನಿ' ಬಯೋಪಿಕ್‌ನಲ್ಲಿ ಕಂಗನಾ: ಬಾಲಿವುಡ್​ ನಟಿ ಕಂಗನಾ ರಣಾವತ್ ನೋಟಿ ಬಿನೋದಿನಿ ಎಂದೇ ಖ್ಯಾತರಾಗಿರುವ ಬಂಗಾಳಿ ರಂಗಭೂಮಿ ದಂತಕಥೆ ಬಿನೋದಿನಿ ದಾಸಿ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಪರಿಣೀತಾ ಮತ್ತು ಮರ್ದಾನಿ ಖ್ಯಾತಿಯ ಪ್ರದೀಪ್ ಸರ್ಕಾರ್ ಚಿತ್ರವನ್ನು ನಿರ್ದೇಶಿಸುವರು. ರಂಗಭೂಮಿ ದಂತಕಥೆಯನ್ನು ಆಧರಿಸಿದ ಚಿತ್ರ ಇದಾಗಿದ್ದು ದೇವದಾಸ್, ಪದ್ಮಾವತ್’ ಮತ್ತು ತನ್ಹಾಜಿ: ದಿ ಅನ್‌ಸಂಗ್ ವಾರಿಯರ್ ಚಿತ್ರಗಳಲ್ಲಿ ಕೆಲಸ ಮಾಡಿದ ಪ್ರಕಾಶ್ ಕಪಾಡಿಯಾ ಬಯೋಪಿಕ್‌ಗೆ ಸ್ಕ್ರಿಪ್ಟ್ ಮಾಡುತ್ತಾರಂತೆ. ಭಾರತದ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಬಯೋಪಿಕ್​ ಎಮರ್ಜೆನ್ಸಿ (ತುರ್ತು ಪರಿಸ್ಥಿತಿ)ಯಲ್ಲಿ ನಟಿಸುತ್ತಿರುವ ಮಧ್ಯಯೇ ಮಗದೊಂದು ಜೀವನಾಧಾರಿತ ಚಿತ್ರಕ್ಕೆ ಕಂಗನಾ ಸಹಿ ಹಾಕಿದ್ದಾರೆ.

ಇದನ್ನೂ ಓದಿ: 19ನೇ ಶತಮಾನದ ರಂಗಭೂಮಿ ತಾರೆ 'ನೋಟಿ ಬಿನೋದಿನಿ' ಬಯೋಪಿಕ್‌ನಲ್ಲಿ ಕಂಗನಾ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.