ETV Bharat / entertainment

ಬಿಗ್​ ಬಾಸ್​: ಕಿಚ್ಚನ ಪಂಚಾಯಿತಿಯಲ್ಲಿ ಸುಂಟರಗಾಳಿ, ಮನೆಗೆ ವಾಪಸಾದ್ರು ಸಂಗೀತಾ - ಪ್ರತಾಪ್​

author img

By ETV Bharat Karnataka Team

Published : Dec 9, 2023, 7:55 PM IST

BBK10: ಬಿಗ್​ ಬಾಸ್​ 'ವಾರದ ಕತೆ ಕಿಚ್ಚನ ಜೊತೆ' ಪ್ರೋಮೋ ಅನಾವರಣಗೊಂಡಿದೆ.

kannada Bigg boss season 10 promo
ಬಿಗ್​ ಬಾಸ್​: ಕಿಚ್ಚನ ಪಂಚಾಯಿತಿಯಲ್ಲಿ ಸುಂಟರಗಾಳಿ.. ಮನೆಗೆ ವಾಪಸ್ಸಾದ್ರು ಸಂಗೀತಾ- ಪ್ರತಾಪ್​

ಕಿಚ್ಚ ಸುದೀಪ್​ ನಡೆಸಿಕೊಡುವ ಕನ್ನಡದ ಖ್ಯಾತ ರಿಯಾಲಿಟಿ ಶೋ 'ಬಿಗ್​ ಬಾಸ್​' ಪ್ರೇಕ್ಷಕರಿಗೆ ಹೆಚ್ಚು ಮನರಂಜನೆ ನೀಡುತ್ತಿದೆ. ದಿನಕ್ಕೊಂದು ಟಾಸ್ಕ್​ಗಳ ಜೊತೆ ಸ್ಪರ್ಧಿಗಳ ನಡುವಿನ ಸ್ಪರ್ಧೆ​ ಕೂಡ ಹೆಚ್ಚಾಗುತ್ತಿದೆ. ಈ ವಾರ ದೊಡ್ಮನೆಯಲ್ಲಿ ರಕ್ಕಸರು ಮತ್ತು ಗಂಧರ್ವರ ನಡುವೆ ಗುದ್ದಾಟ ಜೋರಾಗಿತ್ತು. ಆಟವನ್ನು ವೈಯಕ್ತಿಕವಾಗಿ ತೆಗೆದುಕೊಂಡ ಸ್ಪರ್ಧಿಗಳು, ದೈಹಿಕವಾಗಿ ಗಾಯಗೊಳ್ಳುವ ಅತಿರೇಕಕ್ಕೂ ಹೋಯಿತು.

ಪರಿಣಾಮವಾಗಿ ಸಂಗೀತಾ ಶೃಂಗೇರಿ ಮತ್ತು ಡ್ರೋನ್​ ಪ್ರತಾಪ್ ಇಬ್ಬರೂ ಆಸ್ಪತ್ರೆ ಸೇರಿಕೊಳ್ಳುವಂತಾಗಿತ್ತು. ಅದೆಲ್ಲದರ ವಿಚಾರವಾಗಿ ಈ ವಾರದ 'ಕಿಚ್ಚನ ಪಂಚಾಯಿತಿ'ಯಲ್ಲಿ ಸುಂಟರಗಾಳಿಯೇ ಏಳುವ ಸಂಭವವಿದೆ. ಇದರ ಸೂಚನೆ ಜಿಯೋ ಸಿನಿಮಾ ಬಿಡುಗಡೆ ಮಾಡಿರುವ 'ವಾರದ ಕತೆ ಕಿಚ್ಚನ ಜೊತೆ' ಪ್ರೋಮೊದಲ್ಲಿ ಸಿಕ್ಕಿದೆ. 'ಕಿಚ್ಚನ ಪಂಚಾಯ್ತಿಯಲ್ಲಿ ಸುಂಟರಗಾಳಿ' ಎಂಬ ಕ್ಯಾಪ್ಶನ್​ನೊಂದಿಗೆ ಈ ಬಾರಿಯ ಪ್ರೋಮೋ ಹೊರಬಿದ್ದಿದೆ.

ಗಂಧರ್ವರು ರಕ್ಕಸರಾಗದ್ದಕ್ಕೆ, ರಕ್ಕಸರು ಕಟುಕರಾಗಿ ಬದಲಾಗಿದ್ದಕ್ಕೆ, ವಿನಂತಿಗಳು ಅಪ್ಪಣೆಗಳಾಗಿ ಬದಲಾಗಿದ್ದಕ್ಕೆ ಕಿಚ್ಚ ಸುದೀಪ್‌, ‘ಪಂಚಾಯಿತಿ’ಯಲ್ಲಿ ಚರ್ಚೆ ನಡೆಸಿದ್ದಾರೆ. ಎರಡು ದಿನಗಳ ಹಿಂದೆಯೇ ಟಾಸ್ಕ್‌ನಲ್ಲಿ ಗಾಯಗೊಂಡು ತುರ್ತಾಗಿ ಡ್ರೋನ್​ ಪ್ರತಾಪ್ ಮತ್ತು ಸಂಗೀತಾ ಶೃಂಗೇರಿ ಆಸ್ಪತ್ರೆಗೆ ಸೇರಿದ್ದರು. ಅವರ ಬಗ್ಗೆ ಮನೆಯವರಿಗೆ ಸುಳಿವೇ ಇರಲಿಲ್ಲ. ಆದರೆ ಇಂದು ಕಿಚ್ಚನ ಪಂಚಾಯಿತಿಗೆಂದು ಎಲ್ಲರೂ ರೆಡಿಯಾಗಿ ಕೂತಿದ್ದಾಗ ಬಿಗ್‌ ಬಾಸ್ ಮನೆಯ ಬಾಗಿಲು ತೆರೆದುಕೊಂಡಿದೆ.

ಇದನ್ನೂ ಓದಿ: ಬಿಗ್​ ಬಾಸ್​: 'ಆನೆಯನ್ನು ಪಳಗಿಸುವ ಮಾವುತ' ಅಂತಿದ್ದ ಅವಿನಾಶ್​ ಮೇಕೆಯಾದ್ರು ನೋಡಿ

ತೆರೆದ ಬಾಗಿಲಿನಿಂದ ಪ್ರತಾಪ್ ಮತ್ತು ಸಂಗೀತಾ ಇಬ್ಬರೂ ಒಳಗೆ ಬಂದಿದ್ದಾರೆ. ಆದರೆ ಅವರನ್ನು ನೋಡಿ ಮನೆಯವರೆಲ್ಲರೂ ಶಾಕ್ ಆಗಿದ್ದಾರೆ. ತನಿಷಾ ಮತ್ತು ಕಾರ್ತಿಕ್​ ಅವರಂತೂ ಬಿಕ್ಕಿ ಬಿಕ್ಕಿ ಅತ್ತಿದ್ದಾರೆ. ಮನೆಯೊಳಗೆ ಬಂದ ಪ್ರತಾಪ್ ಮತ್ತು ಸಂಗೀತಾ ಇಬ್ಬರ ಕಣ್ಣಿಗೂ ಬಿಸಿಲು ರಕ್ಷಕ ಕಡುಗಪ್ಪು ಕನ್ನಡಕವನ್ನು ಹಾಕಲಾಗಿದೆ. ಟಾಸ್ಕ್‌ನಲ್ಲಿ ಉಂಟಾದ ಹಾನಿಯ ಪರಿಣಾಮವಾಗಿ ಅವರು ಕನ್ನಡಕ ಧರಿಸಿಯೇ ಮನೆಯೊಳಗೆ ಪ್ರವೇಶಿಸಿದ್ದಾರೆ.

ಹಾಗಾದರೆ ಪ್ರತಾಪ್ ಮತ್ತು ಸಂಗೀತಾ ಆರೋಗ್ಯ ಈಗ ಹೇಗಿದೆ? ಅವರು ಬಿಗ್‌ಬಾಸ್ ಮನೆಯಲ್ಲಿ ಮುಂದುವರಿಯುವಷ್ಟು ಆರೋಗ್ಯವಂತರಾಗಿದ್ದಾರೆಯೇ? ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಈ ವಾರದ ವೀಕೆಂಡ್‌ ಎಪಿಸೋಡ್‌ನಲ್ಲಿ ಸಿಗಲಿದೆ. ಮತ್ತೊಂದು ಪ್ರೋಮೋದಲ್ಲಿ ಕ್ಯಾಪ್ಟೆನ್ಸಿ ಕೋಣೆಗೂ ಬೀಗ ಬಿದ್ದಿದೆ. ಇಂದು ಕಿಚ್ಚನ ಪಂಚಾಯಿತಿಯಲ್ಲಿ ವಾರದ ಸರಿ-ತಪ್ಪುಗಳ ಲೆಕ್ಕಾಚಾರ ನಡೆಯಲಿದೆ. ಬಿಗ್‌ ಬಾಸ್ ಕನ್ನಡ 24 ಗಂಟೆಯ ನೇರಪ್ರಸಾರವನ್ನು ಜಿಯೋ ಸಿನಿಮಾದಲ್ಲಿ ಉಚಿತವಾಗಿ ನೋಡಬಹುದಾಗಿದೆ. ಪ್ರತಿದಿನದ ಎಪಿಸೋಡ್‌ಗಳನ್ನು ಕಲರ್ಸ್ ಕನ್ನಡದಲ್ಲಿ ರಾತ್ರಿ 9.30ಕ್ಕೆ ವೀಕ್ಷಿಸಬಹುದು.

ಇದನ್ನೂ ಓದಿ: ಬಿಗ್​ ಬಾಸ್​: ಮನೆಯವರಿಂದ 'ಕಳಪೆ' ಪಟ್ಟ ಸ್ವೀಕರಿಸಿ ಜೈಲಿಗೆ ಹೋದ ಕಾರ್ತಿಕ್​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.