ETV Bharat / entertainment

ಆದಿಪುರುಷ ಟೀಸರ್ ಬಿಡುಗಡೆ: ಗಮನ ಸೆಳೆಯುತ್ತಿದೆ ಪ್ರಭಾಸ್-ಕೃತಿ ನಡುವಿನ ಕೆಮಿಸ್ಟ್ರಿ

author img

By

Published : Oct 3, 2022, 12:12 PM IST

Updated : Oct 3, 2022, 12:18 PM IST

ಆದಿಪುರುಷ ಚಿತ್ರದ ಪ್ರಮುಖ ಜೋಡಿ ಪ್ರಭಾಸ್ ಮತ್ತು ಕೃತಿ ನಡುವಿನ ಕೆಮಿಸ್ಟ್ರಿ ಅಭಿಮಾನಿಗಳ ಗಮನ ಸೆಳೆಯುತ್ತಿದೆ. ಆದಿಪುರುಷ ಟೀಸರ್ ಬಿಡುಗಡೆ ವೇಳೆ ಪ್ರಭಾಸ್ ಮತ್ತು ಕೃತಿ ಪರಸ್ಪರ ಅಪ್ಪಿಕೊಂಡರು. ಈವೆಂಟ್‌ನ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.

Prabhas and Kriti
ಪ್ರಭಾಸ್-ಕೃತಿ

ಹೈದರಾಬಾದ್ (ತೆಲಂಗಾಣ): ಉತ್ತರ ಪ್ರದೇಶದ ಅಯೋಧ್ಯೆಯ ಪುಣ್ಯಭೂಮಿಯ ಸರಯೂ ನದಿಯ ದಂಡೆಯಲ್ಲಿ ಭಾನುವಾರ ಬಹು ನಿರೀಕ್ಷಿತ 'ಆದಿಪುರುಷ' ಚಿತ್ರದ ಟೀಸರ್ ಭಾನುವಾರ ಅನಾವರಣಗೊಂಡಿದೆ. ಡಾರ್ಲಿಂಗ್​ ಪ್ರಭಾಸ್, ಕೃತಿ ಸನೋನ್, ಸೈಫ್ ಅಲಿ ಖಾನ್ ಮತ್ತು ಸನ್ನಿ ಸಿಂಗ್ ತಾರಾಗಣ ಇರುವ, ಓಂ ರಾವುತ್ ನಿರ್ದೇಶನದ ಆದಿಪುರುಷ ಆರಂಭದಿಂದಲೂ ಸಿನಿ ಪ್ರಿಯರ ಗಮನ ಸೆಳೆದಿದೆ.

ಈ ಮೆಗಾ-ಬಜೆಟ್ ಚಿತ್ರದ ಪ್ರಮುಖ ಜೋಡಿ ಪ್ರಭಾಸ್ ಮತ್ತು ಕೃತಿ ನಡುವಿನ ಕೆಮಿಸ್ಟ್ರಿ ಅಭಿಮಾನಿಗಳ ಗಮನ ಸೆಳೆಯುತ್ತಿದೆ. ಆದಿಪುರುಷ ಟೀಸರ್ ಬಿಡುಗಡೆ ವೇಳೆ ಪ್ರಭಾಸ್ ಮತ್ತು ಕೃತಿ ಪರಸ್ಪರ ಅಪ್ಪಿಕೊಂಡರು. ಈವೆಂಟ್‌ನ ವಿಡಿ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.

ವಿಡಿಯೋ ಕ್ಲಿಪ್​ನಲ್ಲಿ ಪ್ರಭಾಸ್ ಅವರು ಮೆಟ್ಟಿಲುಗಳ ಕೆಳಗೆ ನಡೆಯುತ್ತಿದ್ದಾಗ ಕೃತಿಗೆ ಬೆಂಬಲಕ್ಕಾಗಿ ಕೈ ಚಾಚುತ್ತಿರುವುದನ್ನು ಕಾಣಬಹುದು. ಬಾಹುಬಲಿಗೆ ಧನ್ಯವಾದ ಹೇಳುತ್ತಿರುವ ಕೃತಿಯ ಮುಖದಲ್ಲಿ ಮಂದಹಾಸವಿದೆ. ವಿಡಿಯೋ ವೈರಲ್​​ ಆದ ನಂತರ ಅಭಿಮಾನಿಗಳು ಅವರ ಹೆಸರಿನ ಆರಂಭಿಕ ಅಕ್ಷರಗಳೊಂದಿಗೆ "ಪ್ರಕ್ರಿ" ಎಂಬ ಅಡ್ಡಹೆಸರಿನಿಂದ ಕರೆಯಲು ಆರಂಭಿಸಿದ್ದಾರೆ.

ಅಭಿಮಾನಿಗಳು ಕಾತರದಿಂದ ಕಾಯುತ್ತಿರುವ ಈ ಚಿತ್ರದ ಫಸ್ಟ್ ಲುಕ್ ಬಿಡುಗಡೆಯಾಗಿದೆ. ಪ್ರಭಾಸ್ ಅವರನ್ನು ಶ್ರೀರಾಮನ ಪಾತ್ರದಲ್ಲಿ ಬಹಿರಂಗಪಡಿಸಿ ಡಿಸೈನ್ ಮಾಡಿರುವ ಈ ಫಸ್ಟ್ ಲುಕ್ ಪೋಸ್ಟರ್ ಪವರ್ ಫುಲ್ ಆಗಿದೆ ಎನ್ನುತ್ತಾರೆ ಅಭಿಮಾನಿಗಳು. ರಾಮಾಯಣ ಆಧಾರಿತ ಈ ಸಿನಿಮಾದಲ್ಲಿ ಪ್ರಭಾಸ್ ರಾಮನ ಪಾತ್ರದಲ್ಲಿ ನಟಿಸುತ್ತಿದ್ದಾರೆ.

ಇದನ್ನೂ ಓದಿ: ಅಯೋಧ್ಯೆಯ ರಾಮಲಲ್ಲಾಗೆ 'ಆದಿಪುರುಷ' ಭೇಟಿ.. ಪ್ರಭಾಸ್ ಜೊತೆ ಸೆಲ್ಫಿಗೆ ಮುಗಿಬಿದ್ದ ಫ್ಯಾನ್ಸ್​

ಈ ಚಿತ್ರ ಟೀಸರ್​ನಿಂದಲೇ ಸಾಕಷ್ಟು ಹೈಪ್​ ಸೃಷ್ಟಿ ಮಾಡಿದೆ. ರಾಮನ ಅವತಾರದಲ್ಲಿ ಪ್ರಭಾಸ್​ ಕಾಣಿಸಿಕೊಂಡಿದ್ದಾರೆ. ಸೀತೆಯಾಗಿ ಕೃತಿ ಸನೋನ್​ ಅಭಿನಯಿಸಿದ್ದಾರೆ. ಹತ್ತು ತಲೆಯ ರಾವಣನಾಗಿ ಸೈಫ್​ ಅಲಿ ಖಾನ್​ ಅಬ್ಬರಿಸಿದ್ದಾರೆ. ಟೀಸರ್​​ನಲ್ಲಿನ ಗ್ರಾಫಿಕ್ಸ್​ ಕಂಡು ಫ್ಯಾನ್ಸ್​ ವ್ಹಾವ್​ ಎನ್ನುತ್ತಿದ್ದಾರೆ. ಹೈ ಬಜೆಟ್​ನಲ್ಲಿ ಈ ಚಿತ್ರ ಸಿದ್ಧವಾಗುತ್ತಿದೆ. ಚಿತ್ರದ ಪ್ರತಿ ಫ್ರೇಮ್​ ಕೂಡ ಅದ್ದೂರಿಯಾಗಿದೆ ಎಂಬುದಕ್ಕೆ ಈ ಟೀಸರ್​ ಸಾಕ್ಷಿ ಒದಗಿಸುತ್ತಿದೆ.

  • " class="align-text-top noRightClick twitterSection" data="">

ಈ ಸಿನಿಮಾ ವಿಶ್ವದಾದ್ಯಂತ 15 ಭಾಷೆಗಳಲ್ಲಿ 20 ಸಾವಿರಕ್ಕೂ ಹೆಚ್ಚು ಸ್ಕ್ರೀನ್‌ಗಳಲ್ಲಿ ಬಿಡುಗಡೆಯಾಗಲಿದೆ ಎಂಬ ವರದಿಗಳಿವೆ. ಈ ಮೂಲಕ ಆದಿಪುರುಷ ಸಿನಿಮಾ ಪ್ಯಾನ್ ಇಂಡಿಯಾ ಬದಲಾಗಿ ಪ್ಯಾನ್ ವರ್ಲ್ಡ್ ಸಿನಿಮಾವಾಗಿ ತೆರೆಗೆ ಬರಲಿದೆ. ಮೇಲಾಗಿ ಈ ಸಿನಿಮಾ 3ಡಿ ಹಾಗೂ ಡಾಲ್ಬಿಯಲ್ಲಿ ಬಿಡುಗಡೆಯಾಗುತ್ತಿದೆ ಎಂದು ವರದಿಯಾಗಿದೆ.

ನಿನ್ನೆ ಐದು ಭಾಷೆಗಳಲ್ಲಿ ಆದಿಪುರುಷ ಚಿತ್ರದ ಟೀಸರ್ ಬಿಡುಗಡೆಯಾಗಿದೆ. 1 ನಿಮಿಷ 45 ಸೆಕೆಂಡುಗಳ ಈ ಟೀಸರ್‌ನಲ್ಲಿ ಚಿತ್ರದ ಬಹುತೇಕ ಪ್ರಮುಖ ತಾರೆಯರ ಫಸ್ಟ್​​ ಲುಕ್​​ ಕಂಡುಬಂದಿದೆ. ಭೂಷಣ್​ ಕುಮಾರ್ ಮತ್ತು ಕ್ರಿಷನ್​ ಕುಮಾರ್​ ಅವರು ಈ ಚಿತ್ರಕ್ಕೆ ಬಂಡವಾಳ ಹೂಡುತ್ತಿದ್ದಾರೆ. 2023ರ ಜನವರಿ 12ರಂದು 3ಡಿ ವರ್ಷನ್​ನಲ್ಲಿ ಈ ಸಿನಿಮಾ ರಿಲೀಸ್​ ಆಗಲಿದೆ.

Last Updated : Oct 3, 2022, 12:18 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.