ETV Bharat / entertainment

ರಾಮೋಜಿ ಫಿಲ್ಮ್ ಸಿಟಿಯಲ್ಲಿ 110 ವರ್ಷಗಳ ಭಾರತೀಯ ಸಿನಿಮಾ ಫೆಸ್ಟಿವಲ್​ ಶುರು!

author img

By ETV Bharat Karnataka Team

Published : Oct 13, 2023, 5:34 PM IST

Updated : Oct 13, 2023, 6:41 PM IST

ಹೈದರಾಬಾದ್​ನ ರಾಮೋಜಿ ಫಿಲ್ಮ್ ಸಿಟಿಯಲ್ಲಿ ಅಕ್ಟೋಬರ್​ 12ರಿಂದ 46 ದಿನಗಳ ಕಾಲ ಭಾರತೀಯ ಸಿನಿಮಾ ಫೆಸ್ಟಿವಲ್​ ಆರಂಭವಾಗಿದೆ.

110 Year Indian Cinema Festival at Ramoji Film City in Hyderabad
ರಾಮೋಜಿ ಫಿಲ್ಮ್ ಸಿಟಿಯಲ್ಲಿ 110 ವರ್ಷಗಳ ಭಾರತೀಯ ಸಿನಿಮಾ ಫೆಸ್ಟಿವಲ್​ ಶುರು

ರಾಮೋಜಿ ಫಿಲ್ಮ್ ಸಿಟಿ

ಹೈದರಾಬಾದ್: ಜಗತ್ತಿನ ಅತಿದೊಡ್ಡ ಚಿತ್ರನಗರಿ ಎಂಬ ಖ್ಯಾತಿಯ 'ರಾಮೋಜಿ ಫಿಲ್ಮ್ ಸಿಟಿ'ಯಲ್ಲಿ ಗುರುವಾರದಿಂದ 110 ವರ್ಷಗಳ ಭಾರತೀಯ ಸಿನಿಮಾ ಫೆಸ್ಟಿವಲ್​ ಶುರುವಾಗಿದೆ. ಸಿನಿಮಾ ಮನರಂಜನೆ ಮತ್ತು ಕಾರ್ನಿವಲ್ ಮೆರವಣಿಗೆಗಳ ಝೇಂಕಾರ ಮೊಳಗುತ್ತಿದೆ. ಪ್ರವಾಸಿಗರನ್ನು ಫಿಲ್ಮ್​ ಸಿಟಿ ಕೈಬೀಸಿ ಕರೆಯುತ್ತಿದೆ. ವಿಶಾಲ ಪ್ರದೇಶದ ತುಂಬೆಲ್ಲ ಸಂಭ್ರಮದ ಹೊನಲು ಹರಿಯುತ್ತಿದೆ.

ಭಾರತೀಯ ಚಿತ್ರರಂಗವು ತನ್ನ 110ನೇ ವಾರ್ಷಿಕೋತ್ಸವ ಆಚರಿಸುತ್ತಿದೆ. ಇದರ ಭಾಗವಾಗಿ ಹೈದರಾಬಾದ್​ನ ರಾಮೋಜಿ ಫಿಲ್ಮ್ ಸಿಟಿಯಲ್ಲಿ ಅಕ್ಟೋಬರ್​ 12ರಂದು ಭಾರತೀಯ ಸಿನಿಮಾ ಫೆಸ್ಟಿವಲ್​ ಆಯೋಜಿಸಿದೆ. ಸುದೀರ್ಘ 46 ದಿನಗಳ ಕಾಲ ಈ ಸಡಗರ ನಡೆಯಲಿದೆ. ಪ್ರತಿದಿನವೂ ಸಂಭ್ರಮದಿಂದ ಮಿಂದೇಳುವ ಫಿಲ್ಮ್​ ಸಿಟಿಯು ಫೆಸ್ಟಿವಲ್​ನಿಂದ ಮತ್ತಷ್ಟು ಮೆರುಗು ಪಡೆದುಕೊಂಡಿದೆ.

ಭೂರಮೆಯ ಸ್ವರ್ಗದಂತಿರುವ ರಾಮೋಜಿ ಚಿತ್ರನಗರಿಯು ಮಕ್ಕಳಿಂದ ಹಿಡಿದು ಎಲ್ಲ ವಯೋಮಾನದ ಪ್ರವಾಸಿಗರನ್ನೂ ಸೂಜಿಗಲ್ಲಿನಂತೆ ಆಕರ್ಷಿಸುತ್ತಿದೆ. ಝಗಮಗಿಸುವ ವಿದ್ಯುತ್ ದೀಪಾಲಂಕಾರಗಳು ನೋಡುಗರ ಕಣ್ಣಿಗೆ ಹಬ್ಬದ ಅನುಭವ ನೀಡುತ್ತಿದೆ. ಎತ್ತ ನೋಡಿದರೂ ಚಿತ್ತಾಕರ್ಷಕವಾದ ದೃಶ್ಯಗಳು ಹಾಗೂ ಸಹಜ ಪ್ರಕೃತಿಯ ಸೌಂದರ್ಯದಿಂದ ತುಂಬಿರುವ ಫಿಲ್ಮ್​ ಸಿಟಿಯು ಪ್ರವಾಸಿಗರಿಗೆ ಪ್ರತಿ ಹೆಜ್ಜೆಹೆಜ್ಜೆಗೂ ಹೊಸ ಆಹ್ಲಾದ ನೀಡುತ್ತದೆ. ವೈವಿಧ್ಯಮಯ ಪ್ರದರ್ಶನಗಳು ಮನರಂಜನೆಯ ಉತ್ತುಂಗಕ್ಕೆ ಕೊಂಡೊಯ್ಯುತ್ತವೆ. ಕಾರ್ನಿವಲ್ ಪರೇಡ್‌ ರಮಣೀಯ ಜಗತ್ತಿಗೆ ಕರೆದೊಯ್ಯುತ್ತದೆ.

ಇದನ್ನೂ ಓದಿ: Cricket World Cup 2023 Trophy: ರಾಮೋಜಿ ಫಿಲ್ಮ್ ಸಿಟಿಯಲ್ಲಿ ಕ್ರಿಕೆಟ್ ವಿಶ್ವಕಪ್ ಟ್ರೋಫಿ ಪ್ರದರ್ಶನ..

ಸಿನಿಮಾ ಫೆಸ್ಟಿವಲ್​ನ ಮೊದಲ ದಿನವೇ ಪ್ರವಾಸಿಗರಿಂದ ತುಂಬಿ ತುಳುಕುತ್ತಿತ್ತು. ರಾಮೋಜಿ ಚಿತ್ರನಗರಿ ಹಾಗೂ ಸಿನಿಮಾ ಫೆಸ್ಟಿವಲ್​ನ ಸವಿಯನ್ನು ಸವಿಯಲು ಎರಡು ತೆಲುಗು ರಾಜ್ಯಗಳಾದ ತೆಲಂಗಾಣ, ಆಂಧ್ರಪ್ರದೇಶ ಮಾತ್ರವಲ್ಲದೇ ನೆರೆಯ ಮಹಾರಾಷ್ಟ್ರ, ಕರ್ನಾಟಕ, ತಮಿಳುನಾಡು, ಕೇರಳ ಹಾಗೂ ಉತ್ತರ ಭಾರತದ ವಿವಿಧ ಭಾಗಗಳಿಂದಲೂ ಜನ ಹರಿದು ಬರುತ್ತಿದ್ದಾರೆ. ಕುಟುಂಬಸಮೇತವಾಗಿ ಬಂದ ಪ್ರವಾಸಿಗರು ಹಾಗೂ ಶಾಲಾ ಮಕ್ಕಳು ಹಾಗೂ ಪ್ರವಾಸಕ್ಕಾಗಿ ಬಂದ ಯುವಕ, ಯುವತಿಯರು ಹಾಗೂ ಹಿರಿಯರು... ಹೀಗೆ ಎಲ್ಲ ವಯೋಮಾನದವರು ಸಂತಸದಲ್ಲಿ ಮಿಂದೆದ್ದರು.

ಪಕ್ಷಿಗಳ ಧಾಮ, ಜಲಪಾತಗಳು, ದೈತ್ಯ ತೊಟ್ಟಿಲುಗಳು, ಎಲೆಕ್ಟ್ರಿಕ್ ರೈಲು ಸವಾರಿ ಮತ್ತು ಕುದುರೆ ಸವಾರಿಯು ಮಕ್ಕಳು ಸಂಭ್ರಮವನ್ನು ಹೆಚ್ಚಿಸುತ್ತಿವೆ. ನೈಜನತೆಯನ್ನೇ ಪ್ರತಿಬಿಂಬಿಸುವ ಸಿನಿಮಾ ಸೆಟ್​ಗಳು ಹಾಗೂ 'ಮಹಾಭಾರತಂ' ಸಿನಿಲೋಕವು ವೃದ್ಧರಾದಿ ಪ್ರತಿಯೊಬ್ಬರನ್ನೂ ಹುಬ್ಬೇರಿಸುವಂತೆ ಮಾಡುತ್ತವೆ. ನೃತ್ಯ ಹಾಗೂ ಸಂಗೀತ ಕಾರ್ಯಕ್ರಮಗಳನ್ನು ಪ್ರೇಕ್ಷಕರನ್ನು ಮಂತ್ರಮುಗ್ಧಗೊಳಿಸುತ್ತಿದೆ. ಮುಂದಿನ ತಿಂಗಳು 26ರವರೆಗೆ ಈ ಸಿನಿಮಾ ಫೆಸ್ಟಿವಲ್​ ನಡೆಯಲಿವೆ. ಫಿಲ್ಮ್​ ಸಿಟಿಯ ಆಡಳಿತವು ಟಿಕೆಟ್ ಬುಕ್ಕಿಂಗ್​​ ವೇಳೆ ವಿವಿಧ ರೀತಿಯ ಪ್ಯಾಕೇಜ್‌ಗಳನ್ನು ಒದಗಿಸುತ್ತಿದೆ.

ಇದನ್ನೂ ಓದಿ: Ramoji Film City: ದೆಹಲಿಯಲ್ಲಿ ನಡೆದ MICE 2023 ರಲ್ಲಿ ಗಮನ ಸೆಳೆದ ರಾಮೋಜಿ ಫಿಲ್ಮ್ ಸಿಟಿ ಸ್ಟಾಲ್

Last Updated : Oct 13, 2023, 6:41 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.