ETV Bharat / entertainment

ಬಾಯ್ಕಾಟ್​ ಬಿಸಿ ನಡುವೆ ಬಾಲಿವುಡ್​ನಲ್ಲಿ ಭರವಸೆ ಮೂಡಿಸಿದ ವಿಕ್ರಮ್ ವೇದ ಟೀಸರ್

author img

By

Published : Aug 24, 2022, 4:57 PM IST

ಸಿನಿಮಾಗಳ ಹಿನ್ನೆಡೆ, ಬಾಯ್ಕಾಟ್​ ಬಿಸಿಯಲ್ಲಿರುವ ಬಾಲಿವುಡ್‌ ಚಿತ್ರರಂಗಕ್ಕೆ ವಿಕ್ರಮ್ ವೇದ ಸಿನಿಮಾ ಟೀಸರ್ ಗೆಲುವಿನ ಭರವಸೆ ಮೂಡಿಸಿದೆ.

Vikram Vedha teaser
ವಿಕ್ರಮ್ ವೇದ ಟೀಸರ್

ನಟ ಹೃತಿಕ್ ರೋಷನ್ ಮತ್ತು ನಟ ಸೈಫ್ ಅಲಿ ಖಾನ್ ಅಭಿನಯದ ವಿಕ್ರಮ್ ವೇದ ಸಿನಿಮಾ ಟೀಸರ್ ಬಾಲಿವುಡ್‌ನಲ್ಲಿ ಭರವಸೆ ಮೂಡಿಸಿದೆ. ಟೀಸರ್ ಬಿಡುಗಡೆ ಆಗಿ 5 ಗಂಟೆಗಳಲ್ಲಿ 58 ಲಕ್ಷಕ್ಕೂ ಅಧಿಕ ವೀಕ್ಷಣೆ ಆಗಿದೆ. ವಿಕ್ರಮ್ ವೇದ ತಮಿಳು ಚಿತ್ರದ ಹಿಂದಿ ರಿಮೇಕ್. ಮೂಲ ಚಿತ್ರವನ್ನು ನಿರ್ದೇಶಿಸಿದ ಪುಷ್ಕರ್ ಮತ್ತು ಗಾಯತ್ರಿ ಅವರೇ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ.

ಸೌತ್​​ ನಟರಾದ ಆರ್ ಮಾಧವನ್ ಮತ್ತು ವಿಜಯ್ ಸೇತುಪತಿ ಅಭಿನಯದ ಕಾಲಿವುಡ್​ನ ಬ್ಲಾಕ್​ಬಸ್ಟರ್, ಸೂಪರ್​ ಹಿಟ್ ವಿಕ್ರಮ್ ವೇದ ಹಿಂದಿಗೆ ರಿಮೇಕ್ ಆಗಿದ್ದು ಸೆಪ್ಟೆಂಬರ್ 30ರಂದು ದೇಶಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ಈ ಸಿನಿಮಾದಲ್ಲಿ ಹೃತಿಕ್ ರೋಷನ್ ವೇದ ಪಾತ್ರದಲ್ಲಿ, ಸೈಫ್ ಅಲಿ ಖಾನ್ ವಿಕ್ರಮ್ ಪಾತ್ರದಲ್ಲಿ ಅಭಿನಯಿಸಿದ್ದಾರೆ.

  • " class="align-text-top noRightClick twitterSection" data="">

ವಿಕ್ರಮ್ ವೇದ ಟೀಸರ್ 1 ನಿಮಿಷ ಮತ್ತು 54 ಸೆಕೆಂಡ್‌ ಇದ್ದು ದರೋಡೆಕೋರನನ್ನು ಪತ್ತೆಹಚ್ಚಲು ಹೊರಡುವ ಕಠಿಣ ಪೊಲೀಸ್ ಅಧಿಕಾರಿಯಾಗಿ ಸೈಫ್ ಅಲಿ ಖಾನ್ ಕಾಣಿಸಿಕೊಂಡಿದ್ದಾರೆ. ದರೋಡೆಕೋರನ ಪಾತ್ರವನ್ನು ಹೃತಿಕ್ ರೋಷನ್ ನಿರ್ವಹಿಸಿದ್ದಾರೆ.

ಇದನ್ನೂ ಓದಿ: ಚೆನ್ನೈನಲ್ಲಿ ಬ್ರಹ್ಮಾಸ್ತ್ರ ​ಸಿನಿಮಾ ಪ್ರಚಾರ - ದಕ್ಷಿಣ ಭಾರತದ ಆಹಾರ ಸವಿದ ರಣ್​​ಬೀರ್ ಕಪೂರ್

ಭಾರತದ ಜಾನಪದ ಕಥೆಯಾದ ವಿಕ್ರಮ ಮತ್ತು ಬೇತಾಳ ಕಥೆಯನ್ನು ಆಧರಿಸಿದೆ. ಈ ಚಿತ್ರದಲ್ಲಿ ರಾಧಿಕಾ ಆಪ್ಟೆ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ತಮಿಳು ಚಿತ್ರವನ್ನು ನಿರ್ದೇಶಿಸಿದ ಪುಷ್ಕರ್ ಮತ್ತು ಗಾಯತ್ರಿ ಹಿಂದಿ ರಿಮೇಕ್‌ನ ನಿರ್ದೇಶಕರೂ ಆಗಿದ್ದಾರೆ. ಚಿತ್ರವನ್ನು ಎಸ್ ಶಶಿಕಾಂತ್ ಮತ್ತು ಭೂಷಣ್ ಕುಮಾರ್ ನಿರ್ಮಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.