ETV Bharat / entertainment

ಸಾಮಾಜಿಕ ಕಳಕಳಿಯ 'ವಿಕಾಸ ಪರ್ವ'ಕ್ಕೆ ನಿರ್ದೇಶಕ ಕೆ.ಎಂ.ಚೈತನ್ಯ ಸಾಥ್

author img

By ETV Bharat Karnataka Team

Published : Dec 15, 2023, 7:20 PM IST

ಸಾಮಾಜಿಕ ಕಳಕಳಿ ಹೊಂದಿರುವ ಹೊಸ ಕನ್ನಡ ಸಿನಿಮಾದ ಶೀರ್ಷಿಕೆ ಅನಾವರಣಗೊಂಡಿದೆ.

Vikasa Parva title Reveal event
'ವಿಕಾಸ ಪರ್ವ' ಟೈಟಲ್​ ರಿವೀಲ್​​ ಈವೆಂಟ್​

ಕನ್ನಡ ಚಿತ್ರರಂಗದಲ್ಲೀಗ ಕಂಟೆಂಟ್ ಓರಿಯೆಂಟೆಡ್ ಚಿತ್ರಗಳದ್ದೇ ಕಾರುಬಾರು. ಉತ್ತಮ ಕಂಟೆಂಟ್‌ನೊಂದಿಗೆ ಸಿನಿಮಾಗಳು ಮೂಡಿಬರುತ್ತಿವೆ. 'ವಿಕಾಸ ಪರ್ವ' ಕೂಡ ಇದೇ ಸಾಲಿಗೆ ಸೇರಿದೆ. ಇತ್ತೀಚಿಗೆ ಈ ಚಿತ್ರದ ಶೀರ್ಷಿಕೆ ಅನಾವರಣ ಸಮಾರಂಭ ನಡೆಯಿತು. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಮಾಜಿ ಅಧ್ಯಕ್ಷ ಭಾ.ಮ.ಹರೀಶ್ ಹಾಗೂ ನಿರ್ದೇಶಕ ಕೆ.ಎಂ.ಚೈತನ್ಯ ಶೀರ್ಷಿಕೆ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಕೋರಿದರು.

ಈ ಚಿತ್ರಕ್ಕೆ ಸಂಭಾಷಣೆ ಬರೆದಿರುವ ರಾಜ್ಯ ಪ್ರಶಸ್ತಿವಿಜೇತ ವಿಶೃತ್ ನಾಯಕ್ ಮಾತನಾಡಿ, ವಿಕಾಸ ಪರ್ವ ಸಾಮಾಜಿಕ ಕಳಕಳಿಯುಳ್ಳ ಚಿತ್ರ. ಉತ್ತಮ ಸಂದೇಶ ಸಿನಿಮಾದಲ್ಲಿದೆ.‌ ಕಿರುತೆರೆಯಲ್ಲಿ ತಮ್ಮದೇ ಆದ ಚಾಪು ಮೂಡಿಸಿರುವ ರೋಹಿತ್ ನಾಗೇಶ್ ಪ್ರಮುಖ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಚಿತ್ರಕ್ಕೆ ನಾನು ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ಬರೆದಿದ್ದೇನೆ ಎಂದು ಮಾಹಿತಿ ನೀಡಿದರು.

Vikasa Parva title Reveal event
'ವಿಕಾಸ ಪರ್ವ' ಟೈಟಲ್​ ರಿವೀಲ್​​ ಈವೆಂಟ್​

ನಿರ್ದೇಶಕ ಅನ್ಬು ಅರಸ್ ಮಾತನಾಡಿ, ಚಿತ್ರದ ಫಸ್ಟ್ ಲುಕ್ ರಿವೀಲ್ ಆಗಿದೆ. ಚಿತ್ರತಂಡದ ಸಹಕಾರದಿಂದ ಮೊದಲ ಹಂತದ ಚಿತ್ರೀಕರಣ ಮುಕ್ತಾಯವಾಗಿದೆ. ದ್ವಿತೀಯ ಹಂತದ ಚಿತ್ರೀಕರಣ ಶೀಘ್ರದಲ್ಲೇ ಆರಂಭವಾಗಲಿದೆ ಎಂದರು.

ಬಳಿಕ ಮಾತನಾಡಿದ ನಟ ರೋಹಿತ್ ನಾಗೇಶ್‌, ವಿಶೃತ್ ನಾಯಕ್ ಹೇಳಿದ ಕಥೆ ಇಷ್ಟವಾಯಿತು. ಉತ್ತಮ ಕಂಟೆಂಟ್​ನೊಂದಿಗೆ ಬರುತ್ತಿರುವ ಚಿತ್ರಕ್ಕೆ ಎಲ್ಲರ ಪ್ರೋತ್ಸಾಹವಿರಲಿ ಎಂದು ಕೇಳಿಕೊಂಡರು. ಕಿರುತೆರೆ ನಟ ರೋಹಿತ್ ನಾಗೇಶ್ ಅಲ್ಲದೇ ಸ್ವಾತಿ, ನಿಶಿತಾ ಗೌಡ, ಅಶ್ವಿನ್ ಹಾಸನ್, ಬಿಲ್ವ, ಬಲ ರಾಜವಾಡಿ ಮುಂತಾದವರು ತಾರಾಬಳಗದಲ್ಲಿದ್ದಾರೆ.

ಇದನ್ನೂ ಓದಿ: 'ಕೆಲವೊಮ್ಮೆ ಮಾಡದ ತಪ್ಪಿಗೂ...': ರವೀನಾ ಟಂಡನ್ ಹೀಗೆ ಹೇಳಿದ್ದೇಕೆ?

ನವೀನ್ ಸುವರ್ಣ ಕ್ಯಾಮರಾವರ್ಕ್ ಮಾಡಿದ್ದು, ಮೈಂಡ್ ಥಾಟ್ಸ್ ಮೀಡಿಯಾ ಲಾಂಛನದಲ್ಲಿ ಸಮೀರ್ ನಿರ್ಮಾಣ ಮಾಡಿದ್ದಾರೆ. ಸದ್ಯ ಶೀರ್ಷಿಕೆಯಿಂದ ಗಮನ ಸೆಳೆಯುತ್ತಿರುವ ವಿಕಾಸ ಪರ್ವ ಶೀಘ್ರದಲ್ಲೇ ಶೂಟಿಂಗ್ ಮುಗಿಸಿ ಪ್ರೇಕ್ಷಕರ ಮುಂದೆ ಬರಲಿದೆ.

ಇದನ್ನೂ ಓದಿ: 'ನಾನು ಕುಡಿಯಲು ಬಯಸಿದರೆ..': ವೈರಲ್ ವಿಡಿಯೋಗೆ ಸನ್ನಿ ಡಿಯೋಲ್​ ಮತ್ತೊಮ್ಮೆ ಸ್ಪಷ್ಟನೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.