ETV Bharat / entertainment

'ಪ್ರೀತಿ' ಪ್ರಣಯವನ್ನು ಮೀರಿದ್ದು.. ತಮನ್ನಾರನ್ನು 'ಜಾನೆ ಜಾನ್​' ಎಂದು ಕರೆದ ವಿಜಯ್​ ವರ್ಮಾ

author img

By ETV Bharat Karnataka Team

Published : Sep 17, 2023, 10:53 PM IST

'ಜಾನೆ ಜಾನ್​' ಪ್ರಚಾರದ ಸಂದರ್ಶನದಲ್ಲಿ ವಿಜಯ್​ ವರ್ಮಾ ತಮ್ಮ ಪ್ರೀತಿಯ ಬಗ್ಗೆ ಮಾತನಾಡಿದ್ದಾರೆ. 'ಪ್ರೀತಿ ಎಂಬುದು ಪ್ರಯಣವನ್ನು ಮೀರಿದ್ದು' ಎಂದಿದ್ದಾರೆ.

Vijay Varma opens up on his idea of love, calls Tamannaah Bhatia his 'Jaane Jaan'
'ಪ್ರೀತಿ' ಪ್ರಣಯವನ್ನು ಮೀರಿದ್ದು.. ತಮನ್ನಾರನ್ನು 'ಜಾನೆ ಜಾನ್​' ಎಂದು ಕರೆದ ವಿಜಯ್​ ವರ್ಮಾ

ನಟ ವಿಜಯ್​ ವರ್ಮಾ ಅವರ ಮುಂಬರುವ ಚಿತ್ರ 'ಜಾನೆ ಜಾನ್​' ಬಿಡುಗಡೆಗೆ ಸಜ್ಜಾಗುತ್ತಿದೆ.​ ಜೈದೀಪ್​ ಅಹ್ಲಾವತ್ ಮತ್ತು ಕರೀನಾ ಕಪೂರ್​ ಖಾನ್​ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ಈ ಚಿತ್ರದ ಪ್ರಚಾರದಲ್ಲಿ ವಿಜಯ್​ ನಿರತರಾಗಿದ್ದಾರೆ. ಇವರಿಗೆ ಎಲ್ಲೇ ಹೋದರೂ ತಮನ್ನಾ ಭಾಟಿಯಾ ಜೊತೆಗಿನ ಪ್ರೀತಿ ಬಗೆಗಿನ ಪ್ರಶ್ನೆಗಳೇ ಎದುರಾಗುತ್ತದೆ. ಈ ಸಂದರ್ಭದಲ್ಲಿ ತಮ್ಮ ಅಮೂಲ್ಯ ಪ್ರೀತಿಯ ಬಗ್ಗೆ ಮಾತನಾಡಲು ಅವರೆಂದೂ ಹಿಂದೆ ಸರಿಯುವುದಿಲ್ಲ. ಇತ್ತೀಚೆಗಿನ ಸಂದರ್ಶನದಲ್ಲೂ ವಿಜಯ್​ ತಮ್ಮ 'ಪ್ರೀತಿ'ಯನ್ನು ಅಭಿಮಾನಿಗಳ ಮುಂದೆ ತೆರೆದಿಟ್ಟರು.

ಟಾಲಿವುಡ್​ ಮಿಲ್ಕಿ ಬ್ಯೂಟಿ ತಮನ್ನಾ ಭಾಟಿಯಾ ಮತ್ತು ವಿಜಯ್​ ವರ್ಮಾ ಸಿನಿ ವಲಯದಲ್ಲಿ ಪ್ರೇಮಪಕ್ಷಿಗಳಾಗಿ ಗುರುತಿಸಿಕೊಂಡಿದ್ದಾರೆ. ಕಳೆದ ಡಿಸೆಂಬರ್​ನಿಂದ ಈ ಜೋಡಿಯ ಪ್ರೇಮಪುರಾಣ ಇಂಟರ್​ನೆಟ್​ನಲ್ಲಿ ಜೋರಾಗೇ ಸದ್ದು ಮಾಡಿದೆ. ಲಸ್ಟ್ ಸ್ಟೋರಿಸ್​ 2ರ ಪ್ರಚಾರ ಸಂದರ್ಭದಲ್ಲಿ ತಮ್ಮ ಪ್ರೇಮಸಂಬಂಧವನ್ನು ಅಧಿಕೃತಗೊಳಿಸಿದರು. ಅಂದಿನಿಂದ ಹಲವು ಬಾರಿ ಈವೆಂಟ್​ಗಳಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ. ಇವರಿಬ್ಬರು ತಮ್ಮ ಪ್ರೀತಿಯ ಬಗ್ಗೆ ಪದೇ ಪದೇ ಮಾತನಾಡುತ್ತಾರೆ.

ವಿಜಯ್​ ವರ್ಮಾ ಅವರು ಇತ್ತೀಚೆಗೆ ದೇಸಿ ವೈಬ್ಸ್​ ಟಾಕ್​ ಶೋನಲ್ಲಿ ಶೆಹನಾಜ್​ ಗಿಲ್​ ಅವರೊಂದಿಗೆ ತಮ್ಮ ಮುಂಬರುವ ಚಿತ್ರ ಜಾನೆ ಜಾನ್​ ಪ್ರಚಾರಕ್ಕಾಗಿ ಕಾಣಿಸಿಕೊಂಡರು. ಕರೀನಾ ಕಪೂರ್​ ಜೊತೆಗೆ ತೆರೆ ಹಂಚಿಕೊಂಡಿರುವ ಬಗ್ಗೆಯೂ ಅನುಭವ ಹಂಚಿಕೊಂಡರು. ಅದರ ಹೊರತಾಗಿ ವೈಯಕ್ತಿಕ ವಿಚಾರದ ಬಗ್ಗೆ ಮಾತನಾಡಿದರು. ಅವರು ತಮನ್ನಾ ಜೊತೆಗಿನ ಸಂಬಂಧ ಅಧಿಕೃತಗೊಳಿಸಿದಾಗಿನಿಂದ ವೈಯಕ್ತಿಕ ವಿಚಾರಗಳು ಅವರ ಸಿನಿಮಾ ಪ್ರಚಾರದ ಭಾಗವಾಗಿದೆ.

ಇದನ್ನೂ ಓದಿ: Jaane Jaan trailer: ಒಟಿಟಿಗೆ ಎಂಟ್ರಿ ಕೊಡಲು ಕರೀನಾ ಕಪೂರ್​ ಖಾನ್​ ರೆಡಿ!

ಕಾರ್ಯಕ್ರಮದಲ್ಲಿ ಶೆಹನಾಜ್​ ಗಿಲ್​ ಅವರೊಂದಿಗಿನ ಸಂಭಾಷಣೆಯಲ್ಲಿ, ವಿಜಯ್​ ಅವರಿಗೆ ಪ್ರೀತಿಯ ಕಲ್ಪನೆಯ ಬಗ್ಗೆ ಪ್ರಶ್ನೆಗಳನ್ನು ಕೇಳಲಾಯಿತು. ತಮ್ಮ ಅಭಿಪ್ರಾಯ ಹಂಚಿಕೊಂಡ ಗಲ್ಲಿ ಬಾಯ್​ ಸ್ಟಾರ್​, ಪ್ರೀತಿ ಎಂಬುದು ಪ್ರಯಣವನ್ನು ಮೀರಿದೆ ಎಂದು ಹೇಳಿದರು. ನಮಗೆ ಉತ್ತಮ ಸಂಗಾತಿ ಸಿಕ್ಕಲ್ಲಿ ಶಾಂತಿಗೆ ಭಂಗವಿಲ್ಲ ಎಂದು ಅಭಿಪ್ರಾಯಪಟ್ಟರು. ಕಾರ್ಯಕ್ರಮದ ಮೋಜಿನ ಸುತ್ತಿನಲ್ಲಿ, ನಿಜ ಜೀವನದ ಗೆಳತಿ ತಮನ್ನಾ ಮತ್ತು ಕರೀನಾರಲ್ಲಿ ನಿಮ್ಮ 'ಜಾನೆ ಜಾನ್​' ಅನ್ನು ಆಯ್ಕೆ ಮಾಡಿ ಎಂದು ವಿಜಯ್​ ಅವರಲ್ಲಿ ಕೇಳಲಾಯಿತು. ಕೂಡಲೇ ಅವರು ಕಣ್ಣು ಮಿಟಿಕಿಸದೇ 'ತಮನ್ನಾ' ಎಂದು ಉತ್ತರಿಸಿದರು.

ಸೌತ್​ ಸಿನಿಮಾ ಇಂಡಸ್ಟ್ರಿಯ ಟಾಪ್​ ಹೀರೋಯಿನ್​​ ತಮನ್ನಾ ಭಾಟಿಯಾ ಮತ್ತು ಬಾಲಿವುಡ್​ ಪ್ರತಿಭೆ ವಿಜಯ್​ ವರ್ಮಾ ಮೊದಲ ಬಾರಿ ಲಸ್ಟ್ ಸ್ಟೋರಿಸ್​ 2 ಶೂಟಿಂಗ್​ ಸೆಟ್​ನಲ್ಲಿ ಭೇಟಿಯಾದರು. ಅಂತಿಮವಾಗಿ ಪ್ರೇಮಪಕ್ಷಿಗಳಾಗಿ ಹೊರಹೊಮ್ಮಿದರು. 2023 ನ್ಯೂ ಇಯರ್​ ಪಾರ್ಟಿಯಲ್ಲಿ ಇಬ್ಬರೂ ಚುಂಬಿಸಿದ್ದ ವಿಡಿಯೋ ಸಖತ್​ ವೈರಲ್​ ಆಗಿ, ಡೇಟಿಂಗ್​ ವದಂತಿ ಪ್ರಾರಂಭಗೊಂಡಿತು. ಫೈನಲಿ ಲಸ್ಟ್ ಸ್ಟೋರಿಸ್​ 2 ಪ್ರಮೋಶನಲ್​​ ಈವೆಂಟ್​ನಲ್ಲಿ​ ತಮ್ಮ ಪ್ರೀತಿಯ ವಿಚಾರವನ್ನು ಬಹಿರಂಗಪಡಿಸಿದರು.

ಇದನ್ನೂ ಓದಿ: 'ಕಾಲ್​ಕೂಟ್​' ಸ್ಕ್ರೀನಿಂಗ್​: ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡ ಲವ್ ಬರ್ಡ್ಸ್​ ತಮನ್ನಾ- ವಿಜಯ್​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.