ETV Bharat / entertainment

ವರುಣ್ ತೇಜ್ ಲಾವಣ್ಯ ತ್ರಿಪಾಠಿ ಮದುವೆ: ಕಾಕ್ಟೈಲ್ ಪಾರ್ಟಿಯಲ್ಲಿ ಅಲ್ಲು ಅರ್ಜುನ್, ರಾಮ್​ಚರಣ್ ಸೇರಿ ತಾರಾ ಕುಟುಂಬ ಭಾಗಿ​​

author img

By ETV Bharat Karnataka Team

Published : Oct 31, 2023, 12:48 PM IST

Updated : Oct 31, 2023, 1:13 PM IST

Varun Tej and Lavanya Tripathi: ಇಟಲಿಯಲ್ಲಿ ನಡೆದ ವರುಣ್ ತೇಜ್ ಲಾವಣ್ಯ ತ್ರಿಪಾಠಿ ಮದುವೆಯ ರಾಯಲ್​​ ಕಾಕ್ಟೈಲ್ ಪಾರ್ಟಿಯಲ್ಲಿ ಸೂಪರ್​ ಸ್ಟಾರ್ಸ್ ಭಾಗಿ ಆಗಿದ್ದಾರೆ.

Varun Tej Lavanya Tripathi wedding cocktail party
ವರುಣ್ ತೇಜ್ ಲಾವಣ್ಯ ತ್ರಿಪಾಠಿ ಮದುವೆಯ ​​ ಕಾಕ್ಟೈಲ್ ಪಾರ್ಟಿಯ ಕ್ಷಣ

ವರುಣ್ ತೇಜ್ ಹಾಗೂ ಲಾವಣ್ಯ ತ್ರಿಪಾಠಿ ಇಟಲಿಯಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ. ಪ್ರೇಮಪಕ್ಷಿಗಳು ಅದ್ಧೂರಿ ವಿವಾಹ ಮಹೋತ್ಸವಕ್ಕೆ ಸಜ್ಜಾಗುತ್ತಿದ್ದು, ಮೆಗಾ ಕುಟುಂಬದಲ್ಲಿ ಸಂಭ್ರಮಾಚರಣೆ ಶುರುವಾಗಿದೆ. ತೆಲುಗು ಚಿತ್ರರಂಗದಲ್ಲಿ ಸಾಕಷ್ಟು ಹೆಸರು ಮಾಡಿರುವ ಕೊನಿಡೇಲಾ, ಅಲ್ಲು ಕುಟುಂಬ ಸದಸ್ಯರು ಇಟಲಿಯಲ್ಲಿ ನಡೆದ ರಾಯಲ್​​ ಕಾಕ್ಟೈಲ್ ಪಾರ್ಟಿಯಲ್ಲಿ ಭಾಗಿಯಾದರು.

Varun Tej Lavanya Tripathi wedding cocktail party
ವರುಣ್ ತೇಜ್ ಲಾವಣ್ಯ ತ್ರಿಪಾಠಿ ಮದುವೆಯ ​​ಕಾಕ್ಟೈಲ್ ಪಾರ್ಟಿಯ ಕ್ಷಣ

ಕಾಕ್ಟೈಲ್ ಪಾರ್ಟಿಯಲ್ಲಿ ಸೂಪರ್ ಸ್ಟಾರ್ಸ್: ಸೋಷಿಯಲ್​ ಮೀಡಿಯಾದಲ್ಲಿ ಕಾಕ್ಟೈಲ್ ಪಾರ್ಟಿಯ ಫೋಟೋಗಳು ಸಖತ್​ ಸದ್ದು ಮಾಡುತ್ತಿವೆ. ವರ್ಣರಂಜಿತ, ರಾಯಲ್​ ಲುಕ್​​ ಕೊಡುವ ಇಟಾಲಿಯನ್ ಶೈಲಿಯ ಹಿನ್ನೆಲೆಯಲ್ಲಿ ನಿಂತು ವಧು ವರ ಫೋಟೋ ಕ್ಲಿಕ್ಕಿಸಿಕೊಂಡಿದ್ದಾರೆ. ಇದೊಂದು ಸ್ಟಾರ್ ಸ್ಟಡ್ ಈವೆಂಟ್​ ಆಗಿತ್ತು. ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ವಿಜೇತ ನಟ ಅಲ್ಲು ಅರ್ಜುನ್, ವರನ ಸೋದರಸಂಬಂಧಿ - ಆರ್​ಆರ್​ಆರ್​ ಸ್ಟಾರ್ ರಾಮ್ ಚರಣ್ ಸೇರಿದಂತೆ ಹಲವು ಖ್ಯಾತನಾಮರು ಈವೆಂಟ್​ಗೆ ಸಾಕ್ಷಿ ಆಗಿದ್ದಾರೆ. ಇಟಲಿಯಲ್ಲೇ ನಾಳೆ ಅದ್ಧೂರಿ ವಿವಾಹ ಸಮಾರಂಭ ಜರುಗಲಿದೆ.

ನಾಳೆ ಅದ್ಧೂರಿ ಮದುವೆ: ನಾಳೆ, ನವೆಂಬರ್​ 1ರಂದು ವರುಣ್ ಮತ್ತು ಲಾವಣ್ಯ ಹಾರ ಬದಲಾಯಿಸಿಕೊಳ್ಳಲಿದ್ದಾರೆ. ಈಗಾಗಲೇ ವಿವಾಹ ಪೂರ್ವದ ಶಾಸ್ತ್ರ, ಕಾರ್ಯಕ್ರಮಗಳು ಆರಂಭವಾಗಿದೆ. ಅಕ್ಟೋಬರ್ 30ರ ಸಂಜೆ ಕಾಕ್ಟೈಲ್ ಪಾರ್ಟಿ ಆಯೋಜಿಸಿದ್ದರು. ಸೋಮವಾರದ ಸಂಜೆಯನ್ನು ತಾರಾಬಳಗ ವಿಶೇಷವಾಗಿಸಿತ್ತು. ಟಾಲಿವುಡ್‌ನ ಪ್ರಭಾವಿ ವ್ಯಕ್ತಿಗಳು ಸಮಾರಂಭಕ್ಕೆ ಸಾಕ್ಷಿ ಆಗಿದ್ದರು. ಪಾರ್ಟಿ ಡ್ರೆಸ್ ಕೋಡ್ ಅನ್ನೂ ಸಹ ಹೊಂದಿದ್ದು, ಪ್ರತಿಯೊಬ್ಬರೂ ಆಕರ್ಷಣೀಯವಾಗಿ ಕಾಣಿಸಿಕೊಂಡಿದ್ದಾರೆ.

Varun Tej Lavanya Tripathi wedding cocktail party
ವರುಣ್ ತೇಜ್ ಲಾವಣ್ಯ ತ್ರಿಪಾಠಿ ಮದುವೆಯ ​​ಕಾಕ್ಟೈಲ್ ಪಾರ್ಟಿಯ ಕ್ಷಣ

ಕಾಕ್ಟೈಲ್ ಪಾರ್ಟಿ ನವಜೋಡಿಗಳಿಗೆ ತಮ್ಮ ಪ್ರೀತಿಪಾತ್ರರು, ಸ್ನೇಹಿತರು ಮತ್ತು ಕುಟುಂಬ ಸದಸ್ಯರೊಂದಿಗೆ ಆತ್ಮೀಯ ಕ್ಷಣ ಕಳೆಯಲು ಒಂದು ಉತ್ತಮ ಅವಕಾಶ ಒದಗಿಸಿತು. ಮೆಹೆಂದಿ, ಹಳ್ದಿ ಮತ್ತು ಪೂಲ್ ಪಾರ್ಟಿ ಸೇರಿದಂತೆ ಹಲವು ಈವೆಂಟ್​ಗಳು ನಡೆಯಲಿವೆ. ನಿನ್ನೆ ಸಂಜೆಯ ಈವೆಂಟ್​ನಲ್ಲಿ ವರುಣ್ ತೇಜ್​​ ವೈಟ್​ ಸ್ಯಾಟಿನ್ ಸೂಟ್ ಮತ್ತು ಬ್ಲ್ಯಾಕ್​ ಪ್ಯಾಂಟ್​ ಧರಿಸಿ ಸಖತ್​ ಹ್ಯಾಂಡ್ಸಂ ಆಗಿ ಕಾಣಿಸಿಕೊಂಡಿದ್ದಾರೆ. ಇತ್ತ ಲಾವಣ್ಯ ತ್ರಿಪಾಠಿ ಸಿಲ್ವರ್ ವೈಟ್​ ಗೌನ್​ನಲ್ಲಿ ಕಂಗೊಳಿಸಿದ್ದಾರೆ.

ಇದನ್ನೂ ಓದಿ: AI ಫೋಟೋ ಹಂಚಿಕೊಂಡ ಅಮಿತಾಭ್​ ಬಚ್ಚನ್​​: ಹಿರಿಯ ನಟನ ಮುಂದಿನ ಸಿನಿಮಾ ಮಾಹಿತಿ ಇಲ್ಲಿದೆ

ಆರ್​ಆರ್​ಆರ್​​ ಸ್ಟಾರ್ ರಾಮ್ ಚರಣ್ ನವವರ ವರುಣ್ ತೇಜ್ ಅವರಂತೆ ಡ್ರೆಸ್ ಆರಿಸಿಕೊಂಡಿದ್ದರೆ, ಪತ್ನಿ ಉಪಾಸನನಾ ಬ್ಲ್ಯಾಕ್​​ ಗೌನ್​​ನಲ್ಲಿ ಸಖತ್​ ಸ್ಟೈಲಿಶ್​ ಆಗಿ ಕಾಣಿಸಿಕೊಂಡರು. ಮತ್ತೋರ್ವ ಪ್ರಮುಖ ಅತಿಥಿಯಾಗಿ ಗುರುತಿಸಿಕೊಂಡ ಪುಷ್ಪತಾರೆ, ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ವಿಜೇತ ನಟ ಅಲ್ಲು ಅರ್ಜುನ್ ಬ್ಲ್ಯಾಕ್​ ಸಿಲ್ವರ್ ಸೂಟ್​ನಲ್ಲಿ ಅಟ್ರ್ಯಾಕ್ಟೀವ್​ ಲುಕ್ ಕೊಟ್ಟರು. ಪತ್ನಿ ಸ್ನೇಹಾ ಆಕರ್ಷಕ ಸಿಲ್ವರ್ ಗೌನ್‌ನಲ್ಲಿ ಕಂಗೊಳಿಸಿದರು. ವೈರಲ್ ಆದ ಫೋಟೋಗಳು ಈ ಸೆಲೆಬ್ರಿಟಿಗಳು ಒಟ್ಟಿಗೆ ಕ್ಯಾಮರಾಗೆ ಪೋಸ್ ನೀಡುತ್ತಿರುವುದನ್ನು ತೋರಿಸಿದೆ.

ಇದನ್ನೂ ಓದಿ: ಬಿಗ್​​ ಬಾಸ್​​ ಮನೆಗೆ ವಾಪಸ್​​ ಬರುತ್ತಿದ್ದಂತೆ ವರ್ತೂರು ಸಂತೋಷ್​ರನ್ನು ಹೊರ ಕಳುಹಿಸಲಿಚ್ಛಿಸಿದ ಸ್ಪರ್ಧಿಗಳು!

Last Updated : Oct 31, 2023, 1:13 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.