ETV Bharat / entertainment

ಮಣಿಪುರದಲ್ಲಿ 25 ವರ್ಷಗಳ ಬಳಿಕ ಹಿಂದಿ ಚಿತ್ರ ಪ್ರದರ್ಶನ.. How Is Josh?

author img

By

Published : Aug 16, 2023, 10:30 AM IST

ಪ್ರೇಕ್ಷಕರ ಮನ ಗೆದ್ದಿದ್ದ ಎವರ್​ಗ್ರೀನ್​ ಚಿತ್ರ ಕುಚ್ ಕುಚ್ ಹೋತಾ ಹೈ ಪ್ರದರ್ಶನಗೊಂಡು 25 ವರ್ಷಗಳ ಬಳಿಕ ಮಣಿಪುರದಲ್ಲಿ ಹಿಂದಿ ಚಲನಚಿತ್ರವೊಂದು ಸಾರ್ವಜನಿಕವಾಗಿ ತೆರೆಕಂಡಿದ್ದು, ಸಾವಿರಾರೂ ಜನರು ಚಿತ್ರವನ್ನು ವೀಕ್ಷಿಸಿ ಸಂತಸ ವ್ಯಕ್ತಪಡಿಸಿದರು.

Uri Screened In Manipur  First Hindi Film To Be Shown In 25 Years  Manipur violence  ಮಣಿಪುರದಲ್ಲಿ 25 ವರ್ಷಗಳ ಬಳಿಕ ಹಿಂದಿ ಚಿತ್ರ ಪ್ರದರ್ಶನ  ಪ್ರೇಕ್ಷಕರ ಮನ ಗೆದ್ದಿದ್ದ ಎವರ್​ಗ್ರೀನ್​ ಚಿತ್ರ  ಹಿಂದಿ ಚಲನಚಿತ್ರವೊಂದು ಸಾರ್ವಜನಿಕವಾಗಿ ತೆರೆ  ಕೋಮು ಘರ್ಷಣೆಯ ಬೆಂಕಿಯಲ್ಲಿ ಬೇಯುತ್ತಿರುವ ಮಣಿಪುರ  ಹಿಂದಿ ಚಿತ್ರವೊಂದು ಸಾರ್ವಜನಿಕವಾಗಿ ಪ್ರದರ್ಶನ  ಸೆಪ್ಟೆಂಬರ್ 2000 ರಲ್ಲಿ ಹಿಂದಿ ಚಲನಚಿತ್ರಗಳ ಮೇಲಿನ ನಿಷೇಧ  ಉರಿ ದಿ ಸರ್ಜಿಕಲ್ ಸ್ಟ್ರೈಕ್  ಮೈತೇಯಿ ಗುಂಪುಗಳ ದೇಶವಿರೋಧಿ ನೀತಿ
How Is Josh?

ಇಂಫಾಲ್​, ಮಣಿಪುರ: ಕೋಮು ಘರ್ಷಣೆಯ ಬೆಂಕಿಯಲ್ಲಿ ಬೇಯುತ್ತಿರುವ ಮಣಿಪುರದಲ್ಲಿ ಸುಮಾರು 25 ವರ್ಷಗಳ ಬಳಿಕ ಹಿಂದಿ ಚಿತ್ರವೊಂದು ಸಾರ್ವಜನಿಕವಾಗಿ ಪ್ರದರ್ಶನಗೊಂಡಿದೆ. ರಾಜಧಾನಿ ಇಂಫಾಲದಿಂದ 63 ಕಿ.ಮೀ ದೂರದಲ್ಲಿರುವ ಚುರಚಂದಪುರ ಜಿಲ್ಲೆಯ ರೆಂಗ್ಕೈ ಎಂಬಲ್ಲಿನ ಬಯಲು ಥಿಯೇಟರ್​ನಲ್ಲಿ ಮಂಗಳವಾರ ಪ್ರದರ್ಶನಗೊಂಡಿತು.

ವಿಕ್ಕಿ ಕೌಶಲ್ ಅಭಿನಯದ ‘ಉರಿ: ದಿ ಸರ್ಜಿಕಲ್ ಸ್ಟ್ರೈಕ್’ ಚಿತ್ರವನ್ನು ವೀಕ್ಷಿಸಲು ಹೆಚ್ಚಿನ ಸಂಖ್ಯೆಯಲ್ಲಿ ಜನ ಆಗಮಿಸಿದ್ದರು. ಮೈತೇಯಿ ಉಗ್ರಗಾಮಿ ಸಂಘಟನೆ ನಿಷೇಧಿತ ಪೀಪಲ್ಸ್ ಲಿಬರೇಶನ್ ಆರ್ಮಿಯ ರಾಜಕೀಯ ವಿಭಾಗವಾದ 'ರೆವಲ್ಯೂಷನರಿ ಪೀಪಲ್ಸ್ ಫ್ರಂಟ್' ಸೆಪ್ಟೆಂಬರ್ 2000 ರಲ್ಲಿ ಹಿಂದಿ ಚಲನಚಿತ್ರಗಳ ಮೇಲಿನ ನಿಷೇಧ ಹೇರಿತ್ತು. ಅಂದಿನಿಂದ ಸ್ಥಗಿತಗೊಂಡಿದ್ದ ಹಿಂದಿ ಚಿತ್ರಗಳ ಪ್ರದರ್ಶನ ಮಂಗಳವಾರ ‘ಹಮರ್ ಸ್ಟೂಡೆಂಟ್ಸ್ ಅಸೋಸಿಯೇಷನ್’ (ಎಚ್‌ಎಸ್‌ಎ) ನಿಂದ ಮತ್ತೆ ಪುನರಾರಂಭಗೊಂಡಿತು.

ಇಂದಿನ ನಡೆ ಮೈತೇಯಿ ಗುಂಪುಗಳ ದೇಶವಿರೋಧಿ ನೀತಿಗಳನ್ನು ಧಿಕ್ಕರಿಸುವುದು ಮತ್ತು ಭಾರತದ ಮೇಲಿನ ನಮ್ಮ ಪ್ರೀತಿಯನ್ನು ತೋರಿಸುವುದಾಗಿದೆ ಎಂದು ಸ್ಥಳೀಯ ಬುಡಕಟ್ಟು ನಾಯಕರ ವೇದಿಕೆಯ ವಕ್ತಾರ ಗಿಂಜಾ ವುಲ್ಜಾಂಗ್ ತಿಳಿಸಿದ್ದಾರೆ. ಚಲನಚಿತ್ರದ ಪ್ರದರ್ಶನದ ಮೊದಲು, ಬಯಲು ಚಿತ್ರಮಂದಿರದಲ್ಲಿ ರಾಷ್ಟ್ರಗೀತೆಯನ್ನು ನುಡಿಸಲಾಯಿತು. ಮಣಿಪುರದಲ್ಲಿ ಸಾರ್ವಜನಿಕವಾಗಿ 1998ರಲ್ಲಿ ಪ್ರದರ್ಶನಗೊಂಡ ಕೊನೆಯ ಹಿಂದಿ ಚಲನಚಿತ್ರ ಎಂದರೆ ಅದು "ಕುಚ್ ಕುಚ್ ಹೋತಾ ಹೈ" ಎಂದು ಎಚ್​ಎಸ್​ಎ ಹೇಳಿದೆ.

ಅಷ್ಟೇ ಅಲ್ಲ 2000ನೇ ಇಸವಿಯಲ್ಲಿ ಹಿಂದಿ ನಿಷೇಧದ ಒಂದು ವಾರದೊಳಗೆ ಬಂಡುಕೋರರು ರಾಜ್ಯದ ಔಟ್‌ಲೆಟ್‌ಗಳಿಂದ ಸಂಗ್ರಹಿಸಿದ ಹಿಂದಿ ಭಾಷೆಯ 6,000 ರಿಂದ 8,000 ವಿಡಿಯೋ ಮತ್ತು ಆಡಿಯೊ ಕ್ಯಾಸೆಟ್‌ಗಳು ಮತ್ತು ಕಾಂಪ್ಯಾಕ್ಟ್ ಡಿಸ್ಕ್‌ಗಳನ್ನು ಸುಟ್ಟುಹಾಕಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈಶಾನ್ಯ ರಾಜ್ಯದಲ್ಲಿ ನಿಷೇಧಕ್ಕೆ ಆರ್‌ಪಿಎಫ್ ಯಾವುದೇ ಕಾರಣವನ್ನು ನೀಡಿಲ್ಲ. ಆದರೆ ರಾಜ್ಯದ ಭಾಷೆ ಮತ್ತು ಸಂಸ್ಕೃತಿಯ ಮೇಲೆ ಬಾಲಿವುಡ್‌ನ ಕೆಟ್ಟ ಪರಿಣಾಮದ ಬಗ್ಗೆ ಉಗ್ರಗಾಮಿ ಗುಂಪು ಭಯಪಡುತ್ತಿದೆ ಎಂದು ಕೇಬಲ್ ಆಪರೇಟರ್‌ಗಳು ಹೇಳಿದ್ದಾರೆ.

ಓದಿ: ಸ್ವಾತಂತ್ರ್ಯ ಭಾಷಣದಲ್ಲಿ ಮಣಿಪುರ ವಿಚಾರ ಪ್ರಸ್ತಾಪ.. ದೇಶವನ್ನು ವಿಶ್ವದ 3ನೇ ಆರ್ಥಿಕತೆಯಾಗಿಸುವ ವಾಗ್ದಾನ ಮಾಡಿದ ಮೋದಿ

ಬಿಜೆಪಿ ಆಡಳಿತವಿರುವ ಈಶಾನ್ಯ ರಾಜ್ಯವಾದ ಮಣಿಪುರದಲ್ಲಿ ಮೇ 3 ಗುರುವಾರದಂದು ಹಿಂಸಾಚಾರ ಭುಗಿಲೆದ್ದಿತು, ಆ ಘಟನೆಗೀಗ ಮೂರು ತಿಂಗಳುಗಳೇ ಕಳೆದು ಹೋಗಿವೆ. ಇಷ್ಟು ದಿನ ಕಳೆದರೂ ರಾಜ್ಯದಲ್ಲಿ ಇನ್ನೂ ಶಾಂತಿ ನೆಲೆಸಿಲ್ಲ. ರಾಜ್ಯದಲ್ಲಿ ಬಹುಸಂಖ್ಯಾತ ಮೈತೇಯಿ ಮತ್ತು ಅಲ್ಪಸಂಖ್ಯಾತ ಕುಕಿ ಸಮುದಾಯದ ನಡುವೆ ದ್ವೇಷದ ಗೋಡೆ ಸೃಷ್ಟಿಸಿದೆ. ಇದು ಮುಂದಿನ ದಿನಗಳಲ್ಲಿ ಮುರಿಯಲು ಕಷ್ಟಕರವಾಗಿದೆ. ಇದುವರೆಗೆ 160 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ. ಸಾವಿರಾರೂ ಮಂದಿ ಗಾಯಗೊಂಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.