200 ಕೋಟಿಯತ್ತ ಸಲ್ಮಾನ್​​ ಕತ್ರಿನಾ ನಟನೆಯ 'ಟೈಗರ್ 3': ಕಲೆಕ್ಷನ್​ ಡೀಟೆಲ್ಸ್ ಇಲ್ಲಿದೆ

author img

By ETV Bharat Karnataka Team

Published : Nov 16, 2023, 12:33 PM IST

Tiger 3 collection

Tiger 3 collection: ಸೂಪರ್​ ಸ್ಟಾರ್​​ ಸಲ್ಮಾನ್​ ಖಾನ್​ ನಟನೆಯ 'ಟೈಗರ್ 3' ಸಿನಿಮಾ ಈವರೆಗೆ 169 ಕೋಟಿ ರೂ. ಕಲೆಕ್ಷನ್​ ಮಾಡಿದೆ.

ಮನೀಶ್​ ಶರ್ಮಾ ನಿರ್ದೇಶನದ ಬಹುನಿರೀಕ್ಷಿತ 'ಟೈಗರ್ 3' ಸಿನಿಮಾ ದೀಪಾವಳಿ ಶುಭ ಸಂದರ್ಭದಲ್ಲಿ ತೆರೆಕಂಡು ಉತ್ತಮ ಪ್ರದರ್ಶನ ಮುಂದುವರಿಸಿದೆ. ಯಶ್​​ ರಾಜ್​​ ಫಿಲ್ಮ್ಸ್ ನಿರ್ಮಾಣದ ಸ್ಪೈ ಸಿನಿಮಾದಲ್ಲಿ ಸೂಪರ್​​ ಸ್ಟಾರ್ ಸಲ್ಮಾನ್​ ಖಾನ್, ಪ್ರತಿಭಾನ್ವಿತ ನಟಿ ಕತ್ರಿನಾ ಕೈಫ್​​, ಜನಪ್ರಿಯ ನಟ ಇಮ್ರಾನ್​ ಹಶ್ಮಿ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ನಿರೀಕ್ಷೆಯಂತೆ ಟೈಗರ್ 3 ಗಲ್ಲಾಪೆಟ್ಟಿಗೆಯಲ್ಲಿ ಭರ್ಜರಿ ಓಪನಿಂಗ್ ಪಡೆದು, ಉತ್ತಮ ಅಂಕಿ ಅಂಶಗಳೊಂದಿಗೆ ಬಾಕ್ಸ್​ ಆಫೀಸ್​ ಪ್ರಯಾಣ ಮುಂದುವರಿಸಿದೆ.

ದೊಡ್ಡ ಅಂಕಿ ಅಂಶಗಳೊಂದಿಗೆ ಬಾಕ್ಸ್ ಆಫೀಸ್​ ಪ್ರಯಾಣ ಆರಂಭಿಸಿದ ಸಿನಿಮಾ ತನ್ನ ನಾಲ್ಕನೇ ದಿನದ ಕಲೆಕ್ಷನ್​ನಲ್ಲಿ ಶೇ. 25 ರಷ್ಟು ಇಳಿಕೆ ಕಂಡಿದೆ. ಅದಾಗ್ಯೂ, ಭಾರತೀಯ ಬಾಕ್ಸ್​ ಆಫೀಸ್​ನಲ್ಲಿ ಚಿತ್ರ ಕೇವಲ ನಾಲ್ಕು ದಿನಗಳಲ್ಲಿ ಒಟ್ಟು 169 ಕೋಟಿ ರೂ. ಸಂಗ್ರಹಿಸಿದೆ. ವಾರದ ದಿನಗಳಾದ ಹಿನ್ನೆಲೆ ಅಂಕಿ ಅಂಶ ಕೊಂಚ ತಗ್ಗಿದೆ. ಈ ವಾರಾಂತ್ಯ ಕಲೆಕ್ಷನ್​ ಏರುವ ನಿರೀಕ್ಷೆ ಇದೆ. ಸಿನಿಮಾ 200 ಕೋಟಿ ರೂಪಾಯಿಗಳ ಗಡಿ ದಾಟುವ ಹಾದಿಯಲ್ಲಿದೆ.

ಯಶ್​​ ರಾಜ್​​ ಫಿಲ್ಮ್ಸ್ ನಿರ್ಮಾಣದ ಸ್ಪೈ ಸಿನಿಮಾಗಳ ಸಾಲಿನಲ್ಲಿ 'ಟೈಗರ್ 3' ಐದನೇ ಚಿತ್ರ. ಚಿತ್ರ ಬಿಡುಗಡೆಯಾದ ದಿನ ಮಿಶ್ರ ಪ್ರತಿಕ್ರಿಯೆ ಸ್ವೀಕರಿಸಿತ್ತು. ಹೆಚ್ಚಿನ ಸಂಖ್ಯೆಯ ಅಭಿಮಾನಿಗಳು ಮೆಚ್ಚಿನ ನಟನ ಸಿನಿಮಾವನ್ನು ಅದ್ಧೂರಿಯಾಗಿ ಸ್ವಾಗತಿಸಿದರು. ಹೆಚ್ಚಾಗಿ ಸಕಾರಾತ್ಮಕ ಸ್ಪಂದನೆ ಸ್ವೀಕರಿಸಿದ ಸಿನಿಮಾ ಮೊದಲ ದಿನ ಭಾರತದಲ್ಲಿ 44.50 ಕೋಟಿ ರೂಪಾಯಿ ಗಳಿಸಿತು. ಆದ್ರೆ ಬುಧವಾರ ಚಿತ್ರದ ಕಲೆಕ್ಷನ್​​​ನಲ್ಲಿ ಸುಮಾರು ಶೇ. 25 ರಷ್ಟು ಕುಸಿತ ಆಗಿದೆ. ಟೈಗರ್​ 3 ನಾಲ್ಕನೇ ದಿನ 22 ಕೋಟಿ ರೂ. ಸಂಗ್ರಹ ಮಾಡಿದೆ. ಚಿತ್ರ​​ ಭಾರತದಲ್ಲಿ 169.50 ಕೋಟಿ ರೂ. ಕಲೆಕ್ಷನ್ ಮಾಡುವಲ್ಲಿ ಯಶಸ್ಸು ಕಂಡಿದೆ. ನಾಲ್ಕನೇ ದಿನ ಚಿತ್ರಮಂದಿರಗಳಲ್ಲಿ ಸರಿಸುಮಾರು ಶೇ. 18.78 ರಷ್ಟು ಆಕ್ಯುಪೆನ್ಸಿ ದರ ಹೊಂದಿತ್ತು.

  • SALMAN KHAN SCORES HIS BIGGEST *3-DAY* TOTAL WITH ‘TIGER 3’… #Tiger3 shows EXCELLENT HOLD on Day 3… Mass circuits are clearly calling the shots… Sun 43 cr, Mon 58 cr, Tue 43.50 cr. Total: ₹ 144.50 cr. #India biz. #Hindi version. #Boxoffice

    National chains were down 5.48%… pic.twitter.com/cXsLFQIVTC

    — taran adarsh (@taran_adarsh) November 15, 2023 " class="align-text-top noRightClick twitterSection" data=" ">

ಚಿತ್ರದಲ್ಲಿ ಸಲ್ಮಾನ್ ಖಾನ್ ಮತ್ತು ಕತ್ರಿನಾ ಕೈಫ್ ಜೋಡಿ ಅವಿನಾಶ್ (ಟೈಗರ್) ಮತ್ತು ಜೋಯಾ ಪಾತ್ರಗಳನ್ನು ನಿರ್ವಹಿಸಿದ್ದಾರೆ. ಮನೀಶ್ ಶರ್ಮಾ ನಿರ್ದೇಶನದ ಚಿತ್ರವನ್ನು ಯಶ್​ ರಾಜ್​ ಫಿಲ್ಮ್ಸ್ ಬ್ಯಾನರ್​ ಅಡಿ ಆದಿತ್ಯ ಚೋಪ್ರಾ ನಿರ್ಮಿಸಿದ್ದಾರೆ.

ಇದನ್ನೂ ಓದಿ: 'ನಿಜವಾಗಿಯೂ ನೀವು ದೇವರ ಮಗು': ಪತಿ ವಿರಾಟ್ ಕೊಹ್ಲಿಯನ್ನು ಮನಸಾರೆ ಹೊಗಳಿದ ಅನುಷ್ಕಾ ಶರ್ಮಾ

ಟೈಗರ್ 3ರ ಹಾಡುಗಳನ್ನು ಪ್ರೀತಮ್ ಸಂಯೋಜಿಸಿದ್ದಾರೆ. ಹಿನ್ನೆಲೆ ಸಂಗೀತವನ್ನು ತನುಜ್ ಟಿಕು ರಚಿಸಿದ್ದಾರೆ. ವರದಿಗಳ ಪ್ರಕಾರ, ಟೈಗರ್ 3 ಸಿನಿಮಾ 300 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣಗೊಂಡಿದೆ. ಯಶ್ ರಾಜ್ ಫಿಲ್ಮ್ಸ್‌ನ ಅತ್ಯಂತ ದುಬಾರಿ ಪ್ರಾಜೆಕ್ಟ್​ ಎಂದು ಪರಿಗಣಿಸಲಾಗಿದೆ. ಸಿನಿಮಾ ಸಂಪೂರ್ಣ ಯಶಸ್ವಿ ಎಂದು ಘೋಷಿಸಲು ಚಿತ್ರದ ಕಲೆಕ್ಷನ್​​ 300 ಕೋಟಿ ರೂಪಾಯಿ ದಾಟಬೇಕಿದೆ.

ಇದನ್ನೂ ಓದಿ: ಯುರೋಪ್‌ನಲ್ಲಿ 5ನೇ ವಿವಾಹ ವಾರ್ಷಿಕೋತ್ಸವ ಆಚರಿಸಿಕೊಂಡ ದೀಪ್​ವೀರ್​: ರಾಮ್ ಲೀಲಾ ಸಿನಿಮಾಗೆ 10 ವರ್ಷ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.