ETV Bharat / entertainment

ಮೈದಾನದಲ್ಲಿ ಸಿಕ್ಸರ್‌, ಬೌಂಡರಿ​ ಬಾರಿಸುವ ಕ್ರಿಕೆಟಿಗರು​ ಸಿನಿಮಾ ಕ್ಷೇತ್ರದಲ್ಲಿ Out!

author img

By ETV Bharat Karnataka Team

Published : Sep 10, 2023, 2:18 PM IST

ಬಣ್ಣದ ಲೋಕಕ್ಕೆ ಕಾಲಿಟ್ಟು ಯಶಸ್ಸು ಕಾಣದ ಟೀಂ ಇಂಡಿಯಾದ ಮಾಜಿ ಕ್ರಿಕೆಟಿಗರಿವರು..

these cricketers are not successful in film industry
ಮೈದಾನದಲ್ಲಿ ಸಿಕ್ಸ್​, ಫೋರ್​ ಬಾರಿಸುವ ಕ್ರಿಕೆಟಿಗರು​ ಸಿನಿಮಾ ಮಾಡೋದ್ರಲ್ಲಿ ಫೇಲ್

ಭಾರತೀಯ ಕ್ರಿಕೆಟಿಗರು ತಮ್ಮ ವೃತ್ತಿ ಬದುಕಿಗೆ ನಿವೃತ್ತಿ ಘೋಷಿಸಿದ ಬಳಿಕ ಬೇರೊಂದು ಕ್ಷೇತ್ರವನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಆದರೆ ಕೆಲವರು ಕ್ರಿಕೆಟ್​ನಿಂದ ದೂರ ಉಳಿಯಲು ಇಚ್ಛಿಸದೇ ಅದೇ ಕ್ಷೇತ್ರದಲ್ಲಿ ಕೋಚ್​ ಆಗಿ ಮುಂದುವರೆಯುತ್ತಾರೆ. ಇನ್ನು ಕೆಲವರು ಬ್ಯುಸಿನೆಸ್​ ಫೀಲ್ಡ್​ ಅನ್ನು ಆಯ್ದುಕೊಳ್ಳುವರು. ಮತ್ತೊಂದಿಷ್ಟು ಜನರು ಚಿತ್ರರಂಗದತ್ತ ಮುಖ ಮಾಡುತ್ತಾರೆ. ಆದರೆ, ಇಂಡಸ್ಟ್ರಿಗೆ ಎಂಟ್ರಿ ಕೊಟ್ಟು ಸರಿಯಾದ ಯಶಸ್ಸು ಸಿಗದ ಟೀಂ ಇಂಡಿಯಾದ ಮಾಜಿ ಕ್ರಿಕೆಟಿಗರ ಬಗ್ಗೆ ಇಲ್ಲಿದೆ ಮಾಹಿತಿ.

ಮಹೇಂದ್ರ ಸಿಂಗ್​​ ಧೋನಿ: ಮೈದಾನದಲ್ಲಿ ಬ್ಯಾಟ್​ ಹಿಡಿದು ಫೋರ್​, ಸಿಕ್ಸ್​ ಬಾರಿಸುತ್ತಿದ್ದ ಟೀಂ ಇಂಡಿಯಾದ ಮಾಜಿ ನಾಯಕ ಮಹೇಂದ್ರ ಸಿಂಗ್​ ಧೋನಿ ಅವರಿಗೆ ಸಿನಿಮಾ ಮೇಲೆ ಹೆಚ್ಚು ಒಲವಿತ್ತು. ಹೀಗಾಗಿ 'ಧೋನಿ ಎಂಟರ್​ಟೈನ್​ಮೆಂಟ್'​ ಎಂಬ ನಿರ್ಮಾಣ ಸಂಸ್ಥೆಯನ್ನು ಹುಟ್ಟುಹಾಕಿದರು. ಈ ಬ್ಯಾನರ್​ನಲ್ಲಿ ನಿರ್ದೇಶಕಿಯಾಗಿ ಧೋನಿ ಪತ್ನಿ ಸಾಕ್ಷಿ ಸಿಂಗ್​ ಮುಂದುವರೆದಿದ್ದಾರೆ.

ಧೋನಿ ಮತ್ತು ಅವರ ಪತ್ನಿ ಸಾಕ್ಷಿ ನಿರ್ಮಾಣದ ಮೊದಲ ಚಿತ್ರ 'ಲೆಟ್ಸ್ ಗೆಟ್​ ಮ್ಯಾರೀಡ್' (ಎಲ್‌ಜಿಎಂ) ಜುಲೈ 28 ರಂದು ತೆರೆ ಕಂಡಿತ್ತು. ಸುಮಾರು 8 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾದ ಈ ಚಿತ್ರ ನಿರೀಕ್ಷಿತ ಯಶಸ್ಸು ಗಳಿಸಲಿಲ್ಲ. 'ಎಲ್​​ಜಿಎಂ' ತಮಿಳು ಚಿತ್ರದಲ್ಲಿ ಹರೀಶ್ ಕಲ್ಯಾಣ್ ಮತ್ತು ಇವಾನಾ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದರು.

ಇದನ್ನೂ ಓದಿ: ಪೇಸ್ ಬೌಲಿಂಗ್ ಬ್ಯಾಂಕ್: ಹರ್ಭಜನ್​ ಸಿಂಗ್​ ಸಲಹೆಯಂತೆ ಹಳ್ಳಿ ಪ್ರತಿಭೆಗಳಿಗೆ 'ಓಪನ್ ​ಟ್ರಯಲ್ಸ್‌'

ಹರ್ಭಜನ್​ ಸಿಂಗ್: ಟೀಂ ಇಂಡಿಯಾ ಮಾಜಿ ಸ್ಪಿನ್ನರ್​ ಹರ್ಭಜನ್​ ಸಿಂಗ್​ 2021 ರಲ್ಲಿ 'ಫ್ರೆಂಡ್ಶಿಪ್'​ ಚಿತ್ರದಲ್ಲಿ ನಟಿಸಿದ್ದರು. ಭಾರಿ ನಿರೀಕ್ಷೆಗಳ ನಡುವೆ ತೆರೆಕಂಡಿದ್ದ ಚಿತ್ರ ಹಿಟ್​ ಪಡೆಯಲಿಲ್ಲ. ನಟನೆಗೆ ಬರಬೇಕೆಂದುಕೊಂಡಿದ್ದ ಹರ್ಭಜನ್​ಗೆ ಇದು ಕಹಿ ಅನುಭವವಾಗಿ ಪರಿಣಮಿಸಿತು.

ಇರ್ಫಾನ್​ ಪಠಾಣ್​: ಟೀಂ ಇಂಡಿಯಾದ ಮಾಜಿ ಸ್ಟಾರ್​ ವೇಗಿ ಇರ್ಫಾನ್​ ಪಠಾಣ್​ ತಮಿಳು ಚಿತ್ರರಂಗಕ್ಕೆ ನಟನಾಗಿ ಪಾದಾರ್ಪಣೆ ಮಾಡಿದರು. 2022 ರಲ್ಲಿ ತೆರೆಕಂಡ ಕಾಲಿವುಡ್​ ಸ್ಟಾರ್​ ಹೀರೋ ವಿಕ್ರಮ್​ ಅವರೊಂದಿಗೆ 'ಕೋಬ್ರಾ' ಚಿತ್ರದಲ್ಲಿ ನಟಿಸಿದ್ದರು. ಆದರೆ ಈ ಸಿನಿಮಾ ಪ್ರೇಕ್ಷಕರನ್ನು ತಲುಪುವಲ್ಲಿ ವಿಫಲವಾಯಿತು. ಜೊತೆಗೆ ಬಾಕ್ಸ್​ ಆಫೀಸ್​ನಲ್ಲಿ ಸೋಲು ಕಂಡಿತು. ಇದರಿಂದಾಗಿ ಇರ್ಫಾನ್​ ಪಠಾಣ್​ ಸಿನಿಮಾಗಳಿಂದ ದೂರ ಉಳಿದರು.

ಶ್ರಿಶಾಂತ್​ ಶರ್ಮಾ: ಫಿಕ್ಸಿಂಗ್​ ಆರೋಪದಿಂದಾಗಿ ಟೀಂ ಇಂಡಿಯಾ ಬೌಲರ್​ ಶ್ರೀಶಾಂತ್​ ಶರ್ಮಾ ತಂಡದಲ್ಲಿ ಸ್ಥಾನ ಕಳೆದುಕೊಂಡರು. ಮತ್ತೆ ತಂಡಕ್ಕೆ ಸೇರಲು ಸಾಕಷ್ಟು ಪ್ರಯತ್ನಪಟ್ಟರು. ಆದರೆ ಅದ್ಯಾವುದು ಆಗಲಿಲ್ಲ. ಹೀಗಾಗಿ ಸಿನಿಮಾಗಳತ್ತ ಮುಖ ಮಾಡಿದ ಸ್ಟಾರ್​ ಆಟಗಾರ ತಮ್ಮ ವೃತ್ತಿಜೀವನದಲ್ಲಿ ಈವರೆಗೆ ಅನೇಕ ಸಿನಿಮಾಗಳಲ್ಲಿ ನಟಿಸಿದ್ದಾರೆ. ಆದರೆ ಯಾವ ಸಿನಿಮಾವೂ ಅವರಿಗೆ ಸ್ಟಾರ್​ ಪಟ್ಟ ತಂದುಕೊಡಲಿಲ್ಲ. ಇತ್ತೀಚೆಗೆ ಕಾಲಿವುಡ್​ ನಿರ್ದೇಶಕ ವಿಘ್ನೇಶ್​ ಶಿವನ್​ ಅವರ 'ಕತ್ತು ವಕೀಲ್​ ದೌ ಕಡಲ್​' ಸಿನಿಮಾದಲ್ಲಿ ನಟಿಸಿದ್ದರು. ಇದು ಕೂಡ ಫ್ಲಾಪ್​ ಆಯಿತು.

ಇದನ್ನೂ ಓದಿ: LGM movie: ಧೋನಿ ಅಭಿಮಾನಿಗಳಿಗೆ ನಿರಾಸೆ; ಪ್ರೇಕ್ಷಕರನ್ನು ಮೆಚ್ಚಿಸುವಲ್ಲಿ ಸೋತ 'ಎಲ್​ಜಿಎಂ'

ETV Bharat Logo

Copyright © 2024 Ushodaya Enterprises Pvt. Ltd., All Rights Reserved.