ETV Bharat / entertainment

ಕ್ರೇಜಿಸ್ಟಾರ್ ರವಿಚಂದ್ರನ್ ನಟನೆಯ 'ದಿ ಜಡ್ಜ್​​ಮೆಂಟ್' ಡಬ್ಬಿಂಗ್​ ಕೆಲಸ ಚುರುಕು

author img

By ETV Bharat Karnataka Team

Published : Nov 28, 2023, 7:55 PM IST

ರವಿಚಂದ್ರನ್ ನಟನೆಯ 'ದಿ ಜಡ್ಜ್​​ಮೆಂಟ್' ಡಬ್ಬಿಂಗ್​ ಕೆಲಸ ಭರದಿಂದ ಸಾಗಿದೆ.

'The Judgment' dubbing work
'ದಿ ಜಡ್ಜ್​​ಮೆಂಟ್' ಡಬ್ಬಿಂಗ್​

ಕ್ರೇಜಿಸ್ಟಾರ್ ಆಗಿ ಕನ್ನಡ ಚಿತ್ರರಂಗದ ಬೆಳ್ಳಿತೆರೆ ಮೇಲೆ ವಿಜೃಂಭಿಸಿದ ಶೋ ಮ್ಯಾನ್ ವಿ. ರವಿಚಂದ್ರನ್ ಸದ್ಯ ರಿಯಾಲಿಟಿ ಶೋ ಹಾಗೂ ಕೆಲ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಈಗಾಗಲೇ ವಕೀಲನ ಪಾತ್ರದಲ್ಲಿ ಪರದೆ ಮೇಲೆ ಮೋಡಿ ಮಾಡಿರೋ ರವಿಮಾಮ ಮತ್ತೆ ಕರಿ ಕೋಟ್​ ಧರಿಸಿ ನಟಿಸಿರುವ ಚಿತ್ರವೇ 'ದಿ ಜಡ್ಜ್​​ಮೆಂಟ್'. ಒಂದಲ್ಲ ಒಂದು ವಿಚಾರವಾಗಿ ಗಾಂಧಿನಗರದಲ್ಲಿ ಸದ್ದು ಮಾಡುತ್ತಿರುವ ದಿ ಜಡ್ಜ್​​​ಮೆಂಟ್ ಸಿನಿಮಾದ ಶೂಟಿಂಗ್ ಪೂರ್ಣಗೊಂಡಿದ್ದು, ಡಬ್ಬಿಂಗ್ ಕೆಲಸದಲ್ಲಿ ಚಿತ್ರತಂಡ ಬ್ಯುಸಿಯಾಗಿದೆ. ರವಿಚಂದ್ರನ್, ‌ದಿಗಂತ್, ಧನ್ಯಾ ರಾಮ್​ಕುಮಾರ್, ಮೇಘನಾ ಗಾಂವ್ಕರ್, ಪ್ರಕಾಶ್ ಬೆಳವಾಡಿ ತಮ್ಮ ಪಾತ್ರಗಳಿಗೆ ದನಿ ನೀಡುತ್ತಿದ್ದಾರೆ.

ರಾಜ್ಯಾಂಗ ಮತ್ತು ನ್ಯಾಯಾಂಗದ ಸುತ್ತ ನಡೆಯುವ ಘಟನೆ: ದಿ ಜಡ್ಜ್​​ಮೆಂಟ್ ಸಿನಿನಾ ಲೀಗಲ್ ಥ್ರಿಲ್ಲರ್ ಶೈಲಿಯದ್ದಾಗಿದ್ದು, ರಾಜ್ಯಾಂಗ ಮತ್ತು ನ್ಯಾಯಾಂಗದ ಸುತ್ತ ನಡೆಯುವ ಘಟನೆಗಳನ್ನು ಬಳಸಿಕೊಂಡು ಕಾಲ್ಪನಿಕ ಕಥೆ ಹೆಣೆಯಲಾಗಿದೆ. ಈ ಸಿನಿಮಾ ಪ್ರೇಕ್ಷಕರಿಗೆ ಹೊಸ ಅನುಭವ ಕೊಡಲಿದೆ ಎಂಬುದು ನಿರ್ದೇಶಕ ಗುರುರಾಜ ಕುಲಕರ್ಣಿ ನಾಡಗೌಡ ಅವರ ನಂಬಿಕೆ.

'The Judgment' dubbing work
'ದಿ ಜಡ್ಜ್​​ಮೆಂಟ್'.....

ದಿ ಜಡ್ಜ್​​ಮೆಂಟ್ ತಾರಾಬಳಗ: ಕ್ರೇಜಿಸ್ಟಾರ್ ರವಿಚಂದ್ರನ್, ದಿಗಂತ್ ಮಂಚಾಲೆ, ಮೇಘನಾ ಗಾಂವ್ಕರ್, ಧನ್ಯಾ ರಾಮ್​ಕುಮಾರ್, ಲಕ್ಷ್ಮೀ ಗೋಪಾಲಸ್ವಾಮಿ, ಟಿ.ಎಸ್ ನಾಗಾಭರಣ, ಪ್ರಕಾಶ್ ಬೆಳವಾಡಿ, ರಂಗಾಯಣ ರಘು, ಸುಜಯ್ ಶಾಸ್ತ್ರಿ, ರಾಜೇಂದ್ರ ಕಾರಂತ್, ರವಿಶಂಕರ್ ಗೌಡ, ಕೃಷ್ಣ ಹೆಬ್ಬಾಳೆ, ರೇಖಾ ಕೂಡ್ಲಿಗಿ, ರೂಪಾ ರಾಯಪ್ಪ, ಪ್ರೀತಮ್, ಬಾಲಾಜಿ ಮನೋಹರ್, ಅರವಿಂದ್ ಕುಪ್ಳೀಕರ್ ಮತ್ತು ಜಗದೀಶ್ ಮಲ್ನಾಡ್ ಸೇರಿದಂತೆ ಹಲವರು ಚಿತ್ರದ ತಾರಾಬಳಗದಲ್ಲಿದ್ದಾರೆ.

ಇದನ್ನೂ ಓದಿ: ದಾರದಲ್ಲಿ ಅರಳಿದ ಅಪ್ಪು: ಅಭಿಮಾನಿಗಳಿಂದ ಪುನೀತ್​ ಕಲಾಕೃತಿ

ಗುರುರಾಜ ಕುಲಕರ್ಣಿ (ನಾಡಗೌಡ) ಅವರ ರಚನೆ ಹಾಗೂ ನಿರ್ದೇಶನದ ಈ ಚಿತ್ರಕ್ಕೆ ಪಿ.ಕೆ.ಹೆಚ್. ದಾಸ್ ಛಾಯಾಗ್ರಹಣ, ಅನೂಪ್ ಸೀಳಿನ್ ಸಂಗೀತ ನಿರ್ದೇಶನ, ಕೆಂಪರಾಜು ಬಿ.ಎಸ್ ಸಂಕಲನ‌, ಪ್ರಮೋದ್ ಮರವಂತೆ ಹಾಡುಗಳು ಇವೆ. ಎಂ.ಎಸ್ ರಮೇಶ್ ಸಂಭಾಷಣೆ ಬರೆದಿದ್ದಾರೆ. ಡಾ. ರವಿವರ್ಮಾ ಸಾಹಸ ನಿರ್ದೇಶನ ಹಾಗೂ ರೂಪೇಂದ್ರ ಆಚಾರ್ ಅವರ ಕಲಾ ನಿರ್ದೇಶನ ಈ ಚಿತ್ರಕ್ಕಿದೆ. ಜಿ9 ಕಮ್ಯೂನಿಕೇಷನ್ ಮೀಡಿಯಾ ಅಂಡ್ ಎಂಟರ್​ಟೈನ್ಮೆಂಟ್ ಲಾಂಛನದಲ್ಲಿ ವಿಶ್ವನಾಥ ಗುಪ್ತಾ, ರಾಮು ರಾಯಚೂರು ಮತ್ತು ರಾಜಶೇಖರ ಪಾಟೀಲ್ ಈ ಸಿನಿಮಾವನ್ನು ನಿರ್ಮಾಣ ಮಾಡುತ್ತಿದ್ದಾರೆ. ಸದ್ಯ ಡಬ್ಬಿಂಗ್​ ಕೆಲಸದಲ್ಲಿ ಬ್ಯುಸಿಯಾಗಿರೋ ದಿ ಜಡ್ಜ್​​ಮೆಂಟ್ ಸಿನಿಮಾ ಶೀಘ್ರದಲ್ಲೇ ನಿಮ್ಮ ಮುಂದೆ ಬರಲಿದೆ.

ಇದನ್ನೂ ಓದಿ: ಹಿರಿಯ ನಟಿ ಲೀಲಾವತಿ ನಿವಾಸಕ್ಕೆ ಡಿಸಿಎಂ ಡಿಕೆಶಿ, ಶಿವಣ್ಣ ಭೇಟಿ; ಆರೋಗ್ಯ ವಿಚಾರಣೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.