ETV Bharat / entertainment

ಮೇಡ್​ ಇನ್​ ಇಂಡಿಯಾ: ದಾದಾಸಾಹೇಬ್​​ ಫಾಲ್ಕೆ ಜೀವನಾಧಾರಿತ ಸಿನಿಮಾ ಘೋಷಿಸಿದ ರಾಜಮೌಳಿ

author img

By ETV Bharat Karnataka Team

Published : Sep 19, 2023, 5:07 PM IST

Made in India: ಆರ್​ಆರ್​ಆರ್ ನಿರ್ದೇಶಕ ಎಸ್​ಎಸ್​​ ರಾಜಮೌಳಿ ಅವರು ''ಮೇಡ್​ ಇನ್​​ ಇಂಡಿಯಾ'' ಸಿನಿಮಾವನ್ನು ಪ್ರಸ್ತುತಪಡಿಸಲಿದ್ದಾರೆ. ಈ ಚಿತ್ರವನ್ನು ಇಂಡಿಯನ್​ ಸಿನಿಮಾದ ಬಯೋಪಿಕ್​ ಎಂದು ವಿವರಿಸಲಾಗಿದ್ದು, ರಾಜಮೌಳಿ ಅವರ ಮಗ ನಿರ್ಮಾಣ ಮಾಡಲಿದ್ದಾರೆ.

SS Rajamouli announces Made in India
ಮೇಡ್​ ಇನ್​ ಇಂಡಿಯಾ ಸಿನಿಮಾ ಘೋಷಿಸಿದ ರಾಜಮೌಳಿ

ಆರ್​ಆರ್​ಆರ್​ ಮೂಲಕ ಭರ್ಜರಿ ಯಶಸ್ಸು ಗಳಿಸಿರುವ ಸ್ಟಾರ್​ ಡೈರೆಕ್ಟರ್​​ ಎಸ್​.ಎಸ್​ ರಾಜಮೌಳಿ ಅವರು ಭಾರತೀಯ ಸಿನಿಮಾ ರಂಗದ ಬಿಗ್​​ ಪ್ರಾಜೆಕ್ಟ್ ಒಂದನ್ನು​​ ಘೋಷಿಸಿದ್ದಾರೆ. ಇದು ಇಂಡಿಯನ್​ ಸಿನಿಮಾ ಇಂಡಸ್ಟ್ರಿಯ ಬಯೋಪಿಕ್​​. ಭಾರತೀಯ ಚಿತ್ರರಂಗದ ಪಿತಾಮಹ ದಾದಾಸಾಹೇಬ್​ ಫಾಲ್ಕೆ ಅವರ ಜೀವನಾಧಾರಿತ ಚಿತ್ರ ''ಮೇಡ್​ ಇನ್​​ ಇಂಡಿಯಾ'' ವನ್ನು ಪ್ರೇಕ್ಷಕರೆದುರು ಪ್ರಸ್ತುತಪಡಿಸುವುದಾಗಿ ತಿಳಿಸಿದ್ದಾರೆ. ಚಿತ್ರದ ನಿರೂಪಣೆಯನ್ನು ಕೇಳಿದಾಗ, ಸ್ಕ್ರಿಪ್ಟ್​ ಭಾವನಾತ್ಮಕ ಎನಿಸಿತೆಂದು ಆರ್​ಆರ್​ಆರ್ ಸಾರಥಿ ರಾಜಮೌಳಿ ತಿಳಿಸಿದ್ದಾರೆ.

ಎಸ್​ಎಸ್​ ರಾಜಮೌಳಿ ಟ್ವೀಟ್: ಸೋಷಿಯಲ್​ ಮೀಡಿಯಾ ಪ್ಲಾಟ್​ಫಾರ್ಮ್ X (ಹಿಂದಿನ ಟ್ವಿಟರ್​) ನಲ್ಲಿ ನಿರ್ದೇಶಕರು ತಮ್ಮ ಮುಂದಿನ ಸಿನಿಮಾವನ್ನು ಘೋಷಿಸುವ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ''ಯಾವಾಗ ನಾನು ಚಿತ್ರದ ನಿರೂಪಣೆಯನ್ನು ಕೇಳಿದೆನೋ, ಅಂದು ಅದು ನನ್ನಲ್ಲಿ ಬಹಳ ಭಾವನಾತ್ಮಕವಾಗಿ ಚಲಿಸಿತು. ಬಯೋಪಿಕ್​ (ಜೀವನಚರಿತ್ರೆ) ಮಾಡುವುದೇ ಒಂದು ಕಠಿಣ ಕೆಲಸ. ಅಂತಹದರಲ್ಲಿ ಭಾರತೀಯ ಚಿತ್ರರಂಗದ ಪಿತಾಮಹನ ಬಗ್ಗೆ ಸಿನಿಮಾ ಸಿದ್ಧಪಡಿಸುವುದು ಇನ್ನೂ ಹೆಚ್ಚಿನ ಸವಾಲಿನ ಸಂಗತಿ. ನಮ್ಮ ಹುಡುಗರು ಈ ಸವಾಲಿಗೆ ಸಿದ್ಧರಾಗಿದ್ದಾರೆ. ಅಪಾರ ಹೆಮ್ಮೆಯಿಂದ 'ಮೇಡ್​ ಇನ್​ ಇಂಡಿಯಾ'ವನ್ನು ಪ್ರಸ್ತುತಪಡಿಸಲಿದ್ದೇವೆ'' ಎಂದು ಟ್ವೀಟ್​ ಮಾಡಿದ್ದಾರೆ.

  • When I first heard the narration, it moved me emotionally like nothing else.

    Making a biopic is tough in itself, but conceiving one about the FATHER OF INDIAN CINEMA is even more challenging. Our boys are ready and up for it..:)

    With immense pride,
    Presenting MADE IN INDIA… pic.twitter.com/nsd0F7nHAJ

    — rajamouli ss (@ssrajamouli) September 19, 2023 " class="align-text-top noRightClick twitterSection" data=" ">

'ಇಂಡಿಯನ್​ ಸಿನಿಮಾದ ಬಯೋಪಿಕ್​'... ನಿರ್ದೇಶಕರು ಅನೌನ್ಸ್​​ಮೆಂಟ್​ ಟೀಸರ್​ ಅನ್ನು ಹಂಚಿಕೊಂಡಿದ್ದಾರೆ. ವಿಡಿಯೋ, ಮುಂಬರುವ ಈ ಬಿಗ್​ ಪ್ರಾಜೆಕ್ಟ್​​​ 'ಇಂಡಿಯನ್​ ಸಿನಿಮಾದ ಬಯೋಪಿಕ್​' ಎಂದು ವರ್ಣಿಸಿದೆ. ಮೇಡ್​ ಇನ್​​ ಇಂಡಿಯಾ ಬಯೋಪಿಕ್​ ಅನ್ನು ಫಿಲ್ಮಿಸ್ತಾನ್​​, ಮಿತ್ರನ್​​​, ಜವಾನಿ ಜಾನೆಮನ್​​ ಚಿತ್ರಗಳಿಗೆ ಹೆಸರುವಾಸಿಯಾಗಿರುವ ನಿತಿನ್​ ಕಕ್ಕರ್​​ ನಿರ್ದೇಶಿಸಲಿದ್ದಾರೆ. ರಾಜಮೌಳಿ ಅವರ ಪುತ್ರ ಎಸ್​​.ಎಸ್​ ಕಾರ್ತಿಕೇಯ ಅವರು ಈ ಸಿನಿಮಾಗೆ ಬಂಡವಾಳ ಹೂಡಲಿದ್ದಾರೆ. ಇದು ಅವರ ನಿರ್ಮಾಣದ ಚೊಚ್ಚಲ ಚಲನಚಿತ್ರ. ಇದಕ್ಕೂ ಮುನ್ನ ಆರ್​ಆರ್​ಆರ್​ನ ಲೈನ್​ ಪ್ರೊಡ್ಯೂಸರ್​ ಆಗಿ ಮನ್ನಣೆ ಪಡೆದಿದ್ದಾರೆ.

ರಾಜಮೌಳಿಯವ್ರ ಪುತ್ರ ನಿರ್ಮಿಸುತ್ತಿರುವ ಚೊಚ್ಚಲ ಚಿತ್ರ: ''ನಿರ್ಮಾಪಕನಾಗುವ ಕನಸು ಕಂಡು, ಅದನ್ನು ನನಸಾಗಿಸಲು ಬಯಸಿ ವರ್ಷಗಳೇ ಕಳೆದಿವೆ. ಅಂತಿಮವಾಗಿ ಆ ಕ್ಷಣ ಬಂದಿದೆ. ಮೇಡ್​ ಇನ್​ ಇಂಡಿಯಾ.. ಅತ್ಯಂತ ಜವಾಬ್ದಾರಿಯಿಂದ, ಇದನ್ನು ಸವಾಲಾಗಿ ಸ್ವೀಕರಿಸುತ್ತಿದ್ದೇನೆ'' ಎಂದು ಎಸ್​​.ಎಸ್​ ಕಾರ್ತಿಕೇಯ ಅವರು ಸಾಮಾಜಿಕ ಜಾಲತಾಣ X ನಲ್ಲಿ ಬರೆದುಕೊಂಡಿದ್ದಾರೆ. ಕಾರ್ತಿಕೇಯ ಜೊತೆ ವರುಣ್​​ ಗುಪ್ತಾ ಅವರೂ ಕೂಡ ಈ ಚಿತ್ರದ ನಿರ್ಮಾಪಕರಾಗಿ ಕೆಲಸ ಮಾಡಲಿದ್ದಾರೆ.

ದಾದಾಸಾಹೇಬ್​ ಫಾಲ್ಕೆ: ಭಾರತೀಯ ಚಿತ್ರರಂಗದ ಪಿತಾಮಹ ಎಂದು ಕರೆಯಲ್ಪಡುವ ದಾದಾಸಾಹೇಬ್​ ಫಾಲ್ಕೆ ಅವರು 1913ರಲ್ಲಿ ರಾಜಾಹರಿಶ್ಚಂದ್ರ ಶೀರ್ಷಿಕೆಯ ಮೊದಲ ಭಾರತೀಯ ಸಿನಿಮಾವನ್ನು ಮಾಡಿದರು. ಮಹಾರಾಷ್ಟ್ರದ ತ್ರಿಂಬಕ್​​ನಲ್ಲಿ ಜನಿಸಿದ ದಾದಾಸಾಹೇಬ್​ ಫಾಲ್ಕೆ ಅವರ ನಿಜವಾದ ಹೆಸರು ಧುಂಡಿರಾಜ್​​ ಗೋವಿಂದ್​​ ಫಾಲ್ಕೆ. ಫಿಲ್ಮ್​ ​ಮೇಕಿಂಗ್​ ಅನ್ನು ಸೆಸಿಲ್ ಹೆಪ್ವರ್ತ್ (Cecil Hepworth) ಅವರಿಂದ ಕಲಿಯಲು ಲಂಡನ್​ಗೆ ತೆರಳಿದರು. ಬಳಿಕ 1913ರಲ್ಲಿ ಭಾರತದ ಮೊದಲ ಸಿನಿಮಾ ಮಾಡಿದರು. ರಾಜಾ ಹರಿಶ್ಚಂದ್ರ ಚಿತ್ರದ ನಿರ್ದೇಶಕರಾಗಿ ಹೊರಹೊಮ್ಮಿದರು. 19 ವರ್ಷಗಳ ವೃತ್ತಿಜೀವನದಲ್ಲಿ 95 ಸಿನಿಮಾಗಳು, 27 ಕಿರುಚಿತ್ರಗಳನ್ನು ಮಾಡಿದ್ದಾರೆ. ಭಾರತೀಯ ಚಿತ್ರರಂಗಕ್ಕೆ ಅವರ ಕೊಡುಗೆಗಳನ್ನು ಗುರುತಿಸಿ, ಸರ್ಕಾರದ ವತಿಯಿಂದ ದಾದಾಸಾಹೇಬ್​ ಫಾಲ್ಕೆ ಪ್ರಶಸ್ತಿ ಕೊಡುವ ಮೂಲಕ ಭಾರತೀಯ ಚಿತ್ರರಂಗದ ಪಿತಾಮಹನಿಗೆ ಗೌರವ ಸಲ್ಲಿಸಲಾಗುತ್ತಿದೆ.

ಇದನ್ನೂ ಓದಿ: ಬೆಂಗಳೂರಿನಲ್ಲಿ 'ದಿ ವ್ಯಾಕ್ಸಿನ್​ ವಾರ್​' ಸ್ಪೆಷಲ್​ ಸ್ಕ್ರೀನಿಂಗ್​​: ಭಾರತೀಯರೆನ್ನಲು ಹೆಮ್ಮೆಪಡಿ ಎಂದ ಸುಧಾ ಮೂರ್ತಿ

ಆರ್​ಆರ್​ಆರ್ ಸಿನಿಮಾದ ಜಾಗತಿಕ​ ಯಶಸ್ಸಿನ ನಂತರ ನಿರ್ದೇಶಕ ರಾಜಮೌಳಿ ಅವರು ಪ್ರಸ್ತುತಪಡಿಸುತ್ತಿರುವ ಮೊದಲ ಚಿತ್ರವಿದು. ಚಿತ್ರದ ತಾರಾಗಣ ಸೇರಿದಂತೆ ಹೆಚ್ಚಿನ ಮಾಹಿತಿಯನ್ನು ಚಿತ್ರತಂಡ ಶೀಘ್ರದಲ್ಲೇ ಕೊಡಲಿದೆ. ಸದ್ಯ ಘೋಷಣೆ ಆಗಿರುವ ಸಿನಿಮಾವು ಪ್ರೇಕ್ಷಕರು ಮಾತ್ರವಲ್ಲದೇ, ಚಿತ್ರರಂಗದ ಗಣ್ಯರಲ್ಲೂ ಕುತೂಹಲ ಮೂಡಿಸಿದೆ.

ಇದನ್ನೂ ಓದಿ: ಪರಿಣಿತಿ-ರಾಘವ್​ ಮದುವೆ: ವರನ ಮನೆಗೆ ವಿಶೇಷ ಶೃಂಗಾರ- ವಿಡಿಯೋ ನೋಡಿ!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.