ETV Bharat / entertainment

SIIMA 2023: ಪ್ರತಿಷ್ಠಿತ ಪ್ರಶಸ್ತಿ ಪ್ರದಾನ ಕಾರ್ಯಕ್ರಮಕ್ಕೆ ಕ್ಷಣಗಣನೆ; ಮಿಂಚು ಹರಿಸಲಿರುವ ಕನ್ನಡ ತಾರೆಗಳಿವರು!

author img

By ETV Bharat Karnataka Team

Published : Sep 15, 2023, 6:57 PM IST

SIIMA Awards 2023 nominees: ದಕ್ಷಿಣ ಚಿತ್ರರಂಗದ ಪ್ರತಿಷ್ಠಿತ ಪ್ರಶಸ್ತಿ ಸೈಮಾ 2023ರ ನಾಮನಿರ್ದೇಶನಗಳು ಈ ಕೆಳಗಿನಂತಿವೆ..

SIIMA Awards 2023 nominees
ಸೈಮಾ ಪ್ರಶಸ್ತಿ 2023 ನಾಮನಿರ್ದೇಶಿತರು

ಸೈಮಾ (SIIMA). ದಕ್ಷಿಣ ಚಿತ್ರರಂಗದ ಪ್ರತಿಷ್ಠಿತ ಪ್ರಶಸ್ತಿ ಪ್ರದಾನ ಕಾರ್ಯಕ್ರಮ. ದುಬೈನಲ್ಲಿ ಇಂದು ಮತ್ತು ನಾಳೆ ಸೌತ್​ ಇಂಡಿಯನ್​​ ಇಂಟರ್​ನ್ಯಾಶನಲ್​ ಮೂವಿ ಅವಾರ್ಡ್ಸ್ ನಡೆಯಲಿದೆ. ಕನ್ನಡ, ತೆಲುಗು, ತಮಿಳು, ಮಲಯಾಳಂ ಭಾಷೆಗಳ ಕಲಾವಿದರು, ತಂತ್ರಜ್ಞರು ಒಂದೇ ವೇದಿಕೆಯಲ್ಲಿ ಮಿಂಚು ಹರಿಸಲಿದ್ದಾರೆ. ಎರಡು ದಿನಗಳ ಕಾಲ ವರ್ಣರಂಜಿತ ಕಾರ್ಯಕ್ರಮ ಏರ್ಪಾಡಾಗಿದೆ. ನಟ, ನಟಿ, ನಿರ್ದೇಶಕರು ಒಳಗೊಂಡಂತೆ ಸಿನಿಮಾ ಕ್ಷೇತ್ರದ ಗಣ್ಯಾತಿ ಗಣ್ಯರು ಪ್ರತಿಷ್ಠಿತ ಪ್ರಶಸ್ತಿಗಳನ್ನು ಮುಡಿಗೇರಿಸಿಕೊಳ್ಳಲಿದ್ದಾರೆ.

SIIMA 2023
ಸೈಮಾ 2023

ಬೆಂಗಳೂರು, ಹೈದರಾಬಾದ್​ ಸೇರಿದಂತೆ ಭಾರತದ ಪ್ರಮುಖ ನಗರಗಳಲ್ಲಿ ಈಗಾಗಲೇ ಈ ಕಾರ್ಯಕ್ರಮ ನಡೆದಿದೆ. ಈ ಬಾರಿಯ (11ನೇ) ಸಿನಿ ಸಮಾರಂಭ ದುಬೈನಲ್ಲಿ ಅದ್ಧೂರಿಯಾಗಿ ಆಯೋಜನೆಗೊಂಡಿದೆ. ನಟ, ನಿರ್ಮಾಪಕ, ಬಾಹುಬಲಿ ಖ್ಯಾತಿಯ ರಾಣಾ ದಗ್ಗುಬಾಟಿ ಮತ್ತು ಸೂಪರ್​ ಹಿಟ್​ 'ಸೀತಾ ರಾಮಂ' ಸ್ಟಾರ್​ ಮೃಣಾಲ್​ ಠಾಕುರ್ ಬಹುನಿರೀಕ್ಷಿತ ಕಾರ್ಯಕ್ರಮ ಹೋಸ್ಟ್ ಮಾಡಲಿದ್ದಾರೆ. ದುಬೈ ವರ್ಲ್ಡ್ ಟ್ರೇಡ್​ ಸೆಂಟರ್​ನಲ್ಲಿ ಕಾರ್ಯಕ್ರಮಕ್ಕೆ ಸಿದ್ಧತೆಯಾಗಿದೆ. ಕನ್ನಡ ಸೇರಿದಂತೆ ಒಟ್ಟು ನಾಲ್ಕು ಭಾಷೆಗಳಲ್ಲಿ, ನಾನಾ ವಿಭಾಗಗಳಲ್ಲಿ ಸಿನಿಮಾಗಳು ನಾಮನಿರ್ದೇಶನಗೊಂಡಿವೆ.

ಕನ್ನಡ ಚಿತ್ರರಂಗ- ಅತ್ಯುತ್ತಮ ನಿರ್ದೇಶಕ ವಿಭಾಗದ ನಾಮನಿರ್ದೇಶನಗಳು:

  • ರಿಷಬ್​ ಶೆಟ್ಟಿ - ಕಾಂತಾರ
  • ಅನೂಪ್​ ಭಂಡಾರಿ - ವಿಕ್ರಾಂತ್​ ರೋಣ
  • ಡಾರ್ಲಿಂಗ್​ ಕೃಷ್ಣ - ಲವ್​ ಮಾಕ್ಟೇಲ್​ 2
  • ಕಿರಣ್​ರಾಜ್​ ಕೆ - 777 ಚಾರ್ಲಿ
  • ಪ್ರಶಾಂತ್​ ನೀಲ್​​​ - ಕೆಜಿಎಫ್​ 2

ಮಲಯಾಳಂ ಚಿತ್ರರಂಗ- ಅತ್ಯುತ್ತಮ ನಿರ್ದೇಶಕ ವಿಭಾಗದ ನಾಮನಿರ್ದೇಶನಗಳು:

  • ಅಮಲ್​​ ನೀರಡ್​ - ಭೀಷ್ಮ ಪರ್ವನ್​​
  • ಖಲೀದ್​ ರೆಹಮಾನ್​​ - ತಲ್ಲುಮಾಲಾ
  • ಮಹೇಶ್​ ನಾರಾಯಣನ್ - ಅರಿಯಿಪ್ಪು
  • ತರುಣ್​ ಮೂರ್ತಿ - ಸೌದಿ ವೆಲ್ಲಕ್ಕ
  • ವಿನೀತ್​ ಶ್ರೀನಿವಾಸನ್​​ - ಹೃದಯಂ

ತಮಿಳು ಚಿತ್ರರಂಗ- ಅತ್ಯುತ್ತಮ ನಿರ್ದೇಶಕ ವಿಭಾಗದ ನಾಮನಿರ್ದೇಶನಗಳು:

  • ಗೌತಮ್​ ರಾಮಚಂದ್ರನ್​​ - ಗಾರ್ಗಿ
  • ಲೋಕೇಶ್​ ಕನಗರಾಜ್​​ - ವಿಕ್ರಂ
  • ಎಂ ಮಣಿಕಂದನ್​​ - ಕದೈಸಿ ವಿವಸಾಯಿ
  • ಮಣಿರತ್ನಂ - ಪೊನ್ನಿಯಿನ್​ ಸೆಲ್ವನ್​​​
  • ಮಿತ್ರನ್​​ ಆರ್​ ಜವಾಹರ್ - ತಿರುಚಿತ್ರಂಬಲಂ

ತೆಲುಗು ಚಿತ್ರರಂಗ- ಅತ್ಯುತ್ತಮ ನಿರ್ದೇಶಕ ವಿಭಾಗದ ನಾಮನಿರ್ದೇಶನಗಳು:

  • ಚಂದೂ ಮೊಂಡೆಟಿ - ಕಾರ್ತಿಕೇಯ 2
  • ಸೀತಾ ರಾಮಂ- ಹನು ರಾಘವಪುಡಿ
  • ಎಸ್.​ಎಸ್.​​ಎಸ್.ರಾಜಮೌಳಿ - ಆರ್​ಆರ್​ಆರ್​​
  • ಶಶಿ ಕಿರಣ್​​ ಟಿಕ್ಕಾ - ಮೇಜರ್​​
  • ವಿಮಲ್​ ಕೃಷ್ಣ - ಡಿಜೆ ಟಿಲ್ಲು

ಕನ್ನಡ ಚಿತ್ರರಂಗ- ಅತ್ಯುತ್ತಮ ನಟಿ ವಿಭಾಗದ ನಾಮನಿರ್ದೇಶನಗಳು:

  • ಆಶಿಕಾ ರಂಗನಾಥ್ - ರೆಮೊ
  • ಚೈತ್ರಾ ಆಚಾರ್ - ಗಿಲ್ಕಿ
  • ರಚಿತಾ ರಾಮ್ - ಮಾನ್ಸೂನ್ ರಾಗ
  • ಸಪ್ತಮಿ ಗೌಡ - ಕಾಂತಾರ
  • ಶರ್ಮಿಳಾ - ಗಾಳಿಪಟ 2
  • ಶ್ರೀನಿಧಿ ಶೆಟ್ಟಿ - ಕೆಜಿಎಫ್ 2

ಮಲಯಾಳಂ ಚಿತ್ರರಂಗ- ಅತ್ಯುತ್ತಮ ನಟಿ ವಿಭಾಗದ ನಾಮನಿರ್ದೇಶನಗಳು:

  • ದರ್ಶನ ರಾಜೇಂದ್ರನ್ - ಜಯ ಜಯ ಜಯ ಜಯ ಹೇ
  • ಕಲ್ಯಾಣಿ ಪ್ರಿಯದರ್ಶನ್ - ಬ್ರೋ ಡ್ಯಾಡಿ
  • ಕೀರ್ತಿ ಸುರೇಶ್ - ವಾಶಿ
  • ನವ್ಯಾ ನಾಯರ್ - ಒರುತಿ
  • ರೇವತಿ - ಭೂತಕಾಲಂ
  • ಅನಸ್ವರ ರಾಜನ್ - ಸೂಪರ್ ಶರಣ್ಯ

ತಮಿಳು ಚಿತ್ರರಂಗ- ಅತ್ಯುತ್ತಮ ನಟಿ ವಿಭಾಗದ ನಾಮನಿರ್ದೇಶನಗಳು:

  • ಐಶ್ವರ್ಯಾ ಲಕ್ಷ್ಮಿ - ಗಟ್ಟ ಕುಸ್ತಿ
  • ದುಶರ ವಿಜಯನ್ - ನಾಟ್ಚರಿತಂ ನಗರ್​​​ಗಿರಧು
  • ಕೀರ್ತಿ ಸುರೇಶ್ - ಸಾನಿ ಕಾಯಿಧಂ
  • ನಿತ್ಯಾ ಮೆನೆನ್ - ತಿರುಚಿತ್ರಾಂಬಲಂ
  • ಸಿಯಾ ಪಲ್ಲವಿ - ಗಾರ್ಗಿ
  • ತ್ರಿಷಾ - ಪೊನ್ನಿಯಿನ್ ಸೆಲ್ವನ್‌ 1

ತೆಲುಗು ಚಿತ್ರರಂಗ- ಅತ್ಯುತ್ತಮ ನಟಿ ವಿಭಾಗದ ನಾಮನಿರ್ದೇಶನಗಳು:

  • ಮೀನಾಕ್ಷಿ ಚೌಧರಿ - ಹಿಟ್ ದಿ ಸೆಕೆಂಡ್ ಕೇಸ್‌
  • ಮೃಣಾಲ್ ಠಾಕುರ್ - ಸೀತಾ ರಾಮಮ್​​​
  • ನೇಹಾ ಶೆಟ್ಟಿ - ಡಿಜೆ ಟಿಲ್ಲು
  • ನಿತ್ಯಾ ಮೆನನ್ - ಭೀಮ್ಲಾ ನಾಯಕ್‌
  • ಸಮಂತಾ ರುತ್ ಪ್ರಭು - ಯಶೋದಾ
  • ಶ್ರೀಲೀಲಾ - ಧಮಾಕ

ಕನ್ನಡ ಚಿತ್ರರಂಗ- ಅತ್ಯುತ್ತಮ ನಟ ವಿಭಾಗದ ನಾಮನಿರ್ದೇಶನಗಳು:

  • ದಿ. ಪುನೀತ್ ರಾಜ್ ಕುಮಾರ್ - ಜೇಮ್ಸ್
  • ರಕ್ಷಿತ್ ಶೆಟ್ಟಿ - 777 ಚಾರ್ಲಿ
  • ರಿಷಬ್ ಶೆಟ್ಟಿ - ಕಾಂತಾರ
  • ಯಶ್​​ - ಕೆಜಿಎಫ್ 2
  • ಶಿವ ರಾಜ್​​​ಕುಮಾರ್ - ವೇದ
  • ಸುದೀಪ್ - ವಿಕ್ರಾಂತ್ ರೋಣ

ಮಲಯಾಳಂ ಚಿತ್ರರಂಗ- ಅತ್ಯುತ್ತಮ ನಟ ವಿಭಾಗದ ನಾಮನಿರ್ದೇಶನಗಳು:

  • ಬಸಿಲ್ ಜೋಸೆಫ್ - ಜಯ ಜಯ ಜಯ ಜಯ ಹೇ
  • ಕುಂಚಾಕೊ ಬೋಬನ್ - ಎನ್ನ ಥಾನ್ ಕೇಸ್ ಕೊಡು
  • ಮಮ್ಮುಟ್ಟಿ - ಭೀಷ್ಮ ಪರ್ವನ್ ಮತ್ತು ರೋರ್​​ಸ್ಚಾಚ್
  • ನಿವಿನ್ ಪೌಲಿ - ಪಡವೆಟ್ಟು
  • ಪೃಥ್ವಿರಾಜ್ ಸುಕುಮಾರನ್ - ಜನ ಗಣ ಮನ

ತಮಿಳು ಚಿತ್ರರಂಗ- ಅತ್ಯುತ್ತಮ ನಟ ವಿಭಾಗದ ನಾಮನಿರ್ದೇಶನಗಳು:

  • ಧನುಷ್ - ತಿರುಚಿತ್ರಾಂಬಲಂ
  • ಕಮಲ್ ಹಾಸನ್ - ವಿಕ್ರಮ್
  • ಮಾಧವನ್ - ರಾಕೆಟ್ರಿ: ದಿ ನಂಬಿ ಎಫೆಕ್ಟ್
  • ಸಿಲ್ಮಾಬರಸನ್​ - ವೆಂದು ತನಿನ್​​ಧತು ಕಾದು
  • ವಿಕ್ರಮ್​​ - ಪೊನ್ನಿಯಿನ್​​ ಸೆಲ್ವನ್​ 1

ತೆಲುಗು ಚಿತ್ರರಂಗ- ಅತ್ಯುತ್ತಮ ನಟ ವಿಭಾಗದ ನಾಮನಿರ್ದೇಶನಗಳು:

  • ಅಡಿವಿ ಶೇಷ್ - ಮೇಜರ್
  • ದುಲ್ಕರ್ ಸಲ್ಮಾನ್ - ಸೀತಾ ರಾಮಂ
  • ಜೂನಿಯರ್​ ಎನ್​ಟಿಆರ್​ - ಆರ್​ಆರ್​ಆರ್​
  • ನಿಖಿಲ್ ಸಿದ್ಧಾರ್ಥ್ - ಕಾರ್ತಿಕೇಯ 2
  • ರಾಮ್ ಚರಣ್ - ಆರ್​ಆರ್​ಆರ್​
  • ಸಿದ್ದು - ಡಿಜೆ ಟಿಲ್ಲು

ಇದನ್ನೂ ಓದಿ: 'ಕಾಂತಾರ 2' ಚಿತ್ರಕ್ಕಾಗಿ 11 ಕೆ.ಜಿ ತೂಕ ಇಳಿಸಿಕೊಂಡ ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.