ETV Bharat / entertainment

ಅಪ್ಪ-ಮಗಳ ಬಾಂಧವ್ಯ ಬೆಸೆಯುವ ಶಿವಾಜಿ ಸುರತ್ಕಲ್-2

author img

By

Published : Apr 2, 2022, 5:32 PM IST

ಕನ್ನಡ್ ಗೊತ್ತಿಲ್ಲ, ಲವ್ ಮಾಕ್ಟೇಲ್-2 ಚಿತ್ರಕ್ಕೆ ಸಂಗೀತ ನಿರ್ದೇಶನ ಮಾಡಿದ ನಕುಲ್ ಅಭಯಂಕರ್ ಈ ಚಿತ್ರಕ್ಕೂ ಸಂಗೀತ ನೀಡುತ್ತಿದ್ದಾರೆ. ರೇಖಾ ಕೆ.ಎನ್ ಮತ್ತು ಅನುಪ್ ಗೌಡ ಅವರ ಅಂಜನಾದ್ರಿ ಸಿನಿ ಕ್ರಿಯೇಷನ್ಸ್ ಬ್ಯಾನರ್ ಅಡಿಯಲ್ಲಿ ಶಿವಾಜಿ ಸುರತ್ಕಲ್ 2 ಚಿತ್ರವನ್ನ‌ ನಿರ್ಮಾಣ ಮಾಡುತ್ತಿದ್ದಾರೆ..

Shivaji_Surathkal 2
ಶಿವಾಜಿ ಸುರತ್ಕಲ್ 2

ಬೆಂಗಳೂರು : ಕನ್ನಡ ಚಿತ್ರರಂಗದಲ್ಲಿ ವಿಭಿನ್ನ ಸಿನಿಮಾಗಳಲ್ಲಿ ನಟಿಸಿ ಸೈ ಎನ್ನಿಸಿಕೊಂಡಿರುವ ನಟ‌ ರಮೇಶ್ ಅರವಿಂದ್, ಸದ್ಯ ಶಿವಾಜಿ ಸುರತ್ಕಲ್ 2 ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಥ್ರಿಲ್ಲಿಂಗ್ ಜೊತೆಗೆ ಅಪ್ಪ-ಮಗಳ ಬಾಂಧವ್ಯದ ಕತೆಯಿರುವ ಶಿವಾಜಿ ಸುರತ್ಕಲ್ 2 ಸಿನಿಮಾದಲ್ಲಿ ಅವರ ಮುದ್ದಿನ ಮಗಳಾಗಿ ಆರಾಧ್ಯ ಎಂಬ ಪುಟಾಣಿ ಅಭಿನಯಿಸುತ್ತಿದ್ದಾಳೆ.

ರಮೇಶ್ ಅರವಿಂದ್ ಅಲ್ಲದೇ ರಾಧಿಕ ನಾರಾಯಣ್, ತಮಿಳು ತೆಲುಗು ಖ್ಯಾತಿಯ ನಾಸರ್, ರಾಘು ರಮಣಕೊಪ್ಪ, ವೀಣಾ ಸುಂದರ್, ಸುಮಂತ್ ಭಟ್ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

Shivaji Surathkal 2  film father and Daughter sentiment story
ಅಪ್ಪ-ಮಗಳ ಬಾಂಧವ್ಯ ಬೆಸೆಯುವ ಶಿವಾಜಿ ಸುರತ್ಕಲ್-2

ಶೇ.75ರಷ್ಟು ಚಿತ್ರೀಕರಣ ಮುಗಿಸಿ ಹಾಡಿನ ತುಣುಕುಗಳು ಬಾಕಿಯಿದೆ. ಚಿತ್ರಕ್ಕೆ ಆಕಾಶ್ ಶ್ರೀವತ್ಸ ಅವರು ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ಕನ್ನಡ್ ಗೊತ್ತಿಲ್ಲ, ಲವ್ ಮಾಕ್ಟೇಲ್-2 ಚಿತ್ರಕ್ಕೆ ಸಂಗೀತ ನಿರ್ದೇಶನ ಮಾಡಿದ ನಕುಲ್ ಅಭಯಂಕರ್ ಈ ಚಿತ್ರಕ್ಕೂ ಸಂಗೀತ ನೀಡುತ್ತಿದ್ದಾರೆ. ರೇಖಾ ಕೆ.ಎನ್ ಮತ್ತು ಅನುಪ್ ಗೌಡ ಅವರ ಅಂಜನಾದ್ರಿ ಸಿನಿ ಕ್ರಿಯೇಷನ್ಸ್ ಬ್ಯಾನರ್ ಅಡಿಯಲ್ಲಿ ಶಿವಾಜಿ ಸುರತ್ಕಲ್ 2 ಚಿತ್ರವನ್ನ‌ ನಿರ್ಮಾಣ ಮಾಡುತ್ತಿದ್ದಾರೆ.

ಇದನ್ನೂ ಓದಿ: 'ವಿಕ್ರಾಂತ್ ರೋಣ' ಟೀಸರ್​ ರಿಲೀಸ್​: ಸಿನಿಮಾ ಬಿಡುಗಡೆ ದಿನಾಂಕ ಬಹಿರಂಗ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.