ETV Bharat / entertainment

ಕರುನಾಡ ಚಕ್ರವರ್ತಿಯ 'ಘೋಸ್ಟ್' ಮೇಕಿಂಗ್ ವಿಡಿಯೋ ರಿಲೀಸ್​

author img

By

Published : Nov 22, 2022, 5:14 PM IST

ಘೋಸ್ಟ್ ಚಿತ್ರದ ಕಲರ್ ಫುಲ್ ಮೇಕಿಂಗ್ ವಿಡಿಯೋವನ್ನು ಚಿತ್ರತಂಡ ರಿವೀಲ್ ಮಾಡಿದೆ.

Ghost movie making video
ಘೋಸ್ಟ್ ಮೇಕಿಂಗ್ ವಿಡಿಯೋ

ವೇದ, ಘೋಸ್ಟ್, ಕರಟಕ ದಮನಕ ಹೀಗೆ ನಾಲ್ಕೈದು ಸಿನಿಮಾಗಳಲ್ಲಿ ನಟ ಶಿವ ರಾಜ್​ಕುಮಾರ್ ಬ್ಯುಸಿಯಾಗಿದ್ದಾರೆ. ಈ ಮಧ್ಯೆ ಪೋಸ್ಟರ್​​ನಿಂದಲೇ ಕನ್ನಡ ಚಿತ್ರರಂಗ ಅಲ್ಲದೇ ದಕ್ಷಿಣ ಭಾರತದಲ್ಲಿ ಕುತೂಹಲ ಹುಟ್ಟಿಸಿರೋ ಘೋಸ್ಟ್ ಚಿತ್ರ ಸೌತ್​​ನಲ್ಲಿ ಒಂದಲ್ಲ ಒಂದು ವಿಚಾರಕ್ಕೆ ಸೌಂಡ್ ಮಾಡುತ್ತಿದೆ. ಘೋಸ್ಟ್ ಫಸ್ಟ್ ಲುಕ್​​ನಲ್ಲಿ ಹ್ಯಾಟ್ರಿಕ್ ಹೀರೋ ಎಕೆ 47 ಗನ್ ಹಿಡಿದು ಕಾಣಿಸಿಕೊಂಡಿದ್ದರು. ಇದೀಗ ಘೋಸ್ಟ್ ಚಿತ್ರದ ಕಲರ್ ಫುಲ್ ಮೇಕಿಂಗ್ ವಿಡಿಯೋವನ್ನು ಚಿತ್ರತಂಡ ರಿವೀಲ್ ಮಾಡಿದೆ.

ಸದ್ಯ ಅನಾವರಣಗೊಂಡಿರುವ ಘೋಸ್ಟ್ ಮೇಕಿಂಗ್ ವಿಡಿಯೋದಲ್ಲಿ, ಜೈಲಿನ ಅದ್ಧೂರಿ ಸೆಟ್​​ ಹಾಕಿ ಶಿವರಾಜ್ ಕುಮಾರ್ ಘೋಸ್ಟ್ ಅವತಾರವನ್ನು ಚಿತ್ರೀಕರಣ ಮಾಡಲಾಗಿದೆ. ಕೇವಲ 15 ಸೆಕೆಂಡ್ ಇರುವ ಈ ಮೇಕಿಂಗ್ ವಿಡಿಯೋ ಇಡೀ ಸೌತ್​ನಲ್ಲಿ ಹವಾ ಕ್ರಿಯೇಟ್ ಮಾಡುತ್ತಿದೆ. ಈ ಮೇಕಿಂಗ್ ನೋಡಿದ್ರೆ ಇದೊಂದು ಪಕ್ಕಾ ಆ್ಯಕ್ಷನ್ ಸಿನಿಮಾ ಎನಿಸುತ್ತಿದೆ. ಇನ್ನು ತೆಲುಗು ನಟ ಜಯರಾಮ್ ಕೂಡ ಈ ಚಿತ್ರದಲ್ಲಿ ವಿಶೇಷ ಪಾತ್ರ ಮಾಡಿದ್ದಾರೆ.

ಘೋಸ್ಟ್ ಮೇಕಿಂಗ್ ವಿಡಿಯೋ

ಸೆಂಚುರಿ ಸ್ಟಾರ್ ವಯಸ್ಸು ಅರವತ್ತಾದರೂ ಅವರ ಎನರ್ಜಿ ಮಾತ್ರ ಸ್ವಲ್ಪವೂ ಕಡಿಮೆ ಆಗಿಲ್ಲ. ಈಗಲೂ ಸಾಕಷ್ಟು ಹುಮ್ಮಸಿನಿಂದ ಆ್ಯಕ್ಷನ್​ ಸಿನಿಮಾಗಳನ್ನು ಮಾಡುತ್ತಿದ್ದಾರೆ. ಶ್ರೀನಿವಾಸ ಕಲ್ಯಾಣ, ಬೀರ್ ಬಲ್ ಅಂತಹ ಸಿನಿಮಾಗಳನ್ನು ನಿರ್ದೇಶನ ಮಾಡಿರೋ ಶ್ರೀನಿ ಘೋಸ್ಟ್ ಸಿನಿಮಾಗೆ ಆ್ಯಕ್ಷನ್ ಕಟ್ ಹೇಳಿದ್ದಾರೆ. ಕನ್ನಡ, ತಮಿಳು, ತೆಲುಗು ಹಾಗೂ ಹಿಂದಿ ಭಾಷೆಗಳಲ್ಲಿ ಈ ಸಿನಿಮಾ ನಿರ್ಮಾಣ ಮಾಡಲಾಗುತ್ತಿದೆ. ಸಂದೇಶ್ ನಾಗರಾಜ್ ಬ್ಯಾನರ್​ನಲ್ಲಿ ಮೂಡಿ ಬರುತ್ತಿರುವ 29ನೇ ಸಿನಿಮಾ ಇದು.

ಇದನ್ನೂ ಓದಿ: 'ದೃಶ್ಯಂ 2' ಭರ್ಜರಿ ಕಲೆಕ್ಷನ್.. ಲಾಲ್, ವೆಂಕಿಗೆ ಸಿಗದ ಅವಕಾಶ ದೇವ್​​ಗನ್​ಗೆ!

ಈ ಚಿತ್ರಕ್ಕೆ ಅರ್ಜುನ್ ಜನ್ಯ ಅವರ ಸಂಗೀತ ಸಂಯೋಜನೆ, ಮಹೇಂದ್ರ ಸಿಂಹ ಕ್ಯಾಮರಾವರ್ಕ್, ದೀಪು ಎಸ್‌. ಕುಮಾರ್‌ ಸಂಕಲನ ಇದೆ. ಸದ್ಯ ಅನಾವರಣಗೊಂಡಿರುವ ಘೋಸ್ಟ್ ಚಿತ್ರದ ಮೇಕಿಂಗ್ ವಿಡಿಯೋ ಹ್ಯಾಟ್ರಿಕ್ ಹೀರೋ ಅಭಿಮಾನಿಗಳಲ್ಲಿ ಈ ಚಿತ್ರದ ಮೇಲಿನ ನಿರೀಕ್ಷೆ ದುಪ್ಪಟ್ಟುಗೊಳಿಸಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.