ETV Bharat / entertainment

ಶಿವಣ್ಣನ ಘೋಸ್ಟ್ ಮೋಷನ್​ ಪೋಸ್ಟರ್​ ಬಿಡುಗಡೆ

author img

By

Published : Jan 1, 2023, 5:29 PM IST

ವೇದ ಸಕ್ಸಸ್ ಖುಷಿಯಲ್ಲಿ ಶಿವಣ್ಣ - ಮುಂದಿನ ಸಿನಿಮಾ ಮೇಲೆ ಹೆಚ್ಚಿದ ನಿರೀಕ್ಷೆ - ಇಂದು ಘೋಸ್ಟ್ ಮೋಷನ್​ ಪೋಸ್ಟರ್​ ಬಿಡುಗಡೆ.

Ghost motion poster
ಘೋಸ್ಟ್ ಮೋಷನ್​ ಪೋಸ್ಟರ್

ಕರುನಾಡ ಚಕ್ರವರ್ತಿ ಶಿವ ರಾಜ್​​​ಕುಮಾರ್​ ವೇದ ಸಿನಿಮಾ ಸಕ್ಸಸ್ ಖುಷಿಯಲ್ಲಿದ್ದಾರೆ. ಬ್ಯಾಕ್​ ಟು ಬ್ಯಾಕ್​ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ವೇದ ಸೂಪರ್ ಹಿಟ್ ಆದ ಹಿನ್ನೆಲೆ ಅವರ ಮುಂಬರುವ ಸಿನಿಮಾಗಳ ಮೇಲೆ ಅಭಿಮಾನಿಗಳ ನಿರೀಕ್ಷೆ ದುಪ್ಪಟ್ಟಾಗಿದೆ. ಇದೀಗ ಹೊಸ ವರ್ಷದಂದು ಘೋಸ್ಟ್ ಮೋಷನ್​ ಪೋಸ್ಟರ್​ ಬಿಡುಗಡೆ ಮಾಡಲಾಗಿದೆ.

ಘೋಸ್ಟ್ ಮೋಷನ್​ ಪೋಸ್ಟರ್: ಪೋಸ್ಟರ್​​ನಿಂದಲೇ ಸೌತ್​ ಸಿನಿಮಾ ಇಂಡಸ್ಟ್ರಿಯಲ್ಲಿ ಕುತೂಹಲ ಹುಟ್ಟಿಸಿರೋ ಘೋಸ್ಟ್ ಚಿತ್ರ ಒಂದಲ್ಲ ಒಂದು ವಿಚಾರಕ್ಕೆ ಸೌಂಡ್ ಮಾಡುತ್ತಿದೆ. ಘೋಸ್ಟ್ ಫಸ್ಟ್ ಲುಕ್​​ನಲ್ಲಿ ಹ್ಯಾಟ್ರಿಕ್ ಹೀರೋ ಎಕೆ 47 ಗನ್ ಹಿಡಿದು ಕಾಣಿಸಿಕೊಂಡಿದ್ದರು. ಬಳಿಕ ಘೋಸ್ಟ್ ಸಿನಿಮಾದ ಕಲರ್ ಫುಲ್ ಮೇಕಿಂಗ್ ವಿಡಿಯೋವನ್ನು ಚಿತ್ರತಂಡ ರಿವೀಲ್ ಮಾಡಿತ್ತು. ಇದೀಗ ಘೋಸ್ಟ್ ಮೋಷನ್​ ಪೋಸ್ಟರ್ ರಿಲೀಸ್​ ಆಗಿದ್ದು, ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಘೋಸ್ಟ್ ಮೇಕಿಂಗ್ ವಿಡಿಯೋ: ಕೆಲ ದಿನಗಳ ಹಿಂದೆ ಅನಾವರಣಗೊಂಡಿದ್ದ ಘೋಸ್ಟ್ ಮೇಕಿಂಗ್ ವಿಡಿಯೋದಲ್ಲಿ, ಅದ್ಧೂರಿ ಜೈಲಿನ ಸೆಟ್​​ ಹಾಕಿ ಶಿವ ರಾಜ್​ಕುಮಾರ್ ಘೋಸ್ಟ್ ಅವತಾರವನ್ನು ಚಿತ್ರೀಕರಣ ಮಾಡಲಾಗಿತ್ತು. ಕೇವಲ 15 ಸೆಕೆಂಡ್ ಇದ್ದ ಮೇಕಿಂಗ್ ವಿಡಿಯೋ ಇಡೀ ಸೌತ್​ನಲ್ಲಿ ಹವಾ ಕ್ರಿಯೇಟ್ ಮಾಡಿತ್ತು. ಈ ಮೇಕಿಂಗ್ ನೋಡಿದ್ರೆ ಇದೊಂದು ಪಕ್ಕಾ ಆ್ಯಕ್ಷನ್ ಸಿನಿಮಾ ಎನಿಸುತ್ತದೆ. ತೆಲುಗು ನಟ ಜಯರಾಮ್ ಕೂಡ ಈ ಚಿತ್ರದಲ್ಲಿ ವಿಶೇಷ ಪಾತ್ರ ಮಾಡಿದ್ದಾರೆ.

ಘೋಸ್ಟ್ ಶೂಟಿಂಗ್: ಶ್ರೀನಿವಾಸ ಕಲ್ಯಾಣ, ಬೀರ್ ಬಲ್ ಅಂತಹ ಸಿನಿಮಾಗಳನ್ನು ನಿರ್ದೇಶನ ಮಾಡಿರೋ ಶ್ರೀನಿ ಘೋಸ್ಟ್ ಸಿನಿಮಾ ನಿರ್ದೇಶಿಸಿದ್ದಾರೆ. ಶ್ರೀನಿ ಅವರೇ ಚಿತ್ರಕಥೆ ಬರೆದಿದ್ದಾರೆ. ಸಂಭಾಷಣೆ ಜವಾಬ್ದಾರಿ ಮಾಸ್ತಿ ಹಾಗೂ ಪ್ರಸನ್ನ ಅವರದ್ದು. ಕನ್ನಡ, ತಮಿಳು, ತೆಲುಗು ಹಾಗೂ ಹಿಂದಿ ಭಾಷೆಗಳಲ್ಲಿ ಈ ಸಿನಿಮಾ ನಿರ್ಮಾಣ ಮಾಡಲಾಗುತ್ತಿದೆ. ಸಂದೇಶ್ ಪ್ರೊಡಕ್ಷನ್ಸ್ ಬ್ಯಾನರ್​ನಲ್ಲಿ ಮೂಡಿ ಬರುತ್ತಿರುವ 29ನೇ ಸಿನಿಮಾ ಇದು. ಚಿತ್ರಕ್ಕೆ ಅರ್ಜುನ್ ಜನ್ಯ ಅವರ ಸಂಗೀತ ಸಂಯೋಜನೆ, ಮಹೇಂದ್ರ ಸಿಂಹ ಕ್ಯಾಮರಾವರ್ಕ್, ದೀಪು ಎಸ್‌. ಕುಮಾರ್‌ ಸಂಕಲನ ಇದೆ.

ಇದನ್ನೂ ಓದಿ: 2023ರ ಸಂಭ್ರಮ: ಚಿತ್ರರಂಗದವರ ಹೊಸ ವರ್ಷಾಚರಣೆ ಚಿತ್ರಗಳಲ್ಲಿ

ಅದ್ಧೂರಿ ಸೆಟ್​ನಲ್ಲಿ ಘೋಸ್ಟ್ ಶೂಟಿಂಗ್: ಬೆಂಗಳೂರಿನ ಮಿನರ್ವ ಮಿಲ್​ನಲ್ಲಿ ನಿರ್ಮಿಸಲಾಗಿರುವ 15ಕ್ಕೂ ಅಧಿಕ ಸೆಟ್​​ಗಳಲ್ಲಿ 28 ದಿನಗಳ ಕಾಲ‌ ಮೊದಲ ಹಂತದ ಚಿತ್ರೀಕರಣ ಮಾಡಲಾಗಿದೆ. ಶಿವರಾಜ್​​ಕುಮಾರ್, ತೆಲುಗು ನಟ ಜಯರಾಮ್, ಸತ್ಯಪ್ರಕಾಶ್, ಪ್ರಶಾಂತ್ ನಾರಾಯಣನ್ ಸೇರಿ ಮುಂತಾದ ಕಲಾವಿದರು ಮೊದಲ ಹಂತದ ಚಿತ್ರೀಕರಣದಲ್ಲಿ ಭಾಗವಹಿಸಿದ್ದರು. ಕಲಾ ನಿರ್ದೇಶಕ ಮೋಹನ್ ಬಿ ಕೆರೆ ಮಾರ್ಗದರ್ಶನದಲ್ಲಿ ಸೆಟ್​​ಗಳು ನಿರ್ಮಾಣಗೊಂಡಿತ್ತು.

ಇದನ್ನೂ ಓದಿ: ದರ್ಶನ್​ ಅಭಿನಯದ 'ಕ್ರಾಂತಿ' ಟ್ರೈಲರ್ ಬಿಡುಗಡೆ ದಿನ ಫಿಕ್ಸ್‌ ​

ಹೊಸ ವರ್ಷಕ್ಕೆ ಶುಭಾಶಯ: ''ಈ ಹೊಸ ವರ್ಷ ಎಲ್ಲರಿಗೂ ಪ್ರೀತಿ, ಸಂತಸ, ಹೊಸ ಅವಕಾಶ ಹಾಗೂ ಆರೋಗ್ಯ ಆಯಸ್ಸು ತಂದು ಕೊಡಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ. ಸಮಸ್ತ ಕನ್ನಡ ಜನತೆಗೆ ಹೊಸ ವರ್ಷದ ಹಾರ್ಧಿಕ ಶುಭಾಶಯಗಳು'' ನಟ ಶಿವ ರಾಜ್​​ಕುಮಾರ್ ಟ್ವೀಟ್ ಮಾಡಿದ್ದಾರೆ. ​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.