ETV Bharat / entertainment

ಧರ್ಮಸ್ಥಳ, ಸುಬ್ರಹ್ಮಣ್ಯ ಕ್ಷೇತ್ರಕ್ಕೆ ಶಿವ ರಾಜ್​​ಕುಮಾರ್ ದಂಪತಿ ಭೇಟಿ

author img

By

Published : Dec 10, 2022, 12:39 PM IST

Updated : Dec 10, 2022, 2:12 PM IST

ನಟ ಶಿವ ರಾಜ್​ಕುಮಾರ್ ದಂಪತಿ ಕುಕ್ಕೆ ಸುಬ್ರಹ್ಮಣ್ಯ ಮತ್ತು ಧರ್ಮಸ್ಥಳಕ್ಕೆ ಭೇಟಿ ನೀಡಿದ್ದಾರೆ.

Shiva Rajkumar couple visits dakshina kannada temples
ದೇವಸ್ಥಾನಗಳಿಗೆ ಶಿವ ರಾಜ್​​ಕುಮಾರ್ ದಂಪತಿ ಭೇಟಿ

ಸುಬ್ರಹ್ಮಣ್ಯ ಕ್ಷೇತ್ರಕ್ಕೆ ಶಿವ ರಾಜ್​​ಕುಮಾರ್ ದಂಪತಿ ಭೇಟಿ

ಬೆಳ್ತಂಗಡಿ, ಸುಬ್ರಹ್ಮಣ್ಯ (ದಕ್ಷಿಣ ಕನ್ನಡ): ಕನ್ನಡ ಚಲನಚಿತ್ರ ನಟ ಶಿವ ರಾಜ್​ಕುಮಾರ್ ದಂಪತಿ ವಿವಿಧ ದೇವಸ್ಥಾನಗಳಿಗೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದ್ದಾರೆ.

ಶುಕ್ರವಾರ ಶ್ರೀ ಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯಕ್ಕೆ ಭೇಟಿ ನೀಡಿದ ಶಿವ ರಾಜ್​ಕುಮಾರ್ ಮತ್ತು ಪತ್ನಿ ಗೀತಾ ಅವರು ದೇವರ ದರ್ಶನ ಪಡೆದು ಪ್ರಸಾದ ಸ್ವೀಕರಿಸಿದರು. ಬಳಿಕ ಶ್ರೀ ಹೊಸಳಿಗಮ್ಮನ ದರ್ಶನ ಪಡೆದು ಪ್ರಸಾದ ಸ್ವೀಕರಿಸಿದರು. ಕುಕ್ಕೆ ಸಂಪುಟ ನರಸಿಂಹ ಸ್ವಾಮಿ ಮಠಕ್ಕೆ ಭೇಟಿ ನೀಡಿದ ಶಿವ ರಾಜ್​ಕುಮಾರ್ ಕುಟುಂಬ ಸ್ವಾಮೀಜಿಗಳನ್ನು ಭೇಟಿಯಾದರು. ಆ ವೇಳೆ, ದೇವಳದ ಸಮಿತಿಯವರು, ಅಧಿಕಾರಿಗಳು, ಸಿಬ್ಬಂದಿ ಉಪಸ್ಥಿತರಿದ್ದರು.

ಇದನ್ನೂ ಓದಿ: ಉಡುಪಿ ಕೃಷ್ಣ ಮಠಕ್ಕೆ ಭೇಟಿ ನೀಡಿದ 'ಸಿಂಹಪ್ರಿಯಾ'

ಬಳಿಕ ಶಿವ ರಾಜ್​ಕುಮಾರ್ ದಂಪತಿ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಆಗಮಿಸಿ ಮಂಜುನಾಥ ಸ್ವಾಮಿಯ ದರ್ಶನ ಪಡೆದರು. ಈ ವೇಳೆ ಪುತ್ರಿಯರಾದ ನಿರುಪಮಾ ರಾಜ್​ಕುಮಾರ್, ನಿವೇದಿತಾ ರಾಜ್​ಕುಮಾರ್ ಜೊತೆಗಿದ್ದರು.

Last Updated : Dec 10, 2022, 2:12 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.