ETV Bharat / entertainment

'ಯಶ್​ ಈಸ್​ ವಾವ್..'​: ಕೆಜಿಎಫ್​ ಸ್ಟಾರ್​ ಬಗ್ಗೆ ಶಾರುಖ್‌ ಖಾನ್​​ ಮೆಚ್ಚುಗೆಯ ನುಡಿ

author img

By

Published : Dec 18, 2022, 12:34 PM IST

ಟ್ವಿಟರ್​ ಬಳಕೆದಾರರೋರ್ವರು, ನೀವು ಕೆಜಿಎಫ್​​-2 ಸಿನಿಮಾ ನೋಡಿದ್ದೀರಾ?, ಯಶ್​​ ಬಗ್ಗೆ ಒಂದು ಪದದಲ್ಲಿ ಹೇಳಿ ಎಂದು ಶಾರುಖ್​ ಖಾನ್‌ಗೆ ಕೇಳಿದ್ದಾರೆ.

shahrukh khan compliments on Yash
ಯಶ್​ ಬಗ್ಗೆ ಶಾರುಖ್​ ಮೆಚ್ಚುಗೆ

ಕೆಜಿಎಫ್ ಚಾಪ್ಟರ್​ 1 ಮತ್ತು ಕೆಜಿಎಫ್ ಚಾಪ್ಟರ್​ 2 ​ಸಿನಿಮಾಗಳಲ್ಲಿನ ಅದ್ಭುತ ಅಭಿನಯದ ಮೂಲಕ ರಾಕಿಂಗ್​ ಸ್ಟಾರ್ ಯಶ್ ಭಾರತೀಯ ಚಿತ್ರರಂಗ ಮಾತ್ರವಲ್ಲ, ಇಡೀ ವಿಶ್ವಾದ್ಯಂತ ದೊಡ್ಡ ಹೆಸರು ಗಳಿಸಿದ್ದಾರೆ. ಪ್ರಪಂಚದ ಮೂಲೆಮೂಲೆಯಲ್ಲೂ ನಟನ​ ಹೆಸರು ಸದ್ದು ಮಾಡಿದೆ. ಕನ್ನಡಿಗರಿಗೆ ಸೀಮಿತವಾಗಿದ್ದ ಅಭಿಮಾನಿ ಬಳಗವೀಗ ಜಗದಗಲ ವಿಸ್ತರಿಸಿದೆ. ಅವರ ನಟನೆಗೆ ಸಿನಿಪ್ರಿಯರು, ವಿಮರ್ಶಕರು ಮಾತ್ರವಲ್ಲದೇ ಸೂಪರ್‌ ಸ್ಟಾರ್​​ಗಳೂ ಸಹ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇದೀಗ ಬಾಲಿವುಡ್ ಸೂಪರ್​ ಸ್ಟಾರ್​ ಶಾರುಖ್​ ಖಾನ್ ಸರದಿ.

ಬಾಲಿವುಡ್​​ ಚಿತ್ರರಂಗದ ಬಹುನಿರೀಕ್ಷಿತ ಪಠಾಣ್​​ ಚಿತ್ರದ ಬೇಷರಂ ರಂಗ್​​ ಹಾಡಿನ ವಿವಾದದ ಮಧ್ಯೆ ಶಾರುಖ್​​ ತಮ್ಮ ಫ್ಯಾನ್ಸ್​ ಜೊತೆ ಟ್ವಿಟರ್​​ನಲ್ಲಿ ಸಂವಾದ ನಡೆಸಿದರು. ASK SRK ಎಂಬ ಹ್ಯಾಷ್​ಟ್ಯಾಗ್​​ ಬಳಸಿ ಫ್ಯಾನ್ಸ್​ ಕೇಳಿದ ಪ್ರಶ್ನೆಗೆ ಶಾರುಖ್​​ ಉತ್ತರ ನೀಡಿದ್ದಾರೆ. ಟ್ವಿಟರ್​ ಬಳಕೆದಾರರೋರ್ವರು, ನೀವು ಕೆಜಿಎಫ್​​-2 ಸಿನಿಮಾ ನೋಡಿದ್ದೀರಾ?, ಯಶ್​​ ಬಗ್ಗೆ ಒಂದು ಪದದಲ್ಲಿ ಹೇಳಿ ಎಂದು ಪ್ರಶ್ನೆ ಕೇಳಿದ್ದಾರೆ. ಇದಕ್ಕೆ ಶಾರುಖ್​, 'ಯಶ್​ ಈಸ್​ ವಾವ್'​ ಎಂದು ಪ್ರತಿಕ್ರಿಯೆ ನೀಡಿದ್ದಾರೆ.

ಕೆಜಿಎಫ್ 2 ಸ್ಯಾಂಡಲ್​ವುಡ್ ಮಾತ್ರವಲ್ಲ, ಇಡೀ ಭಾರತೀಯ ಚಿತ್ರರಂಗದಲ್ಲೇ ದಾಖಲೆ ಬರೆದ ಚಿತ್ರ. ದೊಡ್ಡ ಮಟ್ಟದಲ್ಲಿ ಹಿಟ್ ಆಗಿ ಎಲ್ಲಾ ದಾಖಲೆಗಳನ್ನೂ ಧೂಳೀಪಟ ಮಾಡಿತ್ತು. ಕನ್ನಡವಲ್ಲದೇ ಹಿಂದಿ, ತೆಲುಗು, ತಮಿಳು, ಮಲಯಾಳಂನಲ್ಲೂ ಸಂಚಲನ ಮೂಡಿಸಿತ್ತು. 1,300 ಕೋಟಿ​ ರೂ ಕಲೆಕ್ಷನ್​ ಮಾಡಿದ ಹೆಗ್ಗಳಿಕೆ ಕೆಜಿಎಫ್ 2 ಚಿತ್ರದ್ದು. ಈ ಹಿರಿಮೆ ಹೆಚ್ಚಿಸುವಲ್ಲಿ ಇತ್ತೀಚೆಗೆ ತೆರೆಕಂಡ ಕಾಂತಾರ ಕೂಡ ಸಾಥ್ ನೀಡಿದೆ.

ಇದನ್ನೂ ಓದಿ: 700 ಅಭಿಮಾನಿಗಳ ಜೊತೆ ಯಶ್ ಸೆಲ್ಫಿ... ರಾಕಿಂಗ್ ಸ್ಟಾರ್ ಸರಳತೆಗೆ ಮೆಚ್ಚುಗೆ

ಈ ಹಿಂದೆ ನಿರೂಪಕ ಕರಣ್ ಜೋಹರ್ ಅವರ ಕಾಫಿ ವಿತ್ ಕರಣ್ ಚಾಟ್ ಶೋನಲ್ಲಿ ಯಶ್‌​ ಹೆಸರು ಪ್ರಸ್ತಾಪವಾಗಿತ್ತು. ನಟ ಶಾಹಿದ್ ಕಪೂರ್, ಯಶ್ ಬಗ್ಗೆ ಹಾಡಿ ಹೊಗಳಿದ್ದರು. ಶೋನಲ್ಲಿ, ಕರಣ್ ಜೋಹರ್ ಅವರು ಶಾಹಿದ್​​ರಲ್ಲಿ ನಂಬರ್​ ಒನ್​ ನಟ ಮತ್ತು ನಟಿ ಯಾರೆಂದು ಪ್ರಶ್ನೆ ಕೇಳುತ್ತಾರೆ. ಆ ಪ್ರಶ್ನೆಗೆ ನಟಿ ಕಿಯಾರಾ ಅಡ್ವಾನಿ ನಂಬರ್​ ಒನ್​ ಆ್ಯಕ್ಟ್ರೆಸ್​ ಎಂದು ಉತ್ತರಿಸುತ್ತಾರೆ. ಬಳಿಕ ನಂಬರ್​ ಒನ್​ ಆ್ಯಕ್ಟರ್​ ಬಗ್ಗೆ ನಾವು ಚರ್ಚೆ ನಡೆಸಬಹುದು. ಸದ್ಯಕ್ಕೆ ರಾಕಿ ಭಾಯ್ ಯಶ್​ ಎಂದು ಉತ್ತರಿಸಿದ್ದರು. ಇದನ್ನೂ ಓದಿ: ಕನ್ನಡದ ರಾಕಿ ಭಾಯ್ ಯಶ್​ ನಂಬರ್​ ಒನ್​ ನಟ: ಶಾಹಿದ್ ಕಪೂರ್

ಇನ್ನೂ ಚೇತರಿಕೆ ಕಾಣುತ್ತಿದ್ದ ಬಾಲಿವುಡ್​ಗೆ ಮತ್ತೊಮ್ಮೆ ಬಾಯ್ಕಾಟ್​ ಬಿಸಿ ತಾಗಿದೆ. ಶಾರುಖ್​ ಖಾನ್​​​ ಮತ್ತು ದೀಪಿಕಾ ಪಡುಕೋಣೆ ಅಭಿನಯದ ಪಠಾಣ್ ಸಿನಿಮಾ ಈಗ ವಿವಾದದ ಸುಳಿಯಲ್ಲಿ ಸಿಲುಕಿದೆ. ಬೇಶರಂ ರಂಗ್​ ಹಾಡು ರಿಲೀಸ್​ ಆಗಿದ್ದೇ ತಡ ಅದನ್ನು ಮೆಚ್ಚಿ ಕೊಂಡಾಡಿದವರು ಒಂದಿಷ್ಟು ಮಂದಿಯಾದರೆ, ಹಾಡಿನಲ್ಲಿ ನಟಿಯ ವೇಷಭೂಷಣ ಮತ್ತು ಕೇಸರಿ ಬಣ್ಣದ ಬಿಕಿನಿ ಬಗ್ಗೆ ವಿರೋಧ ವ್ಯಕ್ತಪಡಿಸಿದವರು ಮತ್ತೊಂದಿಷ್ಟು ಮಂದಿ. ಈ ಹಾಡಿಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದು, ಚಿತ್ರತಂಡ ಮಾತ್ರ ಸಕಾರಾತ್ಮಕವಾಗಿ ಮುಂದೆ ಸಾಗುತ್ತಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.