ETV Bharat / entertainment

ಶಾಹಿದ್​ ಕಪೂರ್ ಆ್ಯಕ್ಷನ್​- ಥ್ರಿಲ್ಲರ್​ ಚಿತ್ರ 'ಬ್ಲಡಿ ಡ್ಯಾಡಿ' ನೇರ ಓಟಿಟಿಯಲ್ಲಿ ಬಿಡುಗಡೆ

author img

By

Published : Apr 13, 2023, 1:12 PM IST

ನಟ ಶಾಹಿದ್​ ಕಪೂರ್ ಅಭಿನಯದ 'ಬ್ಲಡಿ ಡ್ಯಾಡಿ' ಚಿತ್ರ ಜೂನ್​ 9ರಂದು ನೇರ ಓಟಿಟಿಯಲ್ಲಿ ಬಿಡುಗಡೆಯಾಗಲಿದೆ.

Bloody Daddy
ಬ್ಲಡಿ ಡ್ಯಾಡಿ

ಬಾಲಿವುಡ್​ ನಟ ಶಾಹಿದ್​ ಕಪೂರ್​ ಅವರ ಮುಂಬರುವ ಆ್ಯಕ್ಷನ್​- ಥ್ರಿಲ್ಲರ್​ ಚಿತ್ರ 'ಬ್ಲಡಿ ಡ್ಯಾಡಿ' ನೇರ ಓಟಿಟಿ ಯಲ್ಲಿ ಬಿಡುಗಡೆಯಾಗಲಿದೆ ಎಂದು ಚಿತ್ರತಂಡ ತಿಳಿಸಿದೆ. ನಿನ್ನೆ (ಬುಧವಾರ) ಮುಂಬೈನಲ್ಲಿ ನಡೆದ ಅದ್ಧೂರಿ ಸಮಾರಂಭದಲ್ಲಿ ಜಿಯೋ ಸ್ಟುಡಿಯೋಸ್ ತಮ್ಮ ಮುಂಬರುವ ಚಲನಚಿತ್ರಗಳು ಮತ್ತು ವೆಬ್ ಸರಣಿಗಳ ಬಗ್ಗೆ ತಿಳಿಸಿತು. ಕಾರ್ಯಕ್ರಮದಲ್ಲಿ 'ಬ್ಲಡಿ ಡ್ಯಾಡಿ' ತಯಾರಕರು ತಮ್ಮ ಚಿತ್ರದ ಮೊದಲ ಪೋಸ್ಟರ್​​ ಅನ್ನು ಅನಾವರಣಗೊಳಿಸಿದರು. ಚಿತ್ರದಲ್ಲಿ ಜರ್ಸಿ ನಟನನ್ನು ಕೊಲೆಗಾರನ ಅವತಾರದಲ್ಲಿ ತೋರಿಸಲಾಗಿದೆ.

ಈ ವೇಳೆ ಸಿನಿಮಾದ ಕುರಿತು ಮಾತನಾಡಿದ ಆರ್​ಐಎಲ್​ ಮೀಡಿಯಾ ಮತ್ತು ಕಂಟೆಂಟ್​ ಬ್ಯುಸಿನೆಸ್​ ಅಧ್ಯಕ್ಷೆ ಜ್ಯೋತಿ ದೇಶ್​ಪಾಂಡೆ, "ನಾವು ಅತೀ ದೊಡ್ಡ ಸಿನಿಮಾವನ್ನು ಮಾಡುತ್ತಿದ್ದೇವೆ. ಅದು ಕೂಡ ಒಬ್ಬ ಸ್ಟಾರ್​ ನಟನ ಜೊತೆ, ಸ್ಟಾರ್​ ನಿರ್ದೇಶನ ಜೊತೆ. ಈ ಸಿನಿಮಾಗಾಗಿ ನಾವು ಸಾಕಷ್ಟು ಹಣವನ್ನು ಖರ್ಚು ಮಾಡಿದ್ದೇವೆ ಮತ್ತು ಚಿತ್ರವನ್ನು ನಾವು ಓಟಿಟಿಯಲ್ಲಿ ಬಿಡುಗಡೆ ಮಾಡಲು ನಿರ್ಧರಿಸಿದ್ದೇವೆ" ಎಂದು ತಿಳಿಸಿದರು. ಅಲಿ ಅಬ್ಬಾಸ್ ಜಾಫರ್ ನಿರ್ದೇಶನದ ಈ ಚಿತ್ರದಲ್ಲಿ ಸ್ಟಾರ್​ ನಟರಾದ ಶಾಹಿದ್ ಕಪೂರ್, ಸಂಜಯ್ ಕಪೂರ್ ಮತ್ತು ರೋನಿತ್ ರಾಯ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

ಬಳಿಕ ನಟ ಶಾಹಿದ್​ ಕಪೂರ್​ ಅವರು ಟೈಗರ್​ ಜಿಂದಾ ಹೈ ನಿರ್ದೇಶಕರ ಜೊತೆ ಕೆಲಸ ಮಾಡಿದ ಅನುಭವವನ್ನು ಹಂಚಿಕೊಂಡರು. "ಇದು ತುಂಬಾ ಮಜವಾಗಿತ್ತು. ನಾನು ಆಕ್ಷನ್ ಫಿಲ್ಮ್ ಮಾಡಲು ಹೆಚ್ಚು ಸಮಯವನ್ನು ತೆಗೆದುಕೊಂಡಿದ್ದೇನೆ ಮತ್ತು ಅಲಿಯೊಂದಿಗೆ ಕೆಲಸ ಮಾಡುವುದನ್ನು ನಿಜವಾಗಿಯೂ ಆನಂದಿಸಿದ್ದೇನೆ. ಅವರು ಎಲ್ಲವನ್ನೂ ಚೆನ್ನಾಗಿ ಅರ್ಥ ಮಾಡಿಕೊಳ್ಳುತ್ತಾರೆ. ಸಿನಿಮಾವು ಓಟಿಟಿಯಲ್ಲಿ ಖಂಡಿತವಾಗಿಯೂ ಅಬ್ಬರಿಸಲಿದೆ" ಎಂದರು. ನಂತರ ಅವರ ಮೊದಲಿನ ನೃತ್ಯದ ಅನುಭವವು ಆಕ್ಷನ್ ಕೊರಿಯೋಗ್ರಫಿಯನ್ನು ವೇಗವಾಗಿ ಅರ್ಥಮಾಡಿಕೊಳ್ಳಲು ಸಹಾಯ ಮಾಡಿದೆ ಎಂದು ಬಹಿರಂಗಪಡಿಸಿದರು.

ಇದನ್ನೂ ಓದಿ: ಕೊಲ್ಲೂರು ಮೂಕಾಂಬಿಕೆ ಆಶೀರ್ವಾದ ಪಡೆದ ಸಿಎಂ ಬೊಮ್ಮಾಯಿ, ಕಾಂತಾರ ಸ್ಟಾರ್​ ರಿಷಬ್ ಶೆಟ್ಟಿ

ಮುಂದುವರೆದು, "ಇದರಲ್ಲಿ ಡ್ಯಾನ್ಸ್​ ಜೊತೆ ಸಾಕಷ್ಟು ನೃತ್ಯ ಸಂಯೋಜನೆ ಇದೆ. ನಾನು 15ನೇ ವಯಸ್ಸಿನಿಂದಲೇ ಡ್ಯಾನ್ಸ್​ ಮಾಡಲು ಪ್ರಾರಂಭಿಸಿದ್ದರಿಂದ ಸಾಕಷ್ಟು ವಿಷಯಗಳನ್ನು ಇಂದಿಗೂ ತ್ವರಿತವಾಗಿ ನೆನಪಿಟ್ಟುಕೊಂಡಿದ್ದೇನೆ. ಅದು ನನಗೆ ಸಹಾಯ ಮಾಡಿತು. ನಾವು ಚಿತ್ರ ಮಾಡುವಾಗ, ದುರದೃಷ್ಟವಶಾತ್ ಕೋವಿಡ್‌ನಿಂದಾಗಿ ಸಾಕಷ್ಟು ಸಮಸ್ಯೆಗಳು ಆಗಿದ್ದವು. ಆ್ಯಕ್ಷನ್​ ಕೊರಿಯೋಗ್ರಾಫರ್ಸ್​ ಯಾರೂ ಇಲ್ಲಿಯವರಲ್ಲ. ಕೆಲವರು ಲಂಡನ್​, ಇನ್ನು ಕೆಲವರು ಹಾಲಿವುಡ್​ನಿಂದ ಬಂದವರಾಗಿದ್ದರು. ಅವರು ಸಾಕಷ್ಟು ರಿಹರ್ಸಲ್​ಗಳನ್ನು ತೆಗೆದುಕೊಳ್ಳುತ್ತಿದ್ದರು. ಆದರೆ ನಾನು ಸಾಕಷ್ಟು ನೃತ್ಯ ಮಾಡಿರುವುದರಿಂದ ವೇಗವಾಗಿ ಎಲ್ಲವನ್ನೂ ಅರ್ಥ ಮಾಡಿಕೊಂಡೆ" ಎಂದು ತಿಳಿಸಿದರು.

ಬುಧವಾರ ಬಿಡುಗಡೆಗೊಳಿಸಿದ 'ಬ್ಲಡಿ ಡ್ಯಾಡಿ'​ ಚಿತ್ರದ ಮೊದಲ ನೋಟವನ್ನು ನಟ ಶಾಹಿದ್​ ಕಪೂರ್​ ತಮ್ಮ ಇನ್​ಸ್ಟಾ ಖಾತೆಯಲ್ಲಿ ಪೋಸ್ಟ್​ ಹಾಕಿಕೊಂಡಿದ್ದಾರೆ. ಅದಕ್ಕೆ "ಶೀಘ್ರದಲ್ಲೇ ಬ್ಲಡಿ ಡ್ಯಾಡಿ ಟೀಸರ್​ ಬಿಡುಗಡೆಯಾಗಲಿದೆ" ಎಂದು ಕ್ಯಾಪ್ಶನ್​ ಬರೆದುಕೊಂಡಿದ್ದಾರೆ. ಚಿತ್ರವು ಇದೇ ಜೂನ್​ 9 ರಂದು ಓಟಿಟಿಯಲ್ಲಿ ರಿಲೀಸ್​ ಆಗಲಿದೆ.

ಇದನ್ನೂ ಓದಿ: ಶಾಕುಂತಲಂ ಬಿಡುಗಡೆಗೆ ಕ್ಷಣಗಣನೆ: ವ್ಯಾಪಕ ಪ್ರಚಾರ ಬೆನ್ನಲ್ಲೇ ನಟಿ ಸಮಂತಾ ಅಸ್ವಸ್ಥ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.