ETV Bharat / entertainment

"ನಾನು ಅವರಿಂದ ಕಲಿಯಬೇಕಿದೆ" ಎಂದು ಕಿಂಗ್​ ಖಾನ್​ ಹೇಳಿದ್ದು ಯಾರ ಬಗ್ಗೆ?

author img

By

Published : Feb 15, 2023, 4:43 PM IST

ಪಠಾಣ್​ ಸಿನಿಮಾದ ಹಾಡಿಗೆ ರೀಲ್ಸ್​ ಮಾಡಿದ ವಿರಾಟ್​, ಜಡೇಜಾ - ಕಿಂಗ್​ ಖಾನ್​ ನಿಂದಲೇ ಪ್ರಶಂಸೆ - ನಾಗ್ಪುರದ ಮೊದಲ ಟೆಸ್ಟ್​ ಪಂದ್ಯದ ಡ್ರಿಂಕ್ಸ್​ ಬ್ರೇಕ್​ನಲ್ಲಿ ಮಾಡಿದ್ದ ಡ್ಯಾನ್ಸ್​ ವೈರಲ್​

shah-rukh-khan-reacts-to-virat-kohli-and-ravindra-jadejas-jhoome-jo-pathaan-video
ನಾನು ಅವರಿಂದ ಕಲಿಯಬೇಕಿದೆ

ಮುಂಬೈ: ರನ್​ ಮಷಿನ್​ ಆನ್​ ಫೀಲ್ಡ್​ನಲ್ಲಿ ಎಷ್ಟು ಅಗ್ರೆಸಿವ್​ ಆಗಿರುತ್ತಾರೂ, ಅಷ್ಟೇ ಜಾಲಿಯಾಗಿರುತ್ತಾರೆ. ಫೀಲ್ಡಿಂಗ್​ ಮಾಡುವಾಗ ನೆರೆದಿರುವ ಪ್ರೇಕ್ಷಕರ ಜೊತೆ ಸಂವಹನ ಮಾಡುತ್ತಿರುತ್ತಾರೆ. ಅವರ ಈ ಜಾಲಿ ಮೂಡ್​ ಹೆಚ್ಚಿನವರು ಇಷ್ಟ ಪಡುತ್ತಾರೆ. ಎದುರಾಳಿ ತಂಡದ ಆಟಗಾರರೊಂದಿಗೂ ಹಾಸ್ಯಗಳನ್ನು ಮಾಡುವುದು ಕೆಲವೊಮ್ಮೆ ವೈರಲ್​ ಆಗಿದೆ. ಈಗ ಪಠಾಣ್​ ಸಿನಿಮಾ ಸಂಬಂಧ ವಿರಾಟ್​ ಶಾರುಖ್​ ಖಾನ್​ರಿಂದ ಮೆಚ್ಚುಗೆ ಪಡೆದಿದ್ದಾರೆ.

ಹೌದು..ಆಸ್ಟ್ರೇಲಿಯಾ ಭಾರತದ ಪ್ರವಾಸದಲ್ಲಿದ್ದು ಬಾರ್ಡರ್ ​ಗವಾಸ್ಕರ್​ ಟ್ರೋಪಿ ಟೆಸ್ಟ್​ ಪಂದ್ಯ ನಡೆಯುತ್ತಿದೆ. ಮೊದಲ ಟೆಸ್ಟ್​ ಪಂದ್ಯ ಮಹಾರಾಷ್ಟ್ರದ ನಾಗ್ಪುರದಲ್ಲಿರುವ ವಿದರ್ಭ ಕ್ರೀಡಾಂಗಣದಲ್ಲಿ ಫೆಬ್ರವರಿ 9ಕ್ಕೆ ಆರಂಭವಾಗಿ 11ಕ್ಕೆ ಮುಕ್ತಾಯವಾಗಿತ್ತು. ಈ ಪಂದ್ಯದ ಡ್ರಿಂಕ್ಸ್​ ಬ್ರೇಕ್​ ಸಮಯದಲ್ಲಿ ವಿರಾಟ್​ ಮಾಡಿದ ಒಂದು ಡ್ಯಾನ್ಸ್​ ಈಗ ವೈರಲ್​ ಆಗಿದ್ದು, ಶಾರುಖ್​ ಖಾನ್​ ಅವರಿಂದ ಮೆಚ್ಚುಗೆ ವ್ಯಕ್ತವಾಗಿದೆ.

ನಾರ್ಥ್​ನ ಸಿನಿಮಾ ಇಂಡಸ್ಟ್ರೀ ಸತತ ಫ್ಲಾಫ್​ ಆಗುತ್ತಿದ್ದ ವೇಳೆ ಬಾಲಿವುಡ್​ನ ಬಾದ್ ಶಾ ಎಂದೇ ಖ್ಯಾತಿಯ ಶಾರುಖ್ ಖಾನ್ ಅವರ ಪಠಾಣ್​ ಗೆಲುವು ಸಾಧಿಸುವ ಮೂಲಕ ಮತ್ತೊಮ್ಮೆ ಹಿಂದಿ ಸಿನಿಮಾದಲ್ಲಿ ತಮ್ಮ ಅಧಿಪತ್ಯ ಸ್ಥಾಪಿಸಿದ್ದಾರೆ. ಶಾರುಖ್ ಖಾನ್ 'ಪಠಾಣ್' ಚಿತ್ರದ ಮೂಲಕ ವಿಶ್ವದಾದ್ಯಂತ ಕಳೆದುಹೋದ ಸ್ಟಾರ್‌ಡಮ್ ಅನ್ನು ಮರಳಿ ಪಡೆದಿದ್ದಾರೆ.

ಕಿಂಗ್ ಖಾನ್ ಇದೀಗ 'ಪಠಾಣ್' ಮೂಲಕ ವಿಶ್ವದಾದ್ಯಂತ ಸದ್ದು ಮಾಡುತ್ತಿದ್ದು, ಬಾಕ್ಸ್ ಆಫೀಸ್​ನಲ್ಲಿ 950 ಕೋಟಿ ರೂ.ಗೂ ಹೆಚ್ಚು ಗಳಿಸಿ ಮುನ್ನುಗ್ಗುತ್ತಿದೆ. ಪಠಾಣ್​ ಚಿತ್ರ ಜನವರಿ 25 ರಂದು ಬಿಡುಗಡೆಯಾಗಿದ್ದು, ಗಳಿಕೆಯಲ್ಲಿ ಹಳೆ ದಾಖಲೆಗಳನ್ನು ಪುಡಿಗಟ್ಟಿ ಹೊಸ ಇತಿಹಾಸ ಸೃಷ್ಟಿಸುತ್ತಿದೆ. ಬಿಡುಗಡೆಗೂ ಮುನ್ನ ಹಲವಾರೂ ಟೀಕೆ ಹಾಗೂ ಬೈಕಾಟ್​ಗೆ ಒಳಗಾದರೂ, ತೆರೆಕಂಡ ನಂತರ ಜನರ ಮೆಚ್ಚುಗೆಗೆ ಪಾತ್ರವಾಗಿದೆ. ಶಾರುಖ್ ಖಾನ್ ಅವರ ಅಭಿಮಾನಿಗಳು 'ಪಠಾಣ್' ಚಿತ್ರದ ಆಕ್ಷನ್ ಮತ್ತು ಹಾಡುಗಳನ್ನು ತೀವ್ರವಾಗಿ ಫೀದಾ ಆಗಿದ್ದಾರೆ. ಸಿನಿಮಾದ ಹಾಡುಗಳು ರೀಲ್​ಗಳಲ್ಲಿ ಹೆಚ್ಚಾಗಿ ಕಂಡುಬರುತ್ತಿದೆ.

ಬಾರ್ಡರ್​ ಗವಾಸ್ಕರ್​ ಟ್ರೋಫಿಯ ವಿರಾಮದ ನಡುವೆ ವಿರಾಟ್​ ಕೊಹ್ಲಿ ಮತ್ತು ರವೀಂದ್ರ ಜಡೇಜಾ ಅವರು ಮಾಡಿರುವ ರೀಲ್​ ವೈರಲ್​ ಆಗಿದ್ದು ಇದಕ್ಕೆ ಪಠಾಣ್​ ಹೀರೋ ಶಾರುಖ್​ ಪ್ರತಿಕ್ರಿಯಿಸಿದ್ದಾರೆ. 'ಜೂಮೇ ಜೋ ಪಠಾಣ್' ಎಂಬ ಹಾಡಿನ ಹುಕ್ಅಪ್ ಸ್ಟೆಪ್ಸ್ ಇಬ್ಬರು ರೀಲ್ಸ್​ ಮಾಡಿದ್ದು, ಹೆಚ್ಚು ಶೇರ್​ ಆಗಿದೆ. ಇಬ್ಬರು ಡ್ರಿಂಕ್ಸ್​ ಬ್ರೇಕ್​ನಲ್ಲಿ ಈ ಹಾಡಿಗೆ ಸ್ಟೆಪ್​ ಹಾಕಿದ್ದಾರೆ. ಇದೀಗ ವೈರಲ್ ಆಗಿರುವ ಈ ವಿಡಿಯೋದಲ್ಲಿ ವಿರಾಟ್ - ಜಡೇಜಾ ಡ್ಯಾನ್ಸ್ ನೋಡಿ ಶಾರುಖ್ ಖಾನ್ ತಮ್ಮ ಪ್ರತಿಕ್ರಿಯೆ ನೀಡಿದ್ದಾರೆ. ಈ ವಿಡಿಯೋವನ್ನು ಸ್ವತಃ ಶಾರುಖ್ ಖಾನ್ ಶೇರ್ ಮಾಡಿದ್ದಾರೆ.

ನನಗಿಂತ ಉತ್ತಮವಾಗಿ ಮಾಡಿದ್ದಾರೆ: ಸಾಮಾಜಿಕ ಜಾಲತಾಣದಲ್ಲಿ ಆಕ್ಟಿವ್​ ಇರುವ ಶಾರುಖ್​ ಖಾನ್​ ತಮ್ಮ ಅಭಿಮಾನಿ ಇಬ್ಬರಯ ಶೇರ್​ ಮಾಡಿಕೊಂಡಿದ್ದ ವಿರಾಟ್​ ಮತ್ತು ಜಡೇಜಾರ ಡ್ಯಾನ್ಸ್​ನ ವಿಡಿಯೋವನ್ನು ತಮ್ಮ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ವೈರಲ್​ ಆದ ವಿಡಿಯೋವನ್ನು ಶೇರ್​ ಮಾಡಿಕೊಂಡಿರುವ ಕಿಂಗ್​ ಖಾನ್​ "ನನಗಿಂತ ಉತ್ತಮವಾಗಿ ಮಾಡುತ್ತಿದ್ದಾರೆ!! ಅದನ್ನು ವಿರಾಟ್ ಮತ್ತು ಜಡೇಜಾ ಅವರಿಂದ ಕಲಿಯಬೇಕು!!!" ಎಂದು ಬರೆದುಕೊಂಡಿದ್ದಾರೆ.

ಪಠಾಣ್ ಭರ್ಜರಿ ಕಲೆಕ್ಷನ್​: ಪಠಾಣ್ ಸಿನಿಮಾ ಬಿಡುಗಡೆಯಾಗಿ 22 ದಿನ ಕಳೆದರೂ ಬಾಕ್ಸ್​ ಆಫೀಸ್​ನಲ್ಲಿ ಕಲೆಕ್ಷನ್​ ಜೋರಾಗಿಯೇ ಮಾಡುತ್ತಿದೆ. ಬರೂಬ್ಬರಿ 1,000 ಕೋಟಿ ಕಲೆಕ್ಷನ್​​ನತ್ತ​ ಸಿನಿಮಾ ದಾಪುಗಾಲು ಹಾಕುತ್ತಿದೆ. ಈ ವರೆಗೆ ಸುಮಾರು 950 ಕೋಟಿಗೂ ಹೆಚ್ಚು ಕಲೆಕ್ಷನ್​ ಮಾಡಿದೆ. ದೇಶದಲ್ಲಿ 500 ಕೋಟಿ ಗಡಿ ದಾಟಿದೆ.

ಇದನ್ನೂ ಓದಿ: ಪ್ರೇಮಿಗಳ ದಿನಕ್ಕೆ ಉಡುಗೊರೆ ನೀಡಿದ 'ಡ್ರೀಮ್​ ಗರ್ಲ್​ 2' ಚಿತ್ರತಂಡ; ಏನಿದು ಪಠಾಣ್​ ಟ್ವಿಸ್ಟ್?

ETV Bharat Logo

Copyright © 2024 Ushodaya Enterprises Pvt. Ltd., All Rights Reserved.